ಮಾಡುವ ವಿಧಾನ
ಒಂದು ಬೌಲ್ಗೆ ಮೊಸರು, ಉಪ್ಪು, ಅರಿಶಿನ, ಮೆಣಸಿನ ಪುಡಿ, ಬಿರಿಯಾನಿ ಮಸಾಲೆ ಅಥವಾ ಗರಂ ಮಸಾಲೆ, ಮೆಣಸಿನ ಕಾಯಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಲಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅನಂತರ ಅದಕ್ಕೆ ಕೋಳಿ ಮಾಂಸ ಹಾಕಿ 2 ಗಂಟೆ ಇಡಿ.
ಅನಂತರ ಬಾಣಲೆಗೆ ಸ್ವಲ್ಲ ಎಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಅದಕ್ಕೆ ಸಣ್ಣದಾಗಿ ಹೆಚ್ಚಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಫ್ರೈ ಮಾಡಿದ ಈರುಳ್ಳಿಯನ್ನು ಬದಿಗಿಡಿ.
ಬಾಸುಮತಿ ಅಕ್ಕಿಯನ್ನು 30 ನಿಮಿಷ ನೆನೆಸಿಡಿ. ಅನಂತರ ಕುದಿಯುವ ನೀರಿಗೆ ಅಕ್ಕಿಯನ್ನು ಹಾಕಿ. ಜತೆಗೆ ಸ್ವಲ್ಪ ಉಪ್ಪು, ಸ್ವಲ್ಪ ತುಪ್ಪ, ಚೆಕ್ಕೆ ಲವಂಗವನ್ನು ಅಕ್ಕಿ ಜತೆ ಹಾಕಿ. ಅನ್ನ ಹೆಚ್ಚು ಬೇಯದಂತೆ ನೋಡಿಕೊಳ್ಳಿ.
ಒಂದು ಪಾನ್‌ನಲ್ಲಿ ಸ್ವಲ್ಪ ಎಣ್ಣೆ, ಫ್ರೈ ಮಾಡಿದ ಈರುಳ್ಳಿ, ತೆಗೆದುಕೊಂಡು ಅದಕ್ಕೆ ಮೊದಲೇ ಬೆರೆಸಿಟ್ಟ ಮಾಂಸವನ್ನು ಹಾಕಿ ಚೆನ್ನಾಗಿ ಕುದಿಸಿ.
ಒಂದು ಮಡಿಕೆಯಲ್ಲಿ ಅನ್ನ ಹಾಕಿ, ಅದರ ಮೇಲೆ ಕೇಸರಿ, ಅದರ ಮೇಲೆೆ ಫ್ರೈ ಮಾಡಿದ ಈರುಳ್ಳಿ, ತುಪ್ಪ ಹರಡಬೇಕು. ಅನಂತರ ಅದರ ಮೇಲೆ ಕೋಳಿ ಗ್ರೇವಿ ಹಾಕಿ. ಅದರ ಮೇಲೆ ಮತ್ತೆ ಅನ್ನ ಹಾಕಬೇಕು. ಅದರ ಹೊಗೆ ಹೊರಗೆ ಹೋಗದಂತೆ ಮಡಕೆಯನ್ನು ಬಿಗಿಯಾಗಿ ಕಟ್ಟಬೇಕು. ಹೀಗೆ ತಯಾರಾಗುತ್ತೆ ರುಚಿಯಾದ ಹೈದರಾಬಾದ್ ಬಿರಿಯಾನಿ.