ಹಲಸಿನ ಢೋಕ್ಲಾ
Team Udayavani, Jun 29, 2019, 5:00 AM IST
ಢೋಕ್ಲಾ ಒಂದು ಜನಪ್ರಿಯ ಗುಜರಾತಿ ತಿಂಡಿ – ಇದನ್ನು ಕಡ್ಲೆ ಹಿಟ್ಟಿನಿಂದ ಮಾಡುತ್ತಾರೆ – ಹಲವರಿಗೆ ಕಡಲೆ ಹಿಟ್ಟು ತಿಂದರೆ ಸ್ವಲ್ಪ ತ್ರಾಸ ಆಗುತ್ತದೆ . ಈ ಢೋಕ್ಲಾ ವನ್ನು ನಮ್ಮ ಮೆಚ್ಚಿನ ಹಲಸು ಮತ್ತು ರವೆ ಉಪಯೋಗಿಸಿ ಮಾಡಬಹುದು.
••ಹಲಸಿನ ಕಾಯಿ ಪಲ್ಪ್ – 1 ಕಪ್
••ಗೋಧಿ ರವ ( ಸಣ್ಣದು ) – 1 ಕಪ್
••ಮೊಸರು – 1 ಕಪ್
••ನೀರು – ಒಂದು ಕಪ್
••ಹಸಿ ಮೆಣಸು – 2 – 3
••ಶುಂಠಿ – ಅರ್ಧ ಇಂಚು
••ಅರಸಿನ ಪುಡಿ – ಅರ್ಧ ಚಮಚ
••ನಿಂಬೇ ರಸ – 2 ದೊಡ್ಡ ಚಮಚ
••ಈನೋ(Eno) – ಅರ್ಧ ಚ
••ಒಗ್ಗರಣೆಗೆ : ಸಾಸಿವೆ , ಉದ್ದಿನ ಬೇಳೆ , ಉಪ್ಪು ಜೀರಿಗೆ, ಎಣ್ಣೆ ಮತ್ತು ಇಂಗು.ಮಾಡುವ ವಿಧಾನ
ಹಲಸಿನ ಕಾಯಿ ಪಲ್ಪ್ಗೆ ಹಸಿ ಮೆಣಸಿನಕಾಯಿ, ಶುಂಠಿ, ಮೊಸರು ಸೇರಿಸಿ ಮಿಕ್ಸಿಯಲ್ಲಿ ಸ್ವಲ್ಪ ತಿರುವಬೇಕು. ಇದನ್ನು ಒಂದು ಪಾತ್ರೆಗೆ ಹಾಕಿರಿ. ಈ ಮಿಶ್ರಣಕ್ಕೆ ಈನೋ ಮತ್ತು ನಿಂಬೆ ರಸ, ಒಗ್ಗರಣೆ ಹೊರತುಪಡಿಸಿ ಇತರ ಸಾಮಗ್ರಿಗಳನ್ನು ಸೇರಿಸಿ ಮಿಶ್ರ ಮಾಡಿ.
ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು – ಒಂದು ಬಟ್ಟಲಿಗೆ ಸ್ವಲ್ಪ ಎಣ್ಣೆ / ತುಪ್ಪ ಹಚ್ಚಿ ನೀರು ಕುದಿಯುವಾಗ -ಈನೋ ಮತ್ತು 1 ದೊಡ್ಡ ಚಮಚ ನಿಂಬೇರಸ ಮಿಶ್ರಣವನ್ನು ಹಿಟ್ಟಿನ ಮೇಲೆ ಹುಯ್ಯಿರಿ. ತಟ್ಟೆ ಯನ್ನು ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು 15 ನಿಮಿಷ ಬೆಂಕಿಯಲ್ಲಿಡಿ. ಒಂದು ಚೂರಿಯನ್ನು ಹಾಕಿ ಬೆಂದಿದೆಯೋ ಎಂದು ನೋಡಿರಿ. ಬೆಂಕಿಯಿಂದ ಇಳಿಸಿ 5 ನಿಮಿಷ ತಣಿಯಲು ಬಿಡಿರಿ. ಅನಂತರ ಇನ್ನೊಂದು ತಟ್ಟೆಗೆ ಅಡಿಮೇಲೆ ಮಾಡಿ ಹಾಕಿ. ನಂತರ ಅದನ್ನು ಕತ್ತರಿಸಿರಿ. ನಿಂಬೆ ರಸಕ್ಕೆ ಸ್ವಲ್ಪ ನೀರು ಸೇರಿಸಿ ಧೋಕ್ಲಾದ ಮೇಲೆ ಹುಯ್ಯಿರಿ. ಒಗ್ಗರಣೆ ಮಾಡಿ ಅದನ್ನು ಢೋಕ್ಲಾದ ಮೇಲೆ ಹೊಯ್ದು – ಮೇಲಿಂದ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿರಿ. ಹಲಸಿನ ಕಾಯಿ ಢೋಕ್ಲಾ ತಯಾರ್.
••••ನಳಿನಿ ಮಾಯಿಲಂಕೋಡಿ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.