ಮೂಂಗ್ ದಾಲ್ ಬರ್ಫಿ
Team Udayavani, Aug 7, 2017, 10:10 AM IST
ಬೇಕಾಗುವ ಸಾಮಗ್ರಿ:
ಒಂದು ಕಪ್ ನೆನೆಸಿದ ಹೆಸರುಬೇಳೆ, 1 ಕಪ್ ತುಪ್ಪ, 1 ಕಪ್ ಸಕ್ಕರೆ, 50 ಗ್ರಾಂ ಖೋವಾ, 2 ಚಿಟಿಕೆ ಏಲಕ್ಕಿ ಪುಡಿ, 4 ಚಮಚ ರೋಸ್ಟೆಡ್ ಬಾದಾಮಿ ಚೂರು, ತುಸು ಬೆಳ್ಳಿ ರೇಕು.
ತಯಾರಿಸುವ ವಿಧಾನ:
ನೆನೆಸಿದ ಬೇಳೆಯನ್ನು (ಅದಷ್ಟೂ ನೀರು ಬೆರೆಸದೆ) ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಬೇಳೆ ಹಾಕಿ ನಿಧಾನವಾಗಿ ಬಾಡಿಸಿ. ಈಗ ಅದೇ ಬಾಣಲೆಗೆ ಖೋವಾ ಹಾಕಿ, ಅದನ್ನು ಬೆಚ್ಚಗಾಗುವಂತೆ ಬಾಡಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ, ನಂತರ ಒಂದೆಳೆ ಸಕ್ಕರೆ ಪಾಕ ತಯಾರಿಸಿ ಇದನ್ನು ಸಿದ್ಧಪಡಿಸಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ. ಚೆನ್ನಾಗಿ ಬೆರೆತ ಮಿಶ್ರಣವನ್ನು ತುಪ್ಪ ಸವರಿದ ಟ್ರೇಗೆ ಹಾಕಿ ಸಮವಾಗಿ ಹರಡಿ. ನಂತರ ಬೆಳ್ಳಿ ರೇಕು, ಬಾದಾಮಿ ಚೂರುಗಳನ್ನು ಹಾಕಿ
ಡೈಮಂಡ್ ಆಕಾರದಲ್ಲಿ ಕತ್ತರಿಸಿ. ಈಗ ಮೂಂಗ್ ದಾಲ್ ಬರ್ಫಿ ರೆಡಿ.
ಅನಿತಾ ಗಣೇಶ್, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.