ಅಡುಗೆಗೆ ಬೇಕು, “ದೊಣ್ಣೆ ಮೆಣಸಿನ’ಅಪ್ಪಣೆ!
Team Udayavani, Sep 6, 2017, 11:05 AM IST
ಎಲ್ಲ ಕಾಲಗಳಲ್ಲೂ ಲಭ್ಯವಿರುವ, ಎಲ್ಲ ತರಕಾರಿಗಳೊಡನೆ ಹೊಂದಿಕೊಳ್ಳುವ ತರಕಾರಿಯಿದು. ರುಚಿಯಾದ ದೊಣ್ಣೆಮೆಣಸಿನಕಾಯಿಯಿಂದ ಸುಲಭವಾಗಿ ತಯಾರಿಸಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ…
ದೊಣ್ಣೆಮೆಣಸಿನಕಾಯಿ ಮಸಾಲೆ
ಬೇಕಾದ ಸಾಮಗ್ರಿ : ಕತ್ತರಿಸಿದ ದೊಣ್ಣೆಮೆಣಸಿನಕಾಯಿ-3 ಕಪ್, ಕತ್ತರಿಸಿದ ಈರುಳ್ಳಿ- 1/2 ಕಪ್, ಕತ್ತರಿಸಿದ ಟೊಮೇಟೊ- 1/4 ಕಪ್, ಹಸಿಮೆಣಸಿನಕಾಯಿ- 4, ತೆಂಗಿನಕಾಯಿ ತುರಿ- 1/2 ಕಪ್, ಗರಂ ಮಸಾಲೆ- 3 ಚಮಚ, ದಾಲಿcನ್ನಿ (ಚೆಕ್ಕೆ)- 3-4, ಜೀರಿಗೆ- 2 ಚಮಚ, ಹುರಿಗಡಲೆ- 4 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- 1/4 ಕಪ್, ಎಣ್ಣೆ- 1/4 ಕಪ್, ಸಾಸಿವೆ- 1 ಚಮಚ, ತುಪ್ಪ- 3 ಚಮಚ, ಉಪ್ಪು- ರುಚಿಗೆ ತಕ್ಕಷು
ತಯಾರಿಸುವ ವಿಧಾನ: ತೆಂಗಿನಕಾಯಿ ತುರಿ, ಗರಂ ಮಸಾಲೆ, ಚಕ್ಕೆ, ಜೀರಿಗೆ, ಹುರಿಗಡಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಮಸಾಲೆ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ನಂತರ ದೊಣ್ಣೆಮೆಣಸಿನಕಾಯಿ ಹೋಳುಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಬೇಯಿಸಿ. ಈ ಮಿಶ್ರಣಕ್ಕೆ, ತಯಾರಿಸಿಟ್ಟುಕೊಂಡ ಮಸಾಲೆ, ತುಪ್ಪ, ಉಪ್ಪು ಸೇರಿಸಿ ಕುದಿಸಿ. ಒಲೆಯಿಂದ ಕೆಳಗಿರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ದೊಣ್ಣೆಮೆಣಸಿನಕಾಯಿ ಮಸಾಲೆ ರೆಡಿ. ಚಪಾತಿಯೊಂದಿಗೆ ಸವಿಯಲು ಇದು ಸೂಪರ್ ಕಾಂಬಿನೇಶನ್
ತುಂಬುಗಾಯಿ
ಬೇಕಾದ ಸಾಮಗ್ರಿ: ದೊಣ್ಣೆಮೆಣಸಿನಕಾಯಿ- 5-6, ಆಲೂಗಡ್ಡೆ-2, ತೊಗರಿಬೇಳೆ-1/2 ಕಪ್, ಹಸಿಮೆಣಸಿನಕಾಯಿ- 3-4, ತೆಂಗಿನಕಾಯಿ ತುರಿ- 1 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು- 1/4 ಕಪ್, ಅರಿಶಿನ- ಚಿಟಿಕೆ, ಇಂಗು-1/4 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 1/2 ಕಪ್, ಸಾಸಿವೆ- 1 ಚಮಚ
ತಯಾರಿಸುವ ವಿಧಾನ: ಆಲೂಗಡ್ಡೆಗಳನ್ನು ಬೇಯಿಸಿ ಮಸೆದಿಡಿ. ತೊಗರಿಬೇಳೆಯನ್ನು ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗು- ಅರಿಶಿನ ಸೇರಿಸಿ ಒಗ್ಗರಣೆ ಮಾಡಿ, ಒಗ್ಗರಣೆಗೆ ಹಸಿಮೆಣಸಿನಕಾಯಿ, ಬೇಯಿಸಿದ ತೊಗರಿಬೇಳೆ, ಮಸೆದ ಆಲೂಗಡ್ಡೆ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕಲಕಿ, ಮಸಾಲೆ ತಯಾರಿಸಿ, ಒಲೆಯಿಂದ ಕೆಳಗಿರಿಸಿ. ದೊಣ್ಣಮೆಣಸಿನಕಾಯಿಗಳ ತೊಟ್ಟು ತೆಗೆದು, ಒಳಗಡೆ ಇರುವ ಬೀಜಗಳನ್ನು ತೆಗೆದಿರಿಸಿ. ನಂತರ ತಯರಿಸಿದ ಮಸಾಲೆ ತುಂಬಿ, ಇಡ್ಲಿ ಸ್ಟ್ಯಾಂಡ್‌ನಲ್ಲಿರಿಸಿ, ಹತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ, ರುಚಿಯಾದ ದೊಣ್ಣೆಮೆಣಸಿನಕಾಯಿ ತುಂಬುಗಾಯಿ ರೆಡಿ.
“ದೊಣ್ಣೆ’ ಕಟ್ಲೆಟ್
ಬೇಕಾದ ಸಾಮಗ್ರಿ: ದೊಣ್ಣೆಮೆಣಸಿನಕಾಯಿ ಹೋಳುಗಳು-2 ಕಪ್, ಆಲೂಗಡ್ಡೆ-2, ಕತ್ತರಿಸಿದ ಈರುಳ್ಳಿ-1/2 ಕಪ್, ಅಚ್ಚ ಖಾರದ ಪುಡಿ-2
ಚಮಚ, ಅಕ್ಕಿ ಹಿಟ್ಟು-1 ಕಪ್, ಗರಂ ಮಸಾಲೆ-3 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/4, ಕತ್ತರಿಸಿದ ಪುದಿನಾ ಸೊಪ್ಪು-1/4 ಕಪ್, ಎಣ್ಣೆ-1/2 ಕಪ್, ರಸ್ಕ್ ಪುಡಿ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಈರುಳ್ಳಿ ಹಾಗೂ ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ, ಗರಂ ಮಸಾಲೆ, ಮಸೆದ ಆಲೂ, ಖಾರದ ಪುಡಿ, ಉಪ್ಪು, ಅಕ್ಕಿ ಹಿಟ್ಟು, ಕೊತ್ತಂಬರಿ, ಪುದಿನಾ, ರಸ್ಕ್ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ತೆಗೆದು, ವಡೆಯ ಆಕಾರದಲ್ಲಿ
ತಟ್ಟಿ. ಎಣ್ಣೆ ಸವರಿದ ತವಾದ ಮೇಲೆ, ಎರಡೂ ಬದಿಗಳನ್ನು ಹೊಂಬಣ್ಣ ಬರುವವರೆಗೆ ಬೇಯಿಸಿ, ಇಲ್ಲವೇ ಕರಿಯಿರಿ. ಈಗ ಗರಿಗರಿಯಾದ ದೊಣ್ಣೆ ಮೆಣಸಿನಕಾಯಿ ಕಟ್ಲೆಟ್ ತಯಾರು.
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.