ಸ್ವಾದಿಷ್ಟ ಪನ್ನೀರ್ ಖೀರ್
Team Udayavani, Mar 9, 2019, 7:44 AM IST
ಪನ್ನೀರ್‌ನ ಗ್ರೇವಿ, ಟಿಕ್ಕಾ, ಬಿರಿಯಾನಿ ಮಾಡಿ ಎಲ್ಲರೂ ಸವಿದಿರುತ್ತೇವೆ. ಆದರೆ ಖೀರ್ ಖಂಡಿತ ಇರಲಿಕ್ಕಿಲ್ಲ. ಹೆಚ್ಚಿನವರಿಗೆ ಇದು ಮಾಡುವ ವಿಧಾನವೂ ತಿಳಿದಿರಲಿಕ್ಕಿಲ್ಲ. ಅತ್ಯಲ್ಪ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಖೀರ್ ಗಳಲ್ಲಿ ಪನ್ನೀರ್ ಖೀರ್ ಕೂಡ ಒಂದು. ಪನ್ನೀರ್ ಖೀರ್ ಮಾಡುವುದು ಎಷ್ಟು ಸುಲಭವೋ ಅದರ ಸವಿಯೂ ಅಷ್ಟೇ ರುಚಿಕರವಾಗಿರುತ್ತದೆ. ಹೇಳದೇ ಕೇಳದೇ ಅತಿಥಿಗಳು ಮನೆಗೆ ಬಂದಾಗ, ಯಾವುದೋ ಶುಭ ಸುದ್ದಿ ಸಿಕ್ಕಿದಾಗ ಅತ್ಯಲ್ಪ ಸಮಯದಲ್ಲಿ ಮಾಡಿ ಸವಿಯಬಹುದಾದ ಖೀರ್ ಗಳಲ್ಲಿ ಪನ್ನೀರ್ ಖೀರ್ ಕೂಡ ಒಂದು.
ಪನ್ನೀರ್ ಖೀರ್ ಮಾಡಲು ಮೊದಲಿಗೆ ಪನ್ನೀರ್ ಮಾಡಿಕೊಂಡಿರಬೇಕು. ಇದಕ್ಕಾಗಿ ಬೇಕಾದ ಸಾಮಗ್ರಿಗಳು ಒಂದು ಲೀಟರ್ ಹಾಲು, ಕಾಲು ಕಪ್ ಮೊಸರು, 4 ಚಮಚ ನಿಂಬೆ ರಸ, ಅರ್ಧ ಕಪ್ ಐಸ್ ತುಂಡುಗಳು.
ಮೊದಲಿಗೆ ಹಾಲನ್ನು ಕುದಿಸಿ. ಅದಕ್ಕೆ ಮೊಸರು ಸೇರಿಸಿ. ತತ್ ಕ್ಷಣ ಒಲೆ ಉರಿ ಆರಿಸಿ. ಕುದಿಯುವ ಹಾಲಿಗೆ ಮೊಸರು ಹಾಕುವುದರಿಂದ ಹೆಚ್ಚು ಸಾಫ್ಟ್ ಆಗಿರುವಂಥ ಪನ್ನೀರು ಮಾಡಬಹುದು. ಹಾಲು ತಣಿದ ಮೇಲೆ ಅದಕ್ಕೆ ಲಿಂಬೆ ರಸ ಸೇರಿಸಿ.
ಅರ್ಧ ಗಂಟೆ ಬಿಟ್ಟು ಬಳಿಕ ಅದರಲ್ಲಿರುವ ನೀರನ್ನು ಬೇರ್ಪಡಿಸಿ ಬಟ್ಟೆಯಲ್ಲಿ ಅರ್ಧ ಗಂಟೆಗಳ ಕಾಲ ಕಟ್ಟಿ ಇಟ್ಟರೆ ಪನ್ನೀರ್ ಸಿದ್ಧವಾಗುತ್ತದೆ.
ಪನ್ನೀರ್ ಖೀರ್ ಮಾಡಲು ಹೆಚ್ಚಿನ ಸಾಮಗ್ರಿಗಳೂ ಬೇಕಾಗಿಲ್ಲ. ತುರಿದುಕೊಂಡ ಪನ್ನೀರ್, ಮಂದಗೊಳಿಸಿದ ಹಾಲು, ಸಾಮಾನ್ಯ ಹಾಲು, ಒಣ ದ್ರಾಕ್ಷಿ, ಬಾದಾಮಿ, ಏಲಕ್ಕಿ ಹುಡಿ ಇದ್ದರೆ ಸಾಕು ಸುಲಭವಾಗಿ ಪನ್ನೀರ್ ಖೀರ್ ಮಾಡಬಹುದು.
ಒಂದು ಪಾತ್ರೆಯಲ್ಲಿ ಅರ್ಧ ಕಪ್ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ. ತತ್ ಕ್ಷಣವೇ ಅದಕ್ಕೆ ಅರ್ಧ ಲೀಟರ್ ಹಾಲು ಸೇರಿಸಿ. ಗಂಟುಗ ಳಾಗ ದಂತೆ 5- 6 ನಿಮಿಷಗಳ ಕಾಲ ನಿರಂತರವಾಗಿ ಸೌಟಿನಲ್ಲಿ ತಿರುವುತ್ತಾ ಇರಿ. ಮಂದಗೊಳಿಸಿದ ಮುಕ್ಕಾಲ್ ಕಪ್ ಹಾಲನ್ನು ಇದಕ್ಕೆ ಸೇರಿಸಿ 3- 4 ನಿಮಿಷಗಳ ಕಾಲ ನಿರಂತರವಾಗಿ ಸೌಟ್ ಹಾಕಿ ತಿರುವುತ್ತಾ ಇರಿ.
ಈಗ ಒಂದು ಚಮಚ ಏಲಕ್ಕಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಗೊ ಳಿಸಿ. 2- 3 ಒಣ ದ್ರಾಕ್ಷಿ, ಒಂದು ಚಮಚ ಬಾದಾಮಿ ಚೂರನ್ನು ಸೇರಿಸಿ. ಚೆನ್ನಾಗಿ ಮಿಶ್ರ ಗೊ ಳಿಸಿ ಒಂದು ಬೌಲ್ ಗೆ ಹಾಕಿದರೆ ಖೀರ್ ಸಿದ್ಧ. ಬಳಿಕ ಖೀರ್ ಅನ್ನು ಒಣ ದ್ರಾಕ್ಷಿಯಿಂದ ಅಲಂಕರಿಸಿ. ಫ್ರಿಜ್ ನಲ್ಲಿಟ್ಟು ತಂಪಾದ ಬಳಿಕ ಸವಿಯಲು ಕೊಟ್ಟರೆ ಹೆಚ್ಚು ರುಚಿಯಾಗಿರುತ್ತದೆ.
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.