ಕ್ವಿಕ್ ಕುಕ್ ಸಿಹಿತಿಂಡಿ
Team Udayavani, Nov 20, 2019, 6:08 AM IST
ಬೇಕರಿಯಲ್ಲಿ ನೂರು ಬಗೆಯ ಸ್ವೀಟ್‌ಗಳು ಸಿಗುತ್ತವಾದರೂ, ಮನೆಯಲ್ಲಿ ಮಾಡುವ ಸಿಹಿತಿಂಡಿಗಳಿಗೆ ಅವು ಸಮನಾಗುವುದಿಲ್ಲ. ಅದರಲ್ಲೂ, ಉಂಡೆ, ಹೋಳಿಗೆ, ಕರ್ಜಿಕಾಯಿಯಂಥ ಸಾಂಪ್ರದಾಯಿಕ ತಿನಿಸುಗಳ ರುಚಿಯೇ ಬೇರೆ. ಅಡುಗೆಮನೆಯಲ್ಲಿ ಯಾವಾಗಲೂ ಇರುವ ಸಾಮಗ್ರಿಗಳನ್ನು ಬಳಸಿ ಅಂಥ ಕೆಲವು ಸಿಹಿತಿಂಡಿಗಳನ್ನು, ತಯಾರಿಸಬಹುದು.
ಎಣ್ಣೆ ಹೋಳಿಗೆ
ಬೇಕಾಗುವ ಸಾಮಗ್ರಿ: ಸಣ್ಣ ರವೆ- 2 ಕಪ್, ಗೋಧಿ ಹಿಟ್ಟು- 2 ಕಪ್, ತುಪ್ಪ- 2 ಚಮ ಚ, ಬೆಲ್ಲ- 2 ಕಪ್, ಕರಿಯಲು ಎಣ್ಣೆ, ಏಲಕ್ಕಿ, ಸೋಂಪು ಕಾಳು- 1ಚಮಚ.
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ, ಬಿಸಿಯಾದ ನಂತರ ರವೆ ಹಾಕಿ ಸಣ್ಣ ಉರಿಯಲ್ಲಿ ಹುರಿದಿಟ್ಟು ಕೊ ಳ್ಳಿ. ಅದೇ ಬಾಣಲೆಗೆ ಬೆಲ್ಲ ಹಾಕಿ, ಮುಳುಗುವಷ್ಟು ನೀರು ಹಾಕಿ, ಒಂದೆಳೆ ಪಾಕ ಬರುವವರೆಗೂ ಕುದಿಸಿ. ಪಾಕ ಬಂದ ನಂತರ ರವೆ, ಏಲಕ್ಕಿ ಪುಡಿ, ಸೋಂಪು ಕಾಳು ಹಾಕಿ, ಗಂಟಾಗದಂತೆ ಚೆನ್ನಾ ಗಿ ಕಲೆಸುತ್ತಿರಿ. ಹೂರಣ ಗಟ್ಟಿಯಾಗುವವರೆಗೂ ಕೈಯಾಡಿಸಿ, ಒಂದು ತಟ್ಟೆಗೆ ಹಾಕಿ ಆರಲು ಬಿಟ್ಟು, ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ರವೆ ಹೂರಣವನ್ನು ಆ ಹಿಟ್ಟಿನಲ್ಲಿಟ್ಟು ಹೋಳಿಗೆ ರೀತಿಯಲ್ಲಿ ಲಟ್ಟಿಸಿ, ಮೊದಲು ತವಾದ ಮೇಲೆ ಹಸಿಬಿಸಿಯಾಗಿ ಬೇಯಿಸಿಕೊಂಡು ನಂತರ ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
ರವೆ ಕರ್ಜಿಕಾಯಿ
ಬೇಕಾಗುವ ಸಾಮಗ್ರಿ: ರವೆ- ಕಾಲು ಕೆ.ಜಿ, ಸಕ್ಕರೆ- ಕಾಲು ಕೆ.ಜಿ, ತುರಿದ ಕೊಬ್ಬರಿ- 1 ಬಟ್ಟಲು, ಮೈದಾ ಹಿಟ್ಟು- ಮುಕ್ಕಾಲು ಕೆ.ಜಿ, ಸೋಂಪು ಕಾಳು- ಒಂದು ಚಮಚ, ಏಲಕ್ಕಿ, ಕರಿಯಲು ಎಣ್ಣೆ, ಅಡುಗೆ ಸೋಡ-ಕಾಲು ಚಮಚ, ತುಪ್ಪ -2 ಚಮಚ, ಜಾಯಿ ಕಾಯಿ- ಅರ್ಧ.
ಮಾಡುವ ವಿಧಾನ: ರವೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ ಸಕ್ಕರೆಯನ್ನು ಸಣ್ಣಗೆ ಪುಡಿ ಮಾಡಿ, ರವೆ ಜೊತೆಗೆ ಸೇರಿಸಿ.ಅದಕ್ಕೆ ಏಲಕ್ಕಿ ಪುಡಿ, ಸೋಂಪು ಕಾಳು, ಕೊಬ್ಬರಿ ತುರಿ, ಜಾಯಿ ಕಾಯಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೈದಾ ಹಿಟ್ಟಿಗೆ ಅಡುಗೆ ಸೋಡಾ ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ, ಚಿಕ್ಕ ಎಲೆಗಳನ್ನಾಗಿ ಮಾಡಿಕೊಂಡು ರವೆ ಮಿಶ್ರಣವನ್ನು ಅದಕ್ಕೆ ತುಂಬಿಸಿ. ನಂತರ ಅದ ನ್ನು ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೂ ಕರಿದರೆ ಕರ್ಜಿ ಕಾಯಿ ಸಿದ್ಧ.
ಬಿಳಿ ಎಳ್ಳುಂಡೆ
ಬೇಕಾಗುವ ಸಾಮಗ್ರಿ: ಎಳ್ಳು- 2 ಬಟ್ಟಲು, ಬೆಲ್ಲ- 2 ಬಟ್ಟಲು, ತುಪ್ಪ -3 ಚಮಚ, ಏಲಕ್ಕಿ ಪುಡಿ- 1 ಚಮಚ.
ಮಾಡುವ ವಿಧಾನ: ಎಳ್ಳನ್ನು ಚೆನ್ನಾಗಿ ಹುರಿದು, ಬೆಲ್ಲ, ಎಳ್ಳು, ಏಲಕ್ಕಿ ಪುಡಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ತುಪ್ಪದೊಂದಿಗೆ ಬೆರೆಸಿ ಉಂಡೆ ಕಟ್ಟಿದರೆ ಎಳ್ಳುಂಡೆ ರೆಡಿ. ಹತ್ತಿಪ್ಪತ್ತು ನಿಮಿಷದಲ್ಲಿ ರುಚಿ ರುಚಿಯಾದ, ಫ್ರೆಶ್ ಆದ ಹಾಗೂ ಚಳಿಗಾಲದಲ್ಲಿ ದೇಹ ಕ್ಕೆ ಒಳಿತಾಗುವ ತಿನಿಸು ಮಾಡಬೇಕೆಂದರೆ, ಇದು ಒಳ್ಳೆಯ ಆಯ್ಕೆ.
ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿ: ಶೇಂಗಾ ಬೀಜ- 2 ಕಪ್, ಬೆಲ್ಲ- 2 ಕಪ್, ಏಲಕ್ಕಿ ಪುಡಿ, ತುಪ್ಪ- 3 ಚಮಚ, ಬಿಳಿ ಎಳ್ಳು- 1 ಕಪ್.
ಮಾಡುವ ವಿಧಾನ: ಶೇಂಗಾ ಹಾಗೂ ಎಳ್ಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ, ಎರ ಡನ್ನೂ ಏಲಕ್ಕಿ ಜೊತೆ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಬೆಲ್ಲ ಹಾಗೂ ನೀರು ಹಾಕಿ, ಒಂದೆಳೆ ಪಾಕ ಬರುವವರೆಗೂ ಕಾಯಿಸಿ, ನಂತರ ತುಪ್ಪ ಹಾಕಿ. ರುಬ್ಬಿದ ಮಿಶ್ರಣದ ಜೊತೆ, ಶೋಧಿ ಸಿದ ಪಾಕ ಹಾಕಿ ಮಿಶ್ರಣ ಮಾಡಿ, ಉಂಡೆ ಕಟ್ಟಿ.
ಮಿಕ್ಸ್ ಸ್ವೀಟ್ ಉಂಡೆ
ಬೇಕಾಗುವ ಸಾಮಗ್ರಿ: 2 ಬಟ್ಟಲು ಸಣ್ಣ ರವೆ, 2 ಬಟ್ಟಲು ಕಡಲೆ ಹಿಟ್ಟು, 2 ಬಟ್ಟಲು ಗೋಧಿ ಹಿಟ್ಟು, 4 ಚಮಚ ತುಪ್ಪ, ಹಾಲು (ಎಲ್ಲಾ ಹಿಟ್ಟು ಮಿಶ್ರಣ ಮಾಡಿದಾಗ ಒಟ್ಟಾಗುವ ಪ್ರಮಾಣಕ್ಕೆ ಸರಿಯಾದ ಅಳತೆಯಲ್ಲಿ), 2 ಬಟ್ಟಲು ಸಕ್ಕರೆ, ಏಲಕ್ಕಿ ಪುಡಿ.
ಮಾಡುವ ವಿಧಾನ: ಕಾಯಿ ಸಿದ ತುಪ್ಪ ದಲ್ಲಿ ರವೆ ಯನ್ನು ಹುರಿದುಕೊಳ್ಳಿ. ಅದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟನ್ನು ಹಾಕಿ ಹುರಿದು, ತೆಗೆದಿಡಿ. ಬಾಣಲೆಗೆ ಹಾಲು, ಸಕ್ಕರೆ ಹಾಕಿ ಗಟ್ಟಿಯಾಗುವವರೆಗೂ ಕುದಿಸಿ. ಗಟ್ಟಿಯಾದ ಪಾಕಕ್ಕೆ ತುಪ್ಪ ಹಾಕಿ, ಮಿಶ್ರಣ ಮಾಡಿದ ಹಿಟ್ಟನ್ನು ಹಾಕಿ ಗಂಟಾಗದಂತೆ ಚೆನ್ನಾಗಿ ಕೈಯಾಡಿಸಿ. ಹೂರಣ ತಳ ಬಿಡುವ ಸಮಯದಲ್ಲಿ ತಟ್ಟೆಗೆ ಹಾಕಿ, ತಣ್ಣಗಾದ ನಂತರ ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿದರೆ ಸ್ವೀಟ್ ರೆಡಿ.
* ಭಾಗ್ಯ ಆರ್. ಗುರುಕುಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.