ಪರಿಮಳ ಕಳೆದುಕೊಂಡ ಗಂಧದ ಗುಡಿಗಾರರ ಬದುಕು


Team Udayavani, Jul 1, 2021, 10:36 PM IST

Shivamogga News, Gandada Gudigarara Baduku

ಸಾಗರ: ಆಕರ್ಷಕ ಕಲಾಕೃತಿ ಕೆತ್ತುವ ಕೌಶಲ್ಯ ಹೊಂದಿರುವ ಗುಡಿಗಾರರ ಬದುಕು ಕೊರೊನಾ ಸಾಂಕ್ರಾಮಿಕದ ಲಾಕ್‌ ಡೌನ್‌ ಪರಿಣಾಮದಿಂದ ಹೈರಾಣಾಗಿದೆ. ಕಲಾಕೃತಿಗಳ ನಿರ್ಮಾಣಕ್ಕೆ ಸಾಕಷ್ಟು ಅವಕಾಶವಿದ್ದರೂ ಮಾರುಕಟ್ಟೆ ಇಲ್ಲದ ಕಾರಣ ಕಳೆದ 2 ವರ್ಷಗಳಿಂದ ಜೀವನ ನಿರ್ವಹಣೆಗೂ ಅಗತ್ಯವಾದ ಕನಿಷ್ಠ ಆದಾಯವಿಲ್ಲದ ದುಸ್ಥಿತಿ ಇದೆ.

ಕೆಳದಿ ರಸ್ತೆಯಲ್ಲಿನ ಶ್ರೀಗಂಧದ ಸಂಕೀರ್ಣ ಸೇರಿದಂತೆ ತಾಲೂಕಿನ ಕರಕುಶಲಕರ್ಮಿಗಳ ಕುಶಲ ಕೇಳುವವರಿಲ್ಲದಂತಾಗಿದೆ. ಕಳೆದ ವರ್ಷ ಹಾಗೂ ಈ ಬಾರಿಯ ಲಾಕ್‌ಡೌನ್‌ ಅವ ಧಿಯಲ್ಲಿ ಗುಡಿಗಾರರ ಸಲಕರಣೆಗಳು ಸಪ್ಪಳ ಮಾಡಿಲ್ಲ. ಕಲಾಕೃತಿಗಳ ನಿರ್ಮಾಣ ಕಾರ್ಯ ಆಗಿಲ್ಲ. ದಿನಗಟ್ಟಲೆ ಕುಳಿತು ಕೆತ್ತಿ ನಿರ್ಮಿಸಿದ ಕಲಾಕೃತಿಗಳಿಗೆ ಮಾರುಕಟ್ಟೆ ಇರಲಿಲ್ಲ. ಖರೀದಿ ಇಲ್ಲವಾದುದರಿಂದ ಆದಾಯ ಇಲ್ಲದ ದುಸ್ಥಿತಿಯಲ್ಲಿ ಕರಕುಶಲಕರ್ಮಿಗಳು ದಿನ ದೂಡುತ್ತಿದ್ದಾರೆ. ಶ್ರೀಗಂಧದ ಸಂಕೀರ್ಣದ ವ್ಯಾಪ್ತಿಯಲ್ಲಿನ 125ಕ್ಕೂ ಹೆಚ್ಚು ಕುಟುಂಬಗಳು, ನಗರ ಮತ್ತು ಗ್ರಾಮಾಂತರದ ಗುಡಿಗಾರರ ಕುಟುಂಬಗಳಲ್ಲಿ ಕೊರೊನಾ ಸಂಕಟ ಮೂಡಿಸಿದೆ. ಕಲ್ಲು, ಮರ ಕೆತ್ತನೆ ಮೂಲಕ ಆಕರ್ಷಕ ಕಲಾಕೃತಿ ನಿರ್ಮಿಸುವ ಕುಶಲಕರ್ಮಿಗಳ ಆದಾಯಕ್ಕೆ ಬಲವಾದ ಪೆಟ್ಟು ಬಿದ್ದಿದೆ.

ಗುಡಿಗಾರರ ಸಹಕಾರ ಸಂಘದ ಮಳಿಗೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿನ ಕರಕುಶಲ ವಸ್ತು, ಶ್ರೀಗಂಧದ ಹಾಗೂ ಬೀಟೆಯ ಸುಂದರ ಕಲಾಕೃತಿಗಳ ಮಾರಾಟ ಮಳಿಗೆಗಳು ತಿಂಗಳುಗಟ್ಟಲೆ ಬಾಗಿಲು ಮುಚ್ಚಿವೆ. ಆದಾಯವಿಲ್ಲದ ದುಸ್ಥಿತಿಯಲ್ಲಿ ಮಳಿಗೆಗಳ ಮಾಲೀಕರಿದ್ದಾರೆ. ತಿಂಗಳುಗಳ ಕಾಲ ವ್ಯಾಪಾರ ಇಲ್ಲದಿದ್ದರೂ ಬಾಡಿಗೆ ಕಟ್ಟುವ ಸಂಕಟ ಅವರದ್ದಾಗಿದೆ. ಕೆಲವು ಮಾಲೀಕರಿಗೆ ಗೋದಾಮು ಹಾಗೂ ಮಳಿಗೆ ಸೇರಿ ತಿಂಗಳಿಗೆ 15 ಸಾವಿರ ರೂ. ಬಾಡಿಗೆ ಕಟ್ಟಬೇಕಾಗಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಲಾಕ್‌ ಡೌನ್‌ ಅವಧಿಯಲ್ಲಿ ಗುಡಿಗಾರರ ಹಿತ ಕಾಪಾಡುವ ಹೊಣೆಗಾರಿಕೆ ನಿರ್ಲಕ್ಷಿಸಿದೆ. ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ನಿಗಮದ ಅ ಧಿಕೃತ ಕಾರ್ಡ್‌ ಹೊಂದಿರುವ 250 ಗುಡಿಗಾರರಿಗೆ ತಲಾ ಎರಡು ಸಾವಿರ ರೂ. ಸಹಾಯಧನ ನೀಡಿತ್ತು. ಆದರೆ ಈ ಬಾರಿ ಅಂತಹ ಯಾವುದೇ ನೆರವು ಇಲ್ಲವಾಗಿದೆ.

ನಿಗಮದ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಸರ್ಕಾರದ ಪ್ಯಾಕೇಜ್‌ನಿಂದ ಸಹ ಗುಡಿಗಾರರು ವಂಚಿತರಾಗಿದ್ದಾರೆ. ಈ ಬಾರಿ ನಿಗಮ ನೆರವಿಗೆ ಬಾರದಿರುವುದು ಗುಡಿಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ಥಳೀಯವಾಗಿ ನಗರಸಭೆ ವಾರ್ಡ್‌ ವ್ಯಾಪ್ತಿ ನೀಡಿದ ಆಹಾರ ಕಿಟ್‌ ಸಹಾಯದಲ್ಲಿ ಶ್ರೀಗಂಧದ ಸಂಕೀರ್ಣದ ನಿವಾಸಿಗಳಲ್ಲಿ 18 ಜನರಿಗೆ ಕೊಡುವ ಸಂಬಂಧ ಪಟ್ಟಿ ಸಿದ್ಧಗೊಳಿಸಲಾಗಿತ್ತು. ವಾರ್ಡ್‌ ವ್ಯಾಪ್ತಿಯ ಎಲ್ಲ ಬಡವರಿಗೂ ಕಿಟ್‌ ನೀಡಬೇಕಾದ ಹಿನ್ನೆಲೆಯಲ್ಲಿ ಇಂತಹ ಆಯ್ಕೆ ಅನಿವಾರ್ಯ.

ನಗರಸಭೆ ನೀಡುವ ಕಿಟ್‌ ಶ್ರೀಗಂಧದ ಸಂಕೀರ್ಣದ ಕೆಲವೇ ಕೆಲವು ನಿವಾಸಿಗಳಿಗೆ ದೊರಕುತ್ತಿರುವುದರಿಂದ ಮೊದಲಿಗೆ ನಿರಾಕರಿಸಲಾಗಿತ್ತು. ಕಿಟ್‌ ಅಗತ್ಯವುಳ್ಳವರು 70ಕ್ಕೂ ಹೆಚ್ಚು ಕುಟುಂಬದವರಿದ್ದು, ಕೇವಲ 20 ಜನರಿಗೆ ಮಾತ್ರ ದೊರಕುವುದು ಸಮಂಜಸವಲ್ಲ ಎಂದು ಗುಡಿಗಾರರು ನಗರಸಭೆ ಕಿಟ್‌ಗಳನ್ನು ನಿರಾಕರಿಸುವ ತೀರ್ಮಾನ ಮಾಡಿದ್ದರು.

ವಾರ್ಡ್‌ ಸದಸ್ಯ ಶಂಕರ ಫಲಾನುಭವಿಗಳನ್ನು ಸಂಪರ್ಕಿಸಿದ ನಂತರ 20 ಕುಟುಂಬಕ್ಕೆ ಕಿಟ್‌ ನೀಡಲಾಗಿದೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ಕಿಟ್‌ ನೆರವು ದೊರಕಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.