ಮಂಗಳೂರಿನಲ್ಲಿ ಸ್ಪೋಟಕ ಸಿಕ್ಕಿರುವುದು, ಕರಾವಳಿಯಲ್ಲಿ ಮುಂದಿನ ದಿನಗಳ ಅಪಾಯದ ಮುನ್ಸೂಚನೆಯೇ?


Team Udayavani, Jan 21, 2020, 4:38 PM IST

bomb

ಮಣಿಪಾಲ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಲಭ್ಯವಾಗಿರುವುದು, ಕರಾವಳಿ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಅಪಾಯದ ಮುನ್ಸೂಚನೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಅಯ್ದ ಉತ್ತರಗಳು ಇಲ್ಲಿವೆ

ರಮೇಶ್ ಬಿ.ವಿ: ಎಲ್ಲ ನುಸುಳುಕೋರರನ್ನ ನಮ್ಮ ದೇಶದ ವಿರೋಧ ಪಕ್ಷಗಳು ಹೀಗೇ ಸಾಕಿ ಸಲಹುತ್ತಾ ಇದ್ದರೆ ಮುಂದೆ ಏನಾದರೂ ಆಗಬಹುದು

ಸಂತೋಷ್ ಡಿಸೋಜಾ: ಸ್ಥಳೀಯ ಆಡಳಿತದಿಂದ ಹಿಡಿದು ರಾಜ್ಯ, ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇದೆ. ಈಗ ಇನ್ನೊಬ್ಬರತ್ತ ಬೊಟ್ಟು ಮಾಡುವಂತಿಲ್ಲ. ಹೊಟ್ಟೆಯೊಳಗೆ ಸಣ್ಣ ಚಿನ್ನವನ್ನು ಪತ್ತೆ ಹಚ್ಚಿದವರಿಗೆ ಅಷ್ಟು ದೊಡ್ಡ ಬಾಂಬ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರೆ ನಿಜಕ್ಕೂ ದೊಡ್ಡ ಭದ್ರತಾ ವೈಪಲ್ಯ

ಅಬ್ದುಲ್ ವಾಹಬ್: ಕೇಂದ್ರದಲ್ಲೂ ಅವರದ್ದೇ ಸರಕಾರ, ರಾಜ್ಯದಲ್ಲೂ ಅವರದ್ದೇ ಸರಕಾರ. ಒಬ್ಬರನ್ನು ಬಿಟ್ಟರೆ ಕರಾವಳಿಯಲ್ಲೆಲ್ಲಾ ಅವರದ್ದೇ ಶಾಸಕರು. ಇಬ್ಬರು ಸಂಸದರೂ ಅವರದ್ದೇ. ಪೋಲೀಸ್, ಗುಪ್ತಚರ ಇಲಾಖೆ, ಭದ್ರತಾ ಸಿಬ್ಬಂದಿ ಅವರ ಆಣತಿಯಲ್ಲೇ ಕೆಲಸ ಮಾಡುವವರು. ವಿಮಾನ ನಿಲ್ದಾಣ ಪ್ರಾಧೀಕಾರನೂ ಅವರ ಕೈಯಲ್ಲೇ. ವಿಮಾನ ನಿಲ್ದಾಣದ ಭದ್ರತೆನೂ ಅವರದ್ದೇ. ಇಷ್ಟಿದ್ದರೂ ಒಬ್ಬ ಅಪರಿಚಿತ ವ್ಯಕ್ತಿ ಇಷ್ಟೊಂದು ಸಲೀಸಾಗಿ ರಿಕ್ಷಾದಲ್ಲಿ ಬಂದು, ಬಾಂಬ್ ಇರುವ ಬ್ಯಾಗನ್ನು ಟಿಕೇಟ್ ಕೌಂಟರ್ ತನಕ ಯಾವುದೇ ಅಡೆತಡೆಯಿಲ್ಲದೆ ತೆಗೆದುಕೊಂಡು ಹೋಗಿ, ಅದನ್ನಲ್ಲಿಟ್ಟು ತನ್ನಷ್ಟಕ್ಕೇ ವಾಪಾಸ್ ಹೋಗುತ್ತಾನೆಂದರೆ ಇದಕ್ಕೆ ನೆಹರೂನೇ ಕಾರಣ.

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಹೌದು. ಪಕ್ಕದ ಕೇರಳದ ಮೂಲಕ ರಾಜ್ಯಕ್ಕೆ ಉಗ್ರವಾದಿಗಳು ಸ್ಕೆಚ್ ಹಾಕ್ತಾ ಇದ್ದಾರೆ. ಇಲ್ಲಿನ ಕೆಲವು ಜಿಹಾದಿ ಮನಸಿನ ಸಂಘಗಳಿಂದ ಅವರಿಗೆ ಎಲ್ಲಾ ರೀತಿಯ ನೆರವು ಸಿಗ್ತಾ ಇದೆ. ಮಂಗಳೂರು ಭಯೋತ್ಪಾದಕರ ತಾಣವಾಗಿ ಬದಲಾಗೋ ಮುಂಚೆ ಸರ್ಕಾರ ಕೇರಳ ಗಡಿಭಾಗದಲ್ಲಿ ಪ್ರಬಲ ರಕ್ಷಣಾ ಪಡೆ ನಿಯೋಜಿಸಬೇಕು. ಎಸ್ ಡಿಪಿಐ ಮತ್ತು ಪಿಎಫ್ ಐನಂತಹ ಮತಾಂಧ ಸಂಘಟನೆನೆಗಳನ್ನು ಈ ಕೂಡಲೇ ಬ್ಯಾನ್ ಮಾಡಬೇಕು. ಅದರ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು. ಅಷ್ಟೇ ಅಲ್ಲದೆ ಇಲ್ಲಿನ ಜಿಹಾದಿ ಮನಸ್ಸುಗಳಿಗೆ ತುಪ್ಪ ಸುರಿಯುತ್ತಿರುವ ಇಬ್ಬರು ಮಾಜಿ ಮುಖ್ಯಮಂತ್ರಿ ಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು. ಒಟ್ಟಾರೆ ಸರ್ಕಾರ ಈ ಕೂಡಲೇ ಮಂಗಳೂರಿಗೆ ವಿಶೇಷ ರಕ್ಷಣಾ ಪಡೆ ನಿಯೋಜಿಸಿ ಪಕ್ಕದ ಕೇರಳದಿಂದ ಇಲ್ಲಿಗೆ ಭಯೋತ್ಪಾದಕ ಚಟುವಟಿಕೆ ಹಬ್ಬದಂತೆ ಕ್ರಮ ಕೈಗೊಳ್ಳಬೇಕು.

ಚಂದ್ರಪ್ಪ ಹೂಗಾರಪ್ಪ: ನನಗೆ ನಿಜವಾಗಲೂ ನಗು ಬರುತ್ತಿದೆ ಯಾವೊಬ್ಬ ಮುಸಲ್ಮಾನನೂ ಸಹ ಇದು ತಪ್ಪು ಎಂದು ವಾದಿಸುತ್ತಿಲ್ಲ ಎಲ್ಲರಿಗೂ ರಾಜ್ಯಸರ್ಕಾರಕ್ಕೆ ಬಯ್ಯುವ ಅವಕಾಶ ಸಿಕ್ಕಿತು ಎಂದು ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಒಂದು ಮಾತು ಬರೆದಿಟ್ಟುಕೊಳ್ಳಿ ಉಗ್ರಗಾಮಿಗಳು ಅಥವಾ ಉಗ್ರವಾದಕ್ಕೆ ಜಾತಿ-ಮತ ಯಾವುದು ಇಲ್ಲ ಮುಂಬೈಗೆ ಬಂದವರು ನೀನು ಯಾವ ಜಾತಿ ಎಂದು ಕೇಳಿ ಗುಂಡಿನ ಮಳೆ ಸುರಿಸಲಿಲ್ಲ.

ರಾಜೇಶ್ ಮಾಣಿಬೆಟ್ಟು: ಖಂಡಿತವಾಗಿಯೂ ಹೌದು. ಎಲ್ಲಿಯವರೆಗೆ ನಮ್ಮ ಎಡಬಿಡಂಗಿ ರಾಜಕಾರಣಿಗಳು ಸಮಾಜಘಾತಕ ಶಕ್ತಿಗಳಿಗೆ ನೈತಿಕ ಬೆಂಬಲ ಕೊಡುತ್ತಾರೋ ಅಲ್ಲಿಯವರೆಗೆ ಇಂತ ಶಕ್ತಿಗಳು ಮೆರೆಯುತ್ತಿರುತ್ತವೆ.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.