ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ: ಸರ್ಕಾರದ ಈ ಆರಂಭಿಕ ಹೆಜ್ಜೆಯ ಬಗ್ಗೆ ಅಭಿಪ್ರಾಯವೇನು?
Team Udayavani, Mar 21, 2020, 4:56 PM IST
ಮಣಿಪಾಲ: ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ: ಕೇಂದ್ರ ಸರ್ಕಾರದ ಈ ಆರಂಭಿಕ ಹೆಜ್ಜೆಯ ಬಗ್ಗೆ ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ
ಆದರ್ಶ್ ಶೆಟ್ಟಿ: ತುಂಬಾ ವಿವೇಚನೆಯಿಂದ ಕೂಡಿದ ದೇಶದ ಜನರಿಗಾಗಿ ತೆಗೆದುಕೊಂಡ ಉತ್ತಮವಾದ ನಿರ್ಧಾರ. ಪ್ರಜಾಪ್ರಭುತ್ವ ಎಂದರೆ ಜನರು ಜನರಿಗಾಗಿ ಆಯ್ಕೆ ಮಾಡುವ ಸರ್ಕಾರ .ಅಂತಹ ಸರ್ಕಾರವು ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಒಳಿತಿಗಾಗಿ ಕೈಗೊಳ್ಳಲೇ ಬೇಕಾದಂಥ ನಿರ್ಧಾರ ಇದು ಸರಿಯಾಗಿ ಇದೆ .
ಮಹಾದೇವ ಎಸ್ ಬಿ: ಅದರ ಬದಲು ಆಸ್ಪತ್ರೆ, ಮಾಸ್ಕ್, ಸ್ಯಾನಿಟೈಸರ್ ಅವಶ್ಯಕತೆ ಇರುವಷ್ಟು ದೊರೆಯುವ ಹಾಗೆ ಮಾಡಿದರೆ ಸಾಕು.
ಮೌಲಾಲಿ ಮಸುತಿ: ಇದು ಅಗತ್ಯ ಇರಲಿಲ್ಲ,ಒಂದು ದಿನದಿಂದ ರೋಗ ಹೊಗಲ್ಲ.ಜನರಿಗೆ ಅಗತ್ಯ ಔಷಧ ,ಆಸ್ಪತ್ರೆ, ಇತರೆ ಸೌಲತ್ತು ಒದಗಿಸಬೇಕು. ಪ್ಯಾಕೇಜ್ ಘೊಸಿಸಬೇಕು. ಬೇರೆ ದೇಶದಿಂದ ಬರುವವರಿಗೆ ನಿರ್ಬಂಧ ಹೇರಬೇಕು.ಸೋಂಕು ತಗಲಿದವರಿಗೆ ಅಲ್ಲಿಯೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು.
ನಂದೀಶ್ ತಾಲಗುಂದ: ಒಂದು ದಿನ ನಮ್ಮ ದೇಶದ ಒಳಿತಿಗೋಸ್ಕರ ಮನೆಯಲ್ಲಿ ಇರುವುದರಲ್ಲಿ ಯಾವ ತಪ್ಪು ಇಲ್ಲ,ಎಷ್ಟೋ ಜನ ಬೋಳಿಮಕ್ಕಳು ತಮ್ಮ ಸ್ವಾರ್ಥಕ್ಕಾಗಿ,ರಾಜಕೀಯ ತೆವಲಿಗಾಗಿ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತಾರೆ.ಅಂತಹದರಲ್ಲಿ ನಮ್ಮ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ನಾವು ಮೋದಿಜಿಯವರ ನಿರ್ಧಾರವನ್ನು ಬೆಂಬಲಿಸುತ್ತೇವೆ.
ಪ್ರಶಾಂತ ಎಂ ಕುನ್ನೂರ; ಒಂದು ದಿನ ಮನೆಯಲ್ಲಿ ಬಂದಿಯಾಗೋದರಿಂದ ಸೋಂಕು ಹರಡುವಿಕೆಯ ಪ್ರಮಾಣ ಖಂಡಿತ ತಗ್ಗಲಿದೆ.ಜನತಾ ಕರ್ಪೂಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು.ನಿಮ್ಮ ನಿರ್ಲಕ್ಷದಿಂದ ದೇಶದ ಆರೋಗ್ಯ ಕೆಡಿಸದಿರಿ.ಇಟಲಿಯಿಂದ ಪಾಠ ಕಲಿಯದಿದ್ದರೆ ವಿನಾಶ ತಪ್ಪಿದ್ದಲ್ಲ.
ಗಿರೀಶ್ ಗೌಡ: ಸರಿಯಾಗಿಯೇ ಇದೆ. ಈ ‘ಸೋಷಿಯಲ್ ಡಿಸ್ಟೆನ್ಸಿಂಗ್’ ಮಹತ್ವ ತಿಳಿದಿರುವವರಿಗೆ ಇದೊಂದು ಉತ್ತಮ ನಡೆ ಅನ್ನಿಸುತ್ತದೆ. ಆದರೆ ಯಾವಾಗಲೂ, ಎಲ್ಲದರಲ್ಲೂ ರಾಜಕೀಯ ಬೆರೆಸುವವರಿಗೆ ಅವರ ವೈಯಕ್ತಿಕ ನಡೆ ಮೇಲೆ ಅವಲಂಬಿತ.
ದಾವೂಡ್ ಕೂರ್ಗ್: ಎಲ್ಲ ದೇಶದವರು ಅಲ್ಲಿನ ಜನರಿಗೆ ಉಪಯೋಗ ವಾಗುವಂತಹ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸುತ್ತಿವೆ ಉದಾ 1 ತಿಂಗಳ ರೇಷನ್, 2 ತಿಂಗಳ ವಿದ್ಯುತ್ ಬಿಲ್ ಮನ್ನಾ , 3 ತಿಂಗಳ ಬ್ಯಾಂಕ್ ಲೋನ್ ವಸೂಲಾತಿ ಮುಂದೂಡಿಕೆ ಇತ್ಯಾದಿ. ಅದೇ ರೀತಿ ಹೊಸ ತಾತ್ಕಾಲಿಕ ಆಸ್ಪತ್ರೆಗಳ ಹೆಚ್ಚಳ, ಆರೋಗ್ಯ ರಂಗಕ್ಕೆ ಉತ್ತೇಜನ ನೀಡುವ ಆರ್ಥಿಕ ಸಹಾಯ ಇತ್ತ್ಯಾದಿ. ಆದ್ರೆ ತಾವೇನು ಮಾಡಿದ್ದೀರಾ? ಒಂದು ದಿನಕ್ಕೆ ದೇಶ ಬಂದ್. ಏನು ಪ್ರಯೋಜನ ಹೇಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.