ಲಾಕ್ ಡೌನ್ ಎದುರಿಸುವ ಪರಿಸ್ಥಿತಿಯಲ್ಲಿ ರಾಜ್ಯದ ಜನ ಇದ್ದಾರೆಯೇ?
Team Udayavani, Jun 30, 2020, 5:46 PM IST
ಮಣಿಪಾಲ: ರಾಜ್ಯದಲ್ಲಿ ಮತ್ತೊಮ್ಮೆ ಕಟ್ಟುನಿಟ್ಟಿನ ಲಾಕ್ ಡೌನ್ ಪರಿಸ್ಥಿತಿ ಜಾರಿಯಾದರೆ ಅದನ್ನು ಎದುರಿಸುವ ಮನಸ್ಥಿತಿಯಲ್ಲಿ ರಾಜ್ಯದ ಜನ ಇದ್ದಾರೆಯೇ? ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ನರಸಿಂಹ ಮೂರ್ತಿ ಎನ್ ಎಂ:ಯಾವ ಲಾಕ್ ಡೌನೂ ಬೇಕಾಗಿಲ್ಲ. ಇನ್ನು ಮುಂದೆ ಏನಿದ್ದರೂ ಸ್ವಯಂ ಲಾಕ್ ಡೌನ್ ಅನೌನ್ಸ್ ಮಾಡಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಗೊಳಿಸಬೇಕು. ಸ್ವಯಂ ಲಾಕ್ ಡೌನ್ ಗೆ ಒಂದು ತಿಂಗಳ ಕಾಲಮಿತಿ ಕೊಡಬೇಕು. ಆ ದಿನಾಂಕದ ನಂತರ ಪಾಜಿಟಿವ್ ಬಂದರೆ ಅವರೇ ತಮ್ಮ ಸ್ವಂತ ಹಣದಿಂದ ಚಿಕಿತ್ಸೆ ಪಡೆಯಬೇಕು ಎಂದು ನಿಯಮ ಮಾಡಿದರೆ ಆಗ ಎಚ್ಚೆತ್ತುಕೈಳ್ಳಬಹುದು. ಇಲ್ಲವಾದರೆ ಪುಕ್ಕಟ್ಟೆ ಚಿಕಿತ್ಸೆ ನೀಡುತ್ತಾ ಹೋದರೆ ಬೇಜವಾಬ್ದಾರಿತನ ಜಾಸ್ತಿ ಆಗಿ ಕೊರೋನಾ ಮತ್ತಷ್ಟು ಹೆಚ್ಚುತ್ತದೆ
ಹರೀಶ್ ಪೈ: ಏನು ಮಾಡಿದರು ಇವರನ್ನು ಸುಧಾರಿಸುವುದು ಕಷ್ಟದ ಕೆಲಸ. ಜೀವದ ಆಸೆ ಇರುವರು ಜಾಗೃತರಾಗಿರಿ.
ಗಿರೀಶ್ ಎಸ್ ಗೌಡ: ಲಾಕ್ ಡೌನ್ ಮಾಡೋದ್ರಿಂದ ಜನರು ತುಂಬಾ ಕಷ್ಟ ಅನುಭವಿಸುತ್ತಾರೆ . ಲಾಕ್ ಡೌನ್ ಬೇಡ ಬೇರೆ ಉಪಾಯ ಅಥವಾ ಲಸಿಕೆ ಕಂಡುಹಿಡಿದು ಕೋವಿಡ್-19 ನಿರ್ಮೂಲನ ಮಾಡೋಣ
ಸುರೇಶ್ ಸುರೇಶ್: ಪ್ರತಿ ಮನೆಗೆ ಆಹಾರವನ್ನು ಕೊಟ್ಟರೆ ಯಾರು ಮನೆಯಿಂದ ಹೊರಗೆ ಬರುತ್ತಿಲ್ಲ ಎಲ್ಲರಿಗೂ ಕೊಡಬೇಕು
ಚಿ. ಮ. ವಿನೋದ್ ಕುಮಾರ್: 90% ಪ್ರತಿಶತ ಜನರು ಬೀದಿಗೆ ಬೀಳುತ್ತಾರೆ.ಹಸಿವಿನಿಂದ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ.
ಸುಮ ಕಾರಂತ್: ದುಡ್ಡಿರೋರು ಲಾಕ್ಡೌನ್ ಮಾಡಿದರು ಜೀವನ ನಡೆಸುತ್ತಾರೆ ದುಡ್ಡು ಇಲ್ಲದವರು ಏನು ಮಾಡಬೇಕು, 5 ಕೆಜಿ ಅಕ್ಕಿ 1ಕೆಜಿ ಬೇರೆ ಕೊಟ್ಟರೆ ಜೀವನ ಮಾಡಲು ಆಗುತ್ತ, ಭಾನುವಾರ ಒಂದು ದಿನ ಕೋವಿಡ್-19 ಬರುವುದಿಲ್ಲವೇ, ಬೆಳಗ್ಗೆ ಒಂದು ನಿರ್ಧಾರ ಸಂಜೆ ಒಂದು ನಿರ್ಧಾರ ತೆಗೆದು ಕೊಳ್ಳುತ್ತೀರಾ, ಎಲ್ಲರಿಗೂ ದುಡ್ಡುಕೊಟ್ಟು ಲಾಕ್ಡೌನ್ ಮಾಡಿ
ಸತೀಶ್ ರಾವ್: ಊರು ಕೊಳ್ಳೇ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿ ದಂತೆ ಈ ಗಾದೆ ಸದ್ಯದ ಪರಿಸ್ಥಿತಿಯಲ್ಲಿ ಸರಿಯಾಗಿ ಅನ್ವಯಿಸಬಹುದು, ಇನ್ನುಮುಂದೆ ಯಾವುದಾದರೂ ಪವಾಡ ನಡೀಬೇಕು. ಇಲ್ಲ ಅಂದ್ರೆ ನಮ್ಮ ಜಾಗ್ರತೆಯಿಂದ ನಾವಿರಬೇಕು. ಸರ್ಕಾರ ಮಾಡಿದನ್ನ ನೋಡಿ ಸಾಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.