ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19 ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ
Team Udayavani, May 5, 2020, 6:38 PM IST
ಮಣಿಪಾಲ: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19 ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಶ್ರೀನಿವಾಸ್ ಜೆಜಿ: ಒಂದು ಗಾದೆ ಮಾತು ನೆನಪಾಯಿತು ಆದಾಯ ಮೂರು ರೂಪಾಯಿ ಖರ್ಚು ಆರು ರೂಪಾಯಿಯಾದರೆ…ಸರ್ಕಾರ ಆಗು ಹೋಗುಗಳ ಬಗೆಗೆ ಚಿಂತಿಸಬೇಕಿತ್ತು
ಪ್ರೇಮಚಂದ್ರ ಕಾರಂತ್: ಖಂಡಿತ, ಹಾಗೂ ಸರಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತ ಹೆಚ್ಚು ಇತರರಿಗೆ ಹೆಚ್ಚು ಆದಾಯ ಬರುತ್ತದೆ. ಅದನ್ನು ವಿವರಿಸಲಾಗದು, ಅಸಹ್ಯ.’
ಮೊಹಮ್ಮದ್ ಹ್ಯಾರಿಸ್ ಜಿಎ: ಇನ್ನಾದರೂ ಸರಕಾರಕ್ಕೆ ನಿಯಂತ್ರಣಕ್ಕೆ ತರಬಹುದು. ನಾಳೆಯಿಂದ ಪುನಃ ಮಧ್ಯ ವನ್ನು ಸದ್ಯಕ್ಕೆ ಬಂದ್ ಮಾಡಬಹುದು
ಸುನೀಲ್ ಕುಮಾರ್ ಶೆಟ್ಟಿ: ಹೌದು. ಕೋವಿಡ್ ವಿರುದ್ಧದ ಇಷ್ಟು ದಿನದ ಹೋರಾಟ ಒಂದೇ ದಿನದಲ್ಲಿ ವ್ಯರ್ಥವಾಗಿ ಬಿಡುವ ಎಲ್ಲಾ ಸಾದ್ಯತೆಯಿದೆ. ಕಿಲೋಮೀಟರುಗಳ ಉದ್ದದ ಕ್ಯೂನಲ್ಲಿ ಒಬ್ಬನೇ ಒಬ್ಬ ಸೊಂಕಿತನಿದ್ದರೂ ಸಾಕಲ್ಲವೇ??
ಮನುಗೌಡ ನಾಯಕ್: ತಪ್ಪು, ದಿನಸಿ,ತರಕಾರಿ, ಹಾಲು ಇವುಗಳು ಯಾವತ್ತೂ ನಿಂತಿಲ್ಲಾ.ಆಗ ಜಾಸ್ತಿ ಆಗದೆ ಇರೋದು ಈಗ ಯಾಕೆ ಆಗುತ್ತೆ
ರಾಜು ಜಗನ್ನಾಥ್: ಹೌದು, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಅದಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಜನರ ಬೊಕ್ಕಸದಲ್ಲಿ ಹಣವಿಲ್ಲ, ಅವರು ಏನು ಮಡಬೇಕು. ಹಣಕ್ಕಾಗಿ ಈ ದಾರಿ ಸರಿಯಲ್ಲ
ಮೋಹನ್ ಬಾಳಿಗ: ಖಂಡಿತಾ ಇಲ್ಲ ,ಇದು ದೊಡ್ಡ ರಾಜಕೀಯ ಪ್ರೇರಿತ ವ್ಯವಸ್ಥೆ ,ಜನರು ಕುಡಿತವನ್ನು ಬಿಡಿಸಿದರೆ ನಾಳೆ ಸ್ವಲ್ಪ ಎಣ್ಣೆ ,ಪೊಟ್ಟಣ ಬಿರಿಯಾನಿಗೆ ಓಟು ಹಾಕುವವರು ಯಾರು ?? , ಜನರು ಎಚ್ಚರಿಕೆಯಿಂದ ಇಲ್ಲದೇ ಹೋದರೆ ನಮ್ಮ ದೇಶದ ಏಳಿಗೆ ಯಾವಾಗ ?? ಆಡಳಿತ ,ವಿಪಕ್ಷ ದವರು ಸೇರಿ ನಮ್ಮ ದೇಶದ ಜನರನ್ನು ದೋಚುವ ಪಿತೂರಿ ಅಷ್ಟೇ .!!!
ನೀಲಕಂಠ ಮಲಿಪಾಟೀಲ್: ಕುಡಿದು ಕುಳಿತವನಿಗೆ ಸೋಶಿಯಲ್ ಡಿಸ್ಟೆನ್ಸ್ ಬಗ್ಗೆ ಹೇಳಿದರೆ ಏನು ಗೊತ್ತಾಗುವುದಿಲ್ಲ.ಇಂದು ಮಧ್ಯದ ಅಂಗಡಿಗಳು ತೆರೆದ ನಂತರ ಯಾವ ರೀತಿಯಲ್ಲಿ ಜನ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿದ್ದಾಗಿದೆ.ಸರ್ಕಾರದ ಈ ನಿರ್ಧಾರದಿಂದ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಗುವದಂತು ನಿಜ. ಸರಕಾರದ ನಿರ್ಧಾರ ಸರಿಯಾಗಿಲ್ಲ ಅನಿಸುತ್ತೆ.
ದಾವೂದ್ ಕೂರ್ಗ್: ಖಂಡಿತ ಇಲ್ಲ ಜನರು ಮುಗಿಬಿದ್ದು ಗುಂಪಾಗಿ ಬಂದು ಮದ್ಯ ಕರೀದಿಸಿದ್ರೂ ಏನೂ ಆಗಲ್ಲ. ರಸ್ತೆಯಲ್ಲಿ ಒಬ್ಬರೇ ಸುತ್ತಾಡಿದ್ರೆ ಮಾತ್ರ ಬರುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.