ಒಂದು ವರ್ಷದ ಯಾವುದೇ ಹೊಸ ಯೋಜಬೆಯಿಲ್ಲ? ನಿಮ್ಮ ಅಭಿಪ್ರಾಯವೇನು ?
Team Udayavani, Jun 7, 2020, 3:54 PM IST
ಮಣಿಪಾಲ: ಮುಂದಿನ ಒಂದು ವರ್ಷದವರೆಗೂ ಯಾವುದೇ ಹೊಸ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ
ಚಿ. ಮ. ವಿನೋದ್ ಕುಮಾರ್: ಕೈಯಲ್ಲಿ ಕಾಸಿಲ್ಲದಿರುವಾಗ ಅವರು ತಾನೇ ಸುಮ್ಮನೆ ಹೊಸ ಯೋಜನೆಗಳನ್ನು ಘೋಷಣೆ ಮಾಡಿದರೆ ಏನು ಪ್ರಯೋಜನವಾಗುತ್ತದೆ.ವಿತ್ತ ಸಚಿವಾಲಯದ ಹೇಳಿಕೆ ಸರಿಯಾಗಿದೆ.
ಸತೀಶ್ ರಾವ್: ಇಂತಹ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ನಾವು ದೇಶದ ಪರಿಸ್ಥಿತಿಯಲ್ಲಿ ಕೈ ಜೋಡಿಸಬೇಕು. ಒಳ್ಳೆಯ ದಿನಗಳು ಬಂದೆ ಬರುವುದು. ಮೋದಿ ಅಂಥ ಪ್ರಧಾನಿ ಇರುವಾಗ .ಜೈ ಭಾರತ್, ಜೈ ಮೋದಿಜಿ
ಸಣ್ಣಮಾರಪ್ಪ. ಚಂಗಾವರ: ಇರುವ ಯೋಜನೆಗಳನ್ನೆ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಹೊಸ ಯೋಜನೆಗಳ ಅವಶ್ಯಕತೆ ಇಲ್ಲ. ನಿಷ್ಠೆಯಿಂದ ಸರ್ಕಾರ, ಅಧಿಕಾರಿಗಳು ಕೆಲಸ ಮಾಡಿದರೆ ದೇಶದ ಹಾಗೂ ಜನರಲ್ಲಿ ಅಭಿವೃದ್ಧಿ ಕಾಣಬಹುದು
ಇಬ್ರಾಹಿಂ ಸಯೀದ್ ವಿಕೆ: 20 ಲಕ್ಷ ಕೋಟಿ ಏನೋ ಈಗಾಗಲೇ ಬಿಡುಗಡೆ ಯಾಗಿದೆ ಅಲ್ಲವೇ ಸಧ್ಯಕ್ಕೆ ಅದು ಸಾಕು. ಅದು ಮುಗಿವುವಾಗ ಹೇಳ್ತೀನಿ
ದಯಾನಂದ ಕೊಯಿಲಾ: ಈ ವರೆಗೆ ಜಾರಿಯಲ್ಲಿರುವ ಯೋಜನೆಗಳು ಯಾವುದೆಲ್ಲ ಎಂದು ದಯವಿಟ್ಟು ತಿಳಿಸಿ ಅದನ್ನಾದರೂ ಪಡ್ಕೊಳ್ಳಲು ಪ್ರಯತ್ನಿಸಬಹುದಲ್ಲಾ?
ದಾವೂದ್ ಕೂರ್ಗ್: ಮಾಡಿದ ಘೋಷಣೆಗಳೆಲ್ಲಾ ಘೋಷಣೆಯಾಗೆ ಉಳಿದಿರುವಾಗ ಇನ್ನೂ ಸ್ವಲ್ಪ ಘೋಷಣೆ ಮಾಡಬಹುದಿತ್ತು. ಘೋಷಣೆ ಮಾಡಲು ಖರ್ಚು ಇಲ್ವಲ್ಲಾ.
ರಾಧಿಕ ಮಲ್ಯ: ಆರ್ಥಿಕ ಹಿಂಜರತದಿಂದಾಗಿ ಹಾಗೂ ಕೋವಿಡ್-19ದಿಂದ ಸರ್ಕಾರ ಈ ನಿರ್ಣಯ ತಗೆದುಕೊಳ್ಳಬೇಕಾಗಿದೆ . ಹೊಸ ಯೋಜನೆ ಯು ಬದಲು ಇರುವ ಹಣವನ್ನು ಸರಿಯಾಗಿ ಉಪಯೋಗಿಸಿ ದೇಶವನ್ನು ಸಂಕಷ್ಟ ದಿಂದ ಪಾರು ಮಾಡಬೇಕಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.