ಈ ಸಮಯದಲ್ಲಿ ಶಾಲೆ ಆರಂಭಿಸುವ ಚಿಂತನೆ ಬಗ್ಗೆ ಅಭಿಪ್ರಾಯವೇನು?
Team Udayavani, Jun 5, 2020, 6:26 PM IST
ಮಣಿಪಾಲ: ಜುಲೈ ತಿಂಗಳಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿಗಳನ್ನು ಹಂತ ಹಂತವಾಗಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಮೊಹಮ್ಮದ್ ಇಕ್ಬಾಲ್: ಈ ವರ್ಷ ಶಾಲೆ ಆರಂಭ ಮಾಡುದು ಬೇಡ. ಮಕ್ಕಳ ಆರೋಗ್ಯ ಮೊದಲು.
ತುಳಸೀ ದಾಸ್ ಶೆಟ್ಟಿಗಾರ್: ಮಕ್ಕಳಿಗೆ ಆರೋಗ್ಯದ ವಿಷಯದಲ್ಲಿ ಏನಾದರು ಹೆಚ್ಚು ಕಮ್ಮಿ ಆದಲ್ಲಿ ಸರಕಾರ ಸಂಪೂರ್ಣ ಹೊಣೆಗಾರಿಕೆ ಹೊತ್ತುಕೊಳ್ಳುತ್ತೆ ಎಂಬ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ ಕೊಡಲಿ.
ಋತಿಕಾ ಗೌಡ: ಮೊದಲು ಲಸಿಕೆ ಕಂಡು ಹಿಡಿದು ನಂತರ ಶಾಲೆ ತೆರೆಯಲಿ. ಯಾವ ಪೋಷಕರು ತಮ್ಮ ಮಕ್ಕಳ ಪ್ರಾಣ ತೆಗೆಯಲು ಮುಂದಾಗುವುದಿಲ್ಲ . ವಿದ್ಯೆಕ್ಕಿಂತ ನಮ್ಮ ಮಕ್ಕಳ ಪ್ರಾಣ ಮುಖ್ಯ. ಒಂದು ವರ್ಷಧ ವಿದ್ಯೆ ಇಲ್ಲದಿದ್ದರೆ ಏನಾಯಿತು ಬಿಡಿ ಬೇಡ.
ರಾಧಿಕ ಮಲ್ಯ: ಸೊಂಕು ಕಡಿಮೆ ಆಗುವ ತನಕ ಕಾಯು ಬೇಕು ಅಥವಾ ಪರ್ಯಾಯ ಮಾರ್ಗ ಹುಡುಕ ಬೇಕು. ದೊಡ್ಡವರೇ ಸರಿಯಾಗಿ ಜಾಗ್ರತೆ ವಹಿಸುವುದಿಲ್ಲ ಇನ್ನು ಮಕ್ಕಳು ಮಕ್ಕಳೆ ? ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಯಾಗಲಿ ಅಥವಾ ಖಾಸಗಿ ಶಾಲೆಯಾಗಲಿ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವೂವಿಲ್ಲ.
ಅರುಣಾ ಎನ್ ಗೌಡ: ಕರ್ಮ! ಮಕ್ಕಳಿಗೆ ಸಣ್ಣ ಶೀತ ಬಂದರೆನೇ ಸುಧಾರಿಸಲು 15 ದಿನ ಬೇಕು ಮೆಡಿಸನ್ ಇದ್ದು. ಇನ್ನು ಕೋವಿಡ್-19 ಮದ್ದೇ ಇಲ್ಲ ಪಾಪ ಆ ಏಳೆಯ ಮನಸ್ಸಿನ ಮಕ್ಕಳು ಹೇಗೆ ತಡೆದುಕೊಂಡಾವು.
ರವಿ ಅಯ್ಯರ್: ನಾವು ಫೀಸ್ ಕಟ್ಟಿರುವ ಶಾಲೆ ಮಕ್ಕಳ ಜವಾಬ್ದಾರಿ ಹೊತ್ತು ಏನಾದರೂ ಹೆಚ್ಚು ಕಮ್ಮಿಯಾದರೆ ಶಾಲೆಯ ಆಡಳಿತ ಮಂಡಳಿ ಪೂರ್ಣ ಜವಾಬ್ದಾರಿ ವಹಿಸಿ ಕೊಳ್ಳುವುದಾದರೆ ಗ್ಯಾರೆಂಟಿ ಕಳಿಸ್ತೀವಿ ಏನಾದರೂ ಹೆಚ್ಚು ಕಮ್ಮಿಯಾದರೆ ಸರಕಾರಕ್ಕೆ ಮನವಿ ಸಲ್ಲಿಸಲ್ಲ, ಖಾಸಗಿ ಆಡಳಿತ ಮಂಡಳಿ ಕೊಡಬೇಕು. ಇದಕ್ಕೆ ಒಪ್ಪಿಗೆ ಎಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು.
ಗೀತಾಕೃಷ್ಣ ನೆಟ್ಲ: ಈ ನಿರ್ಧಾರ ಸರಿಯಲ್ಲ. ಲಸಿಕೆ ಔಷಧಿಗಳಿಲ್ಲದ ಮೇಲೆ ಶಾಲೆ ತೆರೆಯಲು ಅವಸರ ಸಲ್ಲದು. ಕೋವಿಡ್-19 ಹರಡುವ ಪರಿಯೂ ಗುಪ್ತವಾಗಿದ್ದು ಯಾರಿಂದ ಎಲ್ಲಿಂದ ಹೇಗೆ ಬಂತು ಅಥವಾ ಬರುವುದು ಎಂಬುದೇ ಸ್ಪಷ್ಟವಿಲ್ಲದ ಮೇಲೆ ಮಕ್ಕಳ ಜೀವ ರಕ್ಷಕರು ಯಾರು? ಕೊರೊನದ ಒಂದೂ ಪ್ರಕರಣ ಇಲ್ಲವೆಂದು ದೃಢವಾದ ಮೇಲೆ ಶಾಲೆ ತೆರೆಯುವುದು ಸೂಕ್ತ.
ರವೀಶ ರವೀಶ: ನನ್ನ ಪ್ರಕಾರ ಈಗಲೇ ಶಾಲೆ ತೆರೆಯುವುದು ಬೇಡ ಏಕೆಂದರೆ ಮೊದಲು ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆಗಳನ್ನು ನಡೆಸಿ ಇನ್ನೂ ಎರಡು ತಿಂಗಳ ನಂತರ ಶಾಲೆಯನ್ನು ತೆರೆಯಿರಿ ಎರಡು ತಿಂಗಳ ನಂತರವೂ ಕೋವಿಡ್-19 ಹತೋಟಿಗೆ ಬರದಿದ್ದರೆ ? ಮತ್ತೆ ಒಂದು ತಿಂಗಳು ಮುಂದೂಡಿ ಈ ರಜೆಗಳನ್ನು ಮುಂದಿನ ರಜಾದಿನಗಳು ಹಾಗೂ ಹಬ್ಬ ಹರಿದಿನಗಳು ದಸರಾ ರಜೆ ಕೊಡುವ ದಿನಗಳು ಹಾಗೂ ಮುಂದಿನ ಬೇಸಿಗೆ ಬರುವ ರಜೆಗಳು ಕಡಿತ ಮಾಡಿ ಅನ್ನುವ ಸಲಹೆ ನನ್ನದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.