ಸಾರ್ವಜನಿಕ ಸ್ವತ್ತು ಹಾನಿ ಮಾಡುವವರಿಗೆ ದಂಡ, ಶಿಕ್ಷೆ ವಿಧಿಸುವುದು ಪರಿಣಾಮಕಾರಿಯಾಗಲಿದೆ?
Team Udayavani, Dec 30, 2019, 4:37 PM IST
ಮಣಿಪಾಲ: ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡುವವರಿಗೆ ಆಸ್ತಿ ಜಪ್ತಿ ಬದಲು ದಂಡ, ಶಿಕ್ಷೆ ವಿಧಿಸುವುದು ಪರಿಣಾಮಕಾರಿ ಹೆಜ್ಜೆಯಾಗಲಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಶ್ರೀಧರ್ ಉಡುಪ: ಸಾರ್ವಜನಿಕ ಆಸ್ತಿ ನಾಶ ಮಾಡುವ ದುಷ್ಕರ್ಮಿಗಳಿಗೆ ಶಿಕ್ಷೆ ವ ದಂಡವನ್ನು ವಿಧಿಸುವುದರೂಂದಿಗೆ ನಷ್ಟ ಪರಿಹಾರಕ್ಕಾಗಿ ತಪ್ಪಿಸ್ಥತ್ತರ ಆಸ್ತಿ ಜಪ್ತಿಯನ್ನು ಮಾಡಿದರೆ ಅಪರಾಧ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.ಆದರೆ ಈ ವಿಷಯದಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ಸೂಕ್ತ ರೀತಿಯಲ್ಲಿ ಕಾನೂನು ಜಾರಿಯ ಹೊಣೆ ಸರಕಾರ ಹಾಗೂ ನ್ಯಾಯಾಂಗದ ಮೇಲೆ ಇದೆ.
ರಮೇಶ್ ಭಟ್ ನಕ್ರೆ: ಸರಿ ಇದೆ.ಗಾಂಧಿಯವರ ಫೋಟೊ ಪ್ರತಿಮೆ, ನೋಟುಗಳಲ್ಲಿ ರಾರಾಜಿಸುವುದರ ಬದಲು ಗಾಂಧಿ ಹಾಕಿ ಕೊಟ್ಡ ಅಹಿಂಸಾತ್ಮಕ ಪ್ರತಿಭಟನೆ ಯಾರೂ ಮಾಡಬಹುದಲ್ಲವೇ?
ಸತೀಶ್ ಅಡವೀಶಪ್ಪ: ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರ ಆಸ್ತಿಯನ್ನ ಜಪ್ತಿ ಮಾಡುವಂತಾಗಬೇಕು.
ಮಹದೇವ ಗೌಡ: ಸರಿ ಇದೆ . ವಿರೋಧ ಪಕ್ಷಗಳು ಇನ್ನಿತರ ಸಂಘಟನೆಗಳು ಪ್ರತಿಭಟನೆ ನಡೆಸುವದು ಸರಿ ಸಾರ್ವಜನಿಕರಿಗೆ ಯಾಕೆ ಪ್ರತಿಭಟನೆ ಜವಬ್ದಾರಿ ನಮ್ಮ ವೄವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಇರುವದು ಆಡಲಿತ ಪಕ್ಷಗಳ ವೈಪಲೄಗಳನ್ನು ಎತ್ತಿ ಅಡಿಯೊದಕ್ಕೆ ತಾನೆ ಮಾಡಿಕೊಂಡಿರುವದು ಮತ್ತೇಕೆ ಸಾರ್ವಜನಿಕರು ಬಾಗವಹಿಸುವದು ಅಲ್ವಾ.
ಜೀವೆಂದರ್ ಪೂಜಾರಿ: ನಮ್ಮ ದೇಶದ ರಾಜಕೀಯ ಬಹಳ ಕೆಟ್ಟದು, ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಸಾಮಾನ್ಯ ಜನರನ್ನು ಉಪಯೋಗಿಸಿ ತಮ್ಮ ಕಾರ್ಯಗಳನ್ನು ಈಡೇರಿಸುತಾರೆ. ಉದಾಹರಣೆಗೆ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಎಂತಹ ವಿಪರ್ಯಾಸ ದೇಶದ ಬಗ್ಗೆ ಯಾರಿಗೂ ಅಭಿಮಾನ ಇಲ್ಲ ಎಲ್ಲರಿಗೂ ಅಧಿಕಾರ ಬೇಕು . ಗಲಾಟೆ ಮಾಡಲು ಪ್ರಚೋದಿಸಿ ಜನರು ಸತ ಮೇಲೆ ಅವರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರಿಂದ ಹಣ ವಸೂಲಿ ಮಾಡಿ.
ಚೇತನ್ ಎಸ್ ಗೌಡ: ಹೌದು. ಆದ್ರೆ ಇದಕ್ಕೂ ಹಿಂದಿನ ವಿಚಾರಗಳ ಬಗ್ಗೆ ಮಾತಾಡ್ತಾರೆ, ಅಂತವರು ಅರ್ಥ ಮಾಡ್ಕೊಬೇಕು ಇನ್ನು ಮುಂದಾದರೂ ಸಾರ್ವಜನಿಕ ಆಸ್ತಿ ನಾಶ ತಪ್ಪಿದರೆ ಅದು ನಮಗೆ ಟ್ಯಾಕ್ಸ್ ಹೊರೆ ಕಡಿಮೆ ಮಾಡುತ್ತೆ… ಇವತ್ತು ಒಂದು ಬಸ್ ಸುಟ್ಟು ಹಾಕಿದರೆ ಅದು ಇಂಡೈರೆಕ್ಟ್ ಆಗಿ ನಮ್ಮಿಂದಲೇ ವಸೂಲಿಯಾಗುತ್ತೆ ಅಲ್ವೇ?
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಮಾಡಬೇಕು.ಇದನ್ನು ರಾಷ್ಟ್ರವ್ಯಾಪಿ ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.. ಪ್ರತಿಭಟನೆ ಹೆಸರಲ್ಲಿ ರಾಷ್ಟ್ರದ ಆಸ್ತಿ ಪಾಸ್ತಿ ಹಾನಿ ಮಾಡೋದೇ ಕೆಲ ಮತೀಯ ಸಂಘಟನೆಗಳ ಉದ್ದೇಶ ಅಂತಹ ಸಂಘಟನೆ ಗಳನ್ನು ಹತ್ತಿಕ್ಕೋದು ಇಂದಿನ ಅಗತ್ಯ..
ಕಣ್ಣೊಳಗಿನ ಕನಸು: ಪ್ರತಿಭಟನೆ ಅನ್ನೋದು ತಮ್ಮ ಅಭಿಪ್ರಾಯ ಸರಕಾರಕ್ಕೆ ತಿಳಿಸೋದಷ್ಟೇ. ಸಾರ್ವಜನಿಕ ಆಸ್ತಿ ಹಾನಿ ಮಾಡೋದು ಅಂದ್ರೆ ಅದು ಕಾನೂನು ಕೈಗೆ ತೆಗೆದುಕೊಳ್ಳೋದು. ಯಾರು ನಷ್ಟ ಮಾಡಿರ್ತಾರೋ ಅವರೇ ಅದಕ್ಕೆ ಜವಾಬ್ದಾರರು. ಅವರೇ ಅದನ್ನ ತುಂಬಬೇಕು. ಆಗ ಹಾನಿ ಮಾಡೋರು ಖಂಡಿತವಾಗಿ ಪ್ರತಿಭಟನೆ ಸಂದರ್ಭ ಶಾಂತವಾಗಿ ಮಾಡ್ತಾರೆ. ಇದು ಸರಿಯಾದ ಕ್ರಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.