ಸೇನಾ ಮಹಾದಂಡನಾಯಕ ನೇಮಕಾತಿಯಿಂದ ಭಾರತೀಯ ಸೇನೆ ಮತ್ತಷ್ಟು ಬಲಗೊಳ್ಳಲಿದೆಯೇ?
Team Udayavani, Dec 31, 2019, 4:16 PM IST
ಮಣಿಪಾಲ: ಸೇನಾ ಮಹಾದಂಡನಾಯಕ ನೇಮಕಾತಿಯಿಂದ ಭಾರತೀಯ ಸೇನೆ ಮತ್ತಷ್ಟು ಬಲಗೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಮಾಸ್ತಿ ನಾಯಕ್: ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಇಲಾಖೆ ಅಂತಾ ಒಂದಿದೆ , ಜೊತೆಗೆ ರಕ್ಷಣಾ ಮಂತ್ರಿ ಕೂಡ ಇದ್ದಾರೆ.
ಇನ್ನು ರಾಷ್ಟ್ರಪತಿಯವರನ್ನು ಸೈನ್ಯದ ಮೂರು ವಿಭಾಗದ ಮಹಾದಂಡನಾಯಕರು ಅಂತ ನಾವು ಓದಿದನೆನಪು. ಅವರಿಗೆ ಮಾತ್ರ ಯಾವುದೇ ಒಂದು ದೇಶದ ವಿರುಧ್ಧ ಪರಿಸ್ಥಿತಿಯ ತೀವ್ರತೆಯ ಆಧಾರದಮೇಲೆ ಯುದ್ಧವನ್ನು ಘೋಷಣೆ ಮಾಡುವ ಅಧಿಕಾರ ಇದೆ ಎಂಬ ವಿಚಾರ ತಿಳಿದಿದ್ದೆವು . ಒಂದೊಮ್ಮೆ ರಾಷ್ಟ್ರಪತಿಯವರು ಯಾವದೇ ದೇಶದ ಮೇಲೆ ಯುದ್ಧ ಘೋಷಣೆ ಮಾಡಿದರೂ ಕೂಡ ಆಕುರಿತು ಒಂದು ವಾರದ ಒಳಗೆ ಲೋಕಸಭೆಗೆ ವಿವರಣೆ ನೀಡಬೇಕಾಗುತ್ತದೆ ಎಂಬ ವಿಚಾರತಿಳಿದ್ದೆ .
ಆದರೆ ಈಗ ಕೇಂದ್ರ ಸರ್ಕಾರ ಸೈನ್ಯಕ್ಕೆ ಮಹಾದಂಡನಾಯಕರ ಹುದ್ದೆಯನ್ನು ಪ್ರತ್ಯೇಕವಾಗಿ ಸ್ರಷ್ಟಿಸಿದೆ. ಇದು ಯಾಕೆ ಅಂತಾನೆ ಅರ್ಥವಾಗುತ್ತಿಲ್ಲ. ರಾಷ್ಟ್ರಪತಿಯವರಿಗಿದ್ದ ಮಹಾದಂಡನಾಯಕ ಅನ್ನುವ ಗೌರವವನ್ನು ಕಸಿದುಕೊಳ್ಳಲಾಯಿತೇ ?
ಇದು ರಾಷ್ಟ್ರದ ಹಿತದ್ರಷ್ಟಿಯಿಂದ ಎಷ್ಟು ಉಪಯುಕ್ತ . ಮುಂದಿನ ದಿನಗಳಲ್ಲಿ ಸೈನ್ಯದ ಮೂರು ವಿಭಾಗಗಳ ನಡುವೆ ಹೊಂದಾಣಿಕೆಯಾದರೆ ದೇಶದ ಭದ್ರತೆಯ ದ್ರಷ್ಟಿಯಿಂದ ಅಪಾಯಕಾರಿಯಾಗಲಾರದೆ . ಅಥವಾ ಮಹಾದಂಡನಾಯಕರಿಗೆ ಅಧಿಕಾರದ ಮಹತ್ವಾಕಾಂಕ್ಷೆ ಕಾಡಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಗದೇ . ಒಟ್ಟರೆಯಾಗಿ ಇದೊಂದು ಅಪಾಯಕಾರಿ ನಡೆ ಎಂದೆನಿಸುತ್ತಿದೆ .
ಶ್ರೀಧರ್ ಉಡುಪ: ಮಹಾದಂಡನಾಯಕನ ನೇಮಕಾತಿಯಿಂದ ಸೇನೆಯ ಮೂರು ವಿಭಾಗಗಳಲ್ಲಿ ಇನ್ನೂ ಹೆಚ್ಚಿನ ಸಮನ್ವಯತೆಯನ್ನು ಸಾಧಿಸಬಹುದು ಹಾಗೂ ಸೇನೆಯು ತ್ವರಿತಗತಿಯ ಪರಿಣಾಮಕಾರಿ ಯೋಜನೆಯನ್ನು ರೂಪಿಸಲು ಮತ್ತು ನಿರ್ಧಾರವನ್ನು ತೆಗೆದುಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ.
ರಾಜೇಶ್ ಅಂಚನ್ ಎಂ ಬಿ: ಹೌದು ಇದು ಕೇಂದ್ರ ಸರ್ಕಾರದ ಪರಿಣಾಮಕಾರಿ ಪ್ರಯತ್ನ.. ನಮ್ಮ ಸೈನಿಕರ ಆಗುಹೋಗುಗಳ ನಿರ್ವಹಣೆ ಮತ್ತು ಶತ್ರು ದೇಶವನ್ನು ಸಮರ್ಥವಾಗಿ ಎದುರಿಸೋ ನಿಟ್ಟಿನಲ್ಲಿ ಇಂತಹ ಒಂದು ಹುದ್ದೆ ಅವಶ್ಯಕತೆ ಇತ್ತು ಮತ್ತು ಅದಕ್ಕೆ ಬಿಪಿನ್ ರಾವತ್ ಅತ್ಯಂತ ಸೂಕ್ತ ಆಯ್ಕೆ..ಅವರಿಗೆ ಸೈನ್ಯದ ಬಗ್ಗೆ ಮತ್ತು ಶತ್ರು ರಾಷ್ಟ್ರಗಳ ಚಲನವಲನ ಬಗ್ಗೆ ತುಂಬಾ ನಿಗಾ ವಹಿಸೋ ಛಾತಿ ಇದೆ
ನಾಗಭೂಷಣ್ ಬಿ ಎಂ: ಮಹಾದಂಡನಾಯಕ ಪಕ್ಷತೀತ ವಾಗಿದ್ದರೆ ಸೇನೆ ಬಲಗೂಳ್ಳುವುದು ಖಂಡಿತ. ಆದರೆ, ಸರ್ವಾಧಿಕಾರಿ ಗುಣ ಸ್ವಭಾವ ಇದ್ದರೆ ಪಾಕಿಸ್ತಾನದ ದಂಡ ನಾಯಕನ ರೀತಿ ಎಲ್ಲ ವಿಷಯಗಳಿಗೆ ಮೂಗು ತೊರಿಸುವುದು ಖಂಡಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.