ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹಿಂತಿರುಗಿಸಿ ಎಂಬ ಆದೇಶದ ಕುರಿತು ಅಭಿಪ್ರಾಯವೇನು?
Team Udayavani, Jun 13, 2020, 3:54 PM IST
ಮಣಿಪಾಲ: ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಿ ಎಂದು ರಾಜ್ಯ ಸರಕಾರ ಕಠಿಣ ಆದೇಶ ನೀಡಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ರಮೇಶ್ ಭಟ್ ನಕ್ರೆ: ಸರ್ಕಾರದ ಎಲ್ಲಾ ಸೌಲಭ್ಯ ಸಿಗುವಾಗ ಬಿಪಿಎಲ್ ಪ್ರಶ್ನೆಯೇ ಬರುವುದಿಲ್ಲ .ಬಿಪಿಎಲ್ ಸೌಲಭ್ಯ ಬೇಕೇ ಎನ್ನುವವರು ನೌಕರಿ ತೊರೆಯಲಿ.
ಶ್ರೀನಿವಾಸ್ ಎಂ. ಎ: ಸರಕಾರಿ ನೌಕರರಿಗೆ ಅಷ್ಟೇ ಅಲ್ಲ 50000 ಸಂಬಳ ತೆಗೆದುಕೊಳ್ಳುವ ಖಾಸಗಿ ನೌಕರರಿಗೂ ಅನ್ವಯಿಸುವಂತೆ ಕಠಿಣ ಕಾನೂನು ಕ್ರಮ ತರಬೇಕು ನಾನು ಕಂಡಂತೆ ಪ್ರತಿಷ್ಠಿತ ಕಂಪನಿಯಲ್ಲಿ ರುವ ನೌಕರರು ಸಹ ತಮ್ಮ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ
ಗಂಗಾಧರ ರಾವ್ ಕೊಕ್ಕಡ: ಅಯ್ಯೋ ಅಯ್ಯೋ ಬಿಡಿ ಹದಿಮೂರು ಹದಿನೈದು ಮಕ್ಕಳು ಓಡಾಲು ಕಾರು ಬ್ಯೆಕ್ ಮೂರು ನಾಲ್ಕು ಅಂತಸ್ತಿನ ಮನೆ ಇದ್ದವರಿಗೆ ಬಿ. ಪಿ. ಎಲ್ ಕಾರ್ಡ್ ಇದೆ . ಹ್ಞಾಂ ಕಾರಣ ಅವರು ಕಡು ಬಡವರು ಸ್ವಾಮಿ
ರಾಜು ಕೆ ಉದ್ದಮನಹಳ್ಳಿ: ಒಳ್ಳೆಯದು, ಆದರೆ ಅರೆ ಸರ್ಕಾರಿ ನೌಕರರನ್ನು ಈ ಆದೇಶದಿಂದ ಹೊರಗಿಡಬೇಕು, ಕಾರಣ ಇವರಿಗೆ ಐದು ಅಥವಾ ಆರು ತಿಂಗಳಿಗೊಮ್ಮೆ ವೇತನ ಸಿಗೋದು ಅದೂ ಕೂಡಾ ಒಂದೋ ಎರಡೋ ತಿಂಗಳ ವೇತನ ಮಾತ್ರ.
ಸಚೀನ ಕುಲಕರ್ಣಿ: ಜನಸೇವೆಯೆ ಜನಾರ್ಧನನ ಸೇವೆ ಅಂತಾ ಜನರಿಂದ ಆಯ್ಕೆಗೊಂಡ ಶಾಸಕರಿಗೆ ಅನುದಾನ ಯಾಕೆ ವೇತನ ಯಾಕೆ? ಇವರಿಗೆ ಇದೆಲ್ಲ ಸೌಲಭ್ಯ ಬೇಕು ಆದರೆ ಎಲ್ಲರಿಗೂ ಬಿಪಿಎಲ್ಲ್ ಕಾರ್ಡ್ ಇರೋದು ತಪ್ಪಾ
ಕಿರುಗುಂದ ನಜೀರ್: ಸರ್ಕಾರಿ ನೌಕರರು ಮಾತ್ರ ಅಲ್ಲ ಅರ್ಥಿಕವಾಗಿ ಅನುಕೂಲ ಇರುವವರ ಬಿಪಿಎಲ್ ಕಾರ್ಡಗಳನ್ನು ರದ್ದು ಪಡಿಸಬೇಕು, ಜೊತೆಗೆ ಇವರು ಬಡವರೆಂದು ವರಮಾನ ಪತ್ರ ಕೊಟ್ಟ ಕಂದಾಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ರಾಘವೇಂದ್ರ ಶೇಟ್: ಒಳ್ಳೆಯ ನಿರ್ಧಾರ ಅಧಿಕಾರಿಗಳು ಹಣದಾಸೆಗಾಗಿ ಮನೆ ಮನೆಗೆ ಕಾರ್ಡ್ ಮಾಡಿಕೊಟ್ಟಿದ್ದಾರೆ ನಿಜವಾದ ಬಡವರಿಗೆ ಇನ್ನೂ ಕಾರ್ಡ್ ಸಿಗಲಿಲ್ಲ ಸರಿಯಾಗಿ ತನಿಖೆ ನಡೆಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.