ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಪ್ರಾಣಿ ಪ್ರೀತಿಗೆ ಭಾರಿ ಮೆಚ್ಚುಗೆ..!
ಶ್ರೀರಾಜ್ ವಕ್ವಾಡಿ, May 10, 2021, 4:47 PM IST
ವಾರಣಾಸಿ : ಕೋವಿಡ್ ಸಂಕಷ್ಟಕ್ಕೆ ಮತ್ತೆ ದೇಶ ನಲುಗಿ ಹೋಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಕಳೆದ ವರ್ಷದ ಕೋವಿಡ್ ಸೋಂಕಿನಿಂದಾಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಭಾರತ ಮತ್ತೆ ಈ ಭಾರಿಯ ರೂಪಾಂತರಿ ಸೋಂಕಿಗೆ ಅಡಿಮೇಲಾಗಿ ಹೋಗಿದೆ ಎನ್ನುವುದರಲ್ಲಿ ಅನುಮಾನ ಬೇಕಿಲ್ಲ.
ಕೋವಿಡ್ ನ ಕಾರಣದಿಂದಾಗಿ ಜನಸಾಮಾನ್ಯರ ಬದುಕು, ಭವಿಷ್ಯ ಇಲ್ಲದಂತಾಗಿದೆ. ಇನ್ನು ಬೀಡಾಡಿ ಪ್ರಾಣಿಗಳಿಗೂ ಕೂಡ ಅಂತಹದ್ದೇ ಸ್ಥಿತಿ ಎದುರಾಗಿದೆ. ದೇಶದಾದ್ಯಂತ ಕೋವಿಡ್ ಸೋಂಕಿನ ಕಾರಣದಿಂದ ತುತ್ತು ಅನ್ನಕ್ಕಾಗಿ ಕಷ್ಟ ಪಡುತ್ತಿರುವ ಬಡ ಕುಟುಂಬಗಳ ದೃಶ್ಯಗಳನ್ನು ಮಾಧ್ಯಮಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನಾವು ದಿನ ನಿತ್ಯ ಕಾಣುತ್ತಿದ್ದೇವೆ.
ಓದಿ : ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು
ಜನರು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪರಸ್ಪರ ಸಹಾಯ ಮಾಡಲು ಮುಂದಾಗುವುದರ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೇ, ಬೀಡಾಡಿ ಪ್ರಾಣಿಗಳ ಬಗ್ಗೆ ಹೆಚ್ಚಿನವರು ಅಸಡ್ಡೆ ತೋರುತ್ತಾರೆ. ನಮ್ಮ ಹೃದಯಗಳನ್ನು ಕರಗಿಸಿ ನಮ್ಮನ್ನು ಸಂತೋಷಪಡಿಸುವಂತಹ ಒಂದು ಸುದ್ದಿಯನ್ನು ನಾವು ಇತ್ತೀಚೆಗೆ ನೋಡಿದ್ದೇವೆ.
ಹೌದು, ಹ್ಯಾಂಡ್ ಪಂಪ್ ನಿಂದ ನೀರು ಕುಡಿಯಲು ವಾರಣಾಸಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ನಾಯಿಗೆ ಸಹಾಯ ಮಾಡಿದ ವೀಡಿಯೊವೊಂದು ಸಾಮಾಜಿಕ ಜಾಲತಾಣದಾದ್ಯಂತ ಭಾರಿ ಸುದ್ದಿ ಮಾಡುತ್ತಿದೆ. ಪೊಲೀಸ್ ಸಿಬ್ಬಂದಿ ನಾಯಿಗೆ ನೀರು ಕುಡಿಯಲು ಹ್ಯಾಂಡ್ ಪಂಪ್ ನನ್ನು ಪಂಪ್ ಮಾಡುವ ಮೂಲಕ ಆ ದಣಿದ ನಾಯಿಗೆ ಸಹಾಯ ಮಾಡಿದ ಪ್ರಾಣಿ ಪ್ರೀತಿ ನೀಡಿದ ಪೊಲೀಸರ ಬಗ್ಗೆ ಈಗ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಾದ್ಯಂತ ಭಾರಿ ಸುದ್ದಿ ಮಾಡುತ್ತಿರುವ ವಾರಣಾಸಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಪೇದೆಯೊಬ್ಬರು ನಾಯಿಗೆ ಹ್ಯಾಂಡ್ ಪಂಪ್ ನ ಮೂಲಕ ನೀರುಣಿಸುತ್ತಿರುವ ದೃಶ್ಯವನ್ನು ಐಪಿಎಸ್ ಅಧಿಕಾರಿ ಸುಕೃತಿ ಮಾಧವ್ ಮಿಶ್ರಾ ಅವರು @policemedianews ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ರೀ ಟ್ವೀಟ್, ಶೇರ್ ಆಗಿದೆ.
यह तस्वीर बाबा की नगरी #काशी_विश्वनाथ वाले वाराणसी पुलिस कमिश्नरेट की है….
पुलिस हमेशा सेवा और सुरक्षा के भावना से कार्य करती है… इसलिए आप भी अपने जनपद में स्वस्थ समाज के लिए पुलिस की हर संभव मदद करें।@SatishBharadwaj @varanasipolice #UPPolice pic.twitter.com/Eb9iZNFegP— PoliceMediaNews (@policemedianews) May 7, 2021
ಮನುಷ್ಯನು ನಾಯಿಗಳನ್ನು ಪ್ರೀತಿಸಿದರೆ, ಅವನು ಒಳ್ಳೆಯ ಮನುಷ್ಯ. ನಾಯಿಗಳು ಮನುಷ್ಯನನ್ನು ಪ್ರೀತಿಸಿದರೆ, ಅವನು ಒಳ್ಳೆಯ ಮನುಷ್ಯ! ಎಂಬ ಅಡಿ ಬರಹದೊಂದಿಗೆ ಈ ದೃಶ್ಯ ಜನರ ಪ್ರೀತಿಗೆ ಪಾತ್ರವಾಗುತ್ತಿದೆ.
ಸದ್ಯ, ಈ ಪೋಸ್ಟ್ 25 ಸಾವಿರಕ್ಕಿಂತ ಹೆಚ್ಚು ಲೈಕ್ ಗಳನ್ನು, 2300 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು ನೂರಾರು ಕಾಮೆಂಟ್ ಗಳನ್ನು ಗಳಿಸಿ, ಭಾರಿ ಮೆಚ್ಚುಗೆ ಪಡೆಯುತ್ತಿದೆ.
ಓದಿ : ತಮಿಳುನಾಡು ಮಾದರಿಯಲ್ಲಿ ಜನರಿಗೆ ಪರಿಹಾರ ನೀಡಿ: ಸತೀಶ್ ಜಾರಕಿಹೊಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.