Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ
Team Udayavani, Jan 5, 2025, 6:21 PM IST
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.)ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ಡಿ. 14ರಂದು ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕ್ರೀಡಾಂಗಣದಲ್ಲಿ ನಡೆದ “ಯಕ್ಷಸಂಭ್ರಮ -2024’ರ ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ 7 ಸರಕಾರಿ ಹಾಗೂ ಒಂದು ಖಾಸಗಿ ಶಾಲೆಯ ಸುಮಾರು 500 ವಿದ್ಯಾರ್ಥಿಗಳು ರಂಗಪ್ರವೇಶ
ಗೈದು ತಮ್ಮ ಕಲಾ ಪ್ರೌಢಿಮೆಯನ್ನು ಅಭಿವ್ಯಕ್ತಗೊಳಿಸಿದರು.
ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳಾದ ಕಳ್ಮಂಜ ಸರಕಾರಿ ಪ್ರೌಢ ಶಾಲೆ, ನಿಡ್ಲೆ ಸರಕಾರಿ ಪ್ರೌಢ ಶಾಲೆ, ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆ, ಅನಾರು-ಪಟ್ರಮೆ ಸ. ಉ.ಹಿ.ಪ್ರಾ.ಶಾಲೆ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಟ್ಟೂರು ಶ್ರೀ ರಾಮ ಪ್ರೌಢ ಶಾಲೆ ಹಾಗೂ ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ “ಯಕ್ಷಧ್ರುವ ಪಟ್ಲ’ ಇದರ ಯಕ್ಷಶಿಕ್ಷಣ ಯೋಜನೆಯನ್ವಯ ಯಕ್ಷಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆ, ದೇವಿಪ್ರಸಾದ್ ಶಕ್ತಿನಗರ, ಗುರುವಾಯನಕೆರೆ ಹಾಗೂ ಅರುಣ್ ಕುಮಾರ್ ಧರ್ಮಸ್ಥಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕುಣಿತ, ಮಾತುಗಾರಿಕೆ ಹಾಗೂ ಅಭಿನಯದ ತರಬೇತಿ ನೀಡಿ ರಂಗಪ್ರವೇಶಕ್ಕೆ ಅಣಿಗೊಳಿಸಿದ್ದರು.
ವಿದ್ಯಾರ್ಥಿಗಳು ಪೂರ್ವರಂಗ ಸಹಿತ ಕಂಸ ವಧೆ, ಶ್ರೀ ರಾಮ ಪಟ್ಟಾಭಿಷೇಕ, ಕೃಷ್ಣ ಲೀಲೆ, ಸುದರ್ಶನ ವಿಜಯ ಹಾಗೂ ಜಾಂಬವತಿ ಕಲ್ಯಾಣ ಪೌರಾಣಿಕ ಪ್ರಸಂಗಗಳನ್ನು ಸಮರ್ಥ ಹಿಮ್ಮೇಳದ ಸಹಕಾರದಿಂದ ಯಶಸ್ವಿಯಾಗಿ ಪ್ರದರ್ಶಿಸಿ, ಪ್ರೇಕ್ಷಕರ ಮನಗೆದ್ದರು.
ಸಾಂತೂರು ಶ್ರೀನಿವಾಸ ತಂತ್ರಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ
Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ
Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ
Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.