ಸ್ವದೇಶಿ ಚಿಂತನೆಯ ದೀಪಾವಳಿ
Team Udayavani, Oct 24, 2022, 9:00 AM IST
ನಮ್ಮಲ್ಲಿ ಸಂಭ್ರಮಿಸಲು ಆಚರಿಸಲು ಯಾವುದೇ ಡೇಗಳ ಅಗತ್ಯವಿಲ್ಲ ಪ್ರತೀ ಋತುವಿಗೂ ಪಕ್ಷದಲ್ಲೋ ಅಥವಾ ಅಮಾವಾಸ್ಯೆ ಹುಣ್ಣಿಮೆಗಳಿಗೂ ಒಂದಲ್ಲ ಒಂದು ಹಬ್ಬ ಅಥವಾ ಜಾತ್ರೆಯ ಸಂತೆ ಇದ್ದೇ ಇರುವುದು. ಹೀಗಾಗಿ ಕ್ಯಾಲೆಂಡರ್ ನ ದಿನಾಂಕದ ಚೌಕಟ್ಟಿನೊಳಗೆ ಖಾಲಿ ಎಂಬುದೇ ಇಲ್ಲ. ಹಬ್ಬಗಳ ಸೀಸನ್ ಶುರುವಾಗುವುದೇ ಶ್ರಾವಣ ಮಾಸದಿಂದ ಅದು ಕಾರ್ತಿಕದ ದೀಪಾವಳಿಯಂದು ಬಣ್ಣ ಬಣ್ಣದ ಸುಡು ಮದ್ದು ಸಿಡಿಸಿ ಮುಕ್ತಾಯಗೊಳಿಸುತ್ತೇವೆ. ಈ ಸಲವು ಹಬ್ಬಗಳ ರಾಜ ದೀಪಾವಳಿ ಗತ್ತಿನಿಂದ ಬರಲು ಕಾಯುತ್ತಿದ್ದಾನೆ. ಅವನನ್ನು ಬರಮಾಡಿಕೊಳ್ಳಲು ನಾವು ಸಹ ತುದಿಗಾಲಲ್ಲಿ ನಿಂತಿದ್ದೇವೆ.
ನಮಗೆ ದೀಪಾವಳಿ ಈಗ ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ ಶಾಪಿಂಗ್ ಮೇಳದಂತಿದೆ. ನಮ್ಮೆಲ್ಲ ಬೇಡಿಕೆಗಳನ್ನು ರಿಯಾಯಿತಿ ದರದಲ್ಲಿ ಕೊಂಡು ಉಚಿತ ಕೊಡುಗೆಯ ಹಾರ ಹಾಕಿ ಹೊಸ ವಸ್ತುಗಳನ್ನು ಮನೆಗೆ ತಂದು ಕಣ್ತುಂಬಿಸಿಕೊಳ್ಳುವ ಚಿತ್ರಣವೇ ಮಜವಾಗಿರುತ್ತದೆ. ನಾವು ಭಾರತೀಯರೇ ಹಾಗೆಯೇ ಪೊರಕೆ ತರಲೋ ಅಥವಾ ಅಂಗಡಿಯಿಂದ ಉಪ್ಪು ತರಲೋ ವಾರ, ತಿಥಿ ನಕ್ಷತ್ರ ನೋಡುತ್ತೇವೆ ಇನ್ನು ಹಬ್ಬವನ್ನು ಬಿಟ್ಟೆವಾ ಅದು ದೀಪಾವಳಿ ಹಬ್ಬ. ಹತ್ತು ವರ್ಷಗಳ ಹಿಂದೆ ಸಾಮಾನ್ಯವಾಗಿ ಮಧ್ಯಮ ವರ್ಗದಲ್ಲಿ ದೀಪಾವಳಿ ಹಬ್ಬವೆಂದರೆ ಅದರ ಗತ್ತೇ ಬೇರೆಯಾಗಿತ್ತು. ಮಕ್ಕಳು ತರಾವರಿ ಪಟಾಕಿಗಳನ್ನು ತಂದು ಕಿಚ್ಚು ಹಚ್ಚುವ ಮೂಲಕ ಹಬ್ಬದ ತಯಾರಿಗೆ ಸಿಗ್ನಲ್ ಸಿಕ್ಕಿದ ಹಾಗೆ. ಮನೆಯಲ್ಲಿ ಹದಿಹರೆಯದ ಹುಡುಗ ಹುಡುಗಿ ಇದ್ದರಂತೂ ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿನ್ ಸಿನೆಮಾದಲ್ಲಿ ಬಳಸಿದ ಮೋಟರ್ ಸೈಕಲ್ ಅಥವಾ ಬಟ್ಟೆಗಳ ಡಿಮ್ಯಾಂಡ್ ಹಬ್ಬಕ್ಕೆ ಇದ್ದೇ ಇರುತ್ತಿತ್ತು. ಇನ್ನು ಗ್ರಹಿಣಿಯರ ಕಥೆಯೇ ಬೇರೆ ಕಿರ್… ಎಂದು ರಾಗ ಹೊರಡಿಸುವ ಮಿಕ್ಸಿಗೆ, ಬ್ರಹ್ಮಾಂಡವನ್ನೇ ತುಂಬಿದರೂ ಫ್ರಿಡ್ಜ್ ಯಾಕೋ ಚಿಕ್ಕದಾಯಿತು ಎಂಬ ಸಣ್ಣ ಸ್ವಾರ್ಥಕ್ಕೆ, ಧಾರವಾಹಿಯ ನಾಯಕ -ನಾಯಕಿಯ ವರ್ಷಗಟ್ಟಲೆಯಿಂದ ಮುಖ ನೋಡಿ ಜುಗುಪ್ಸೆ ಬಂದು ಟಿವಿಯನ್ನೇ ಬದಲಾಯಿಸಿ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಇವೆಲ್ಲಕ್ಕೂ ಮುಕ್ತಿ ಸಿಗುವ ಒಳ್ಳೆಯ ಮುಹೂರ್ತ ದೀಪಾವಳಿ ಹಬ್ಬವಾಗಿತ್ತು. ಸ್ವಲ್ಪ ಸೆಂಟಿಮೆಂಟ್ ಟಚ್ಚಂತು ಅವಳಿಗೆ ಇದ್ದೇ ಇದೆ.
ಹಬ್ಬದ ತಯಾರಿಗೆ ವಾರದ ಮೊದಲೇ ಶುರುವಾಗುವುದು ಕ್ಲೀನ್ ಮಾಡಿಸುವ ನೆಪದಲ್ಲಿ ಅಟ್ಟದ ಮೇಲೆ ಮಕ್ಕಳನ್ನೋ ಯಜಮಾನನನ್ನೋ ಹತ್ತಿಸಿ ಅವರ ಬೈಗುಳಕ್ಕೆ ಜಾಣ ಕಿವುಡು ಮಾಡಿ ಹಳೆ ಪೇಪರ್, ಪ್ಲಾಸ್ಟಿಕ್ ಡಬ್ಬ, ಹಾಲಿನ ಕವರ್ ಎಲ್ಲವನ್ನು ಗುಜರಿಯವನಿಗೆ ನೀಡಿ ಕೊಟ್ಟಿದ್ದು ಉಳಿಸಿದ್ದು ಎಲ್ಲವನ್ನು ಸೇರಿಸಿ, ಬೇಕೆಂದು ಹಠ ಮಾಡದೆ ಇದ್ದರೂ ಆಗಾಗ್ಗೆ ತಾವು ಇಷ್ಟಪಡುವ ವಸ್ತುಗಳ ಬಗ್ಗೆ ತನ್ನಲ್ಲಿ ಹೇಳುವ ಮಕ್ಕಳ ಮನಸ್ಸನ್ನು ಅರಿತ ಅವಳು ದೀಪಾವಳಿಗೆ ಆ ಉಡುಗೊರೆ ಕೊಟ್ಟು ಅವರ ಖುಷಿಯಲ್ಲಿ ತನ್ನ ಖುಷಿ ಕಾಣುವಳು. ಇನ್ನು ಯಜಮಾನ ಕಥೆ ಹಣತೆಯ ಬತ್ತಿಯಂತೆ ತಾನು ಉರಿದು ಬೂದಿಯಾದರು ಜಗಕೆ ಬೆಳಕ ಕೊಡುವುದನ್ನು ಮರೆಯಲಾರರು. ನೌಕರಿಯಲ್ಲಿ ಇದ್ದರೆ ಬೋನಸ್ ನ ಖುಷಿ ತುಂಬಾ ಹೊತ್ತು ಇರದು ಮನೆ ಮಂದಿಯ ಬೇಡಿಕೆಗೆ ಮೂಲಾಧಾರವೇ ಅವನ ಬೋನಸ್ ಆಗಿರುತ್ತಿತ್ತು. ದೀಪದ ಹಣತೆ ಬೆಳಗಲು ಎಣ್ಣೆ ಹೇಗೆ ಮುಖ್ಯವೋ ಅವನ ಕೊಡುಗೆಯು ಹಾಗೆ ಇರುತ್ತಿತ್ತು.
ಈ ದೀಪಾವಳಿ ನೇರಾನೇರ ಮೂರು ತಲೆಮಾರಿನ ಸಂಬಂಧದ ಕೊಂಡಿ ಬೆಸೆದುಕೊಂಡಿದೆ ಹಳೆಯ ಸಂಪ್ರದಾಯ ಮುರಿಯುವ ಮನಸ್ಸಿರದ ಮುದಿ ಜೀವಗಳು ಊರಲ್ಲೇ ನಿಂತು ಮಗನದೋ ಮಗಳದೊ ಸಂಸಾರ ದೀಪಾವಳಿ ರಜೆ ನೆಪದಲ್ಲಿ ಆದರೂ ಊರಿಗೆ ಬರಲಿ ಎನ್ನುವ ಮಿಡಿತ ಮೊಮ್ಮಕ್ಕಳಿಗೆ ಎಣ್ಣೆಯ ಮಜ್ಜನ, ಹಂಡೆ ಸ್ನಾನ ಮಾಡಿಸಿ ಹಬ್ಬದ ಊಟವ ಬಡಿಸಿ ಸಂಜೆ ಅಂಗಳದಲ್ಲಿ ಹಣತೆ ಹಚ್ಚಿ ಏಕಾಂಗಿತನದ ಕತ್ತಲನ್ನು ಓಡಿಸಿ ಬಾಂಧವ್ಯದ ಪುಟ್ಟ ದೀಪ ಉರಿಸಿ ಅದು ಆರದಂತೆ ಜತನದಿಂದ ಕಾಯುವ ಹಂಬಲ ಆ ಜೀವಕೆ ಇಂದು ಬದಲಾವಣೆಯ ಗಾಳಿ ಹಬ್ಬದ ಮೇಲು ಬೀಸಿದೆ ಕಾರ್ಗತ್ತಲು ಮುಸುಕು ಹೊದ್ದು ಮಲಗುವ ಕಾರ್ತಿಕ ಮಾಸದ ದೀಪಾವಳಿಗೆ ಮನೆ ಮನೆಯಲ್ಲಿ ಪುಟ್ಟ ಹಣತೆಯು ಬೆಳಕು ಕತ್ತಲಿಗೂ ಭಯ ಹುಟ್ಟಿಸುವ ಘಳಿಗೆ ಆ ಒಂದು ಕಾಲದಲ್ಲಿ ಇತ್ತು ನಗರೀಕರಣದ ಈ ಕಾಲಘಟ್ಟದಲ್ಲಿ ವಿದ್ಯುತ್ ದೀಪದ ಅಡಿಯಲ್ಲಿ ಹಣತೆಯ ಬೆಳಕು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿವೆ ಆಧುನಿಕತೆಯನ್ನು ತಬ್ಬಿ ಅದರ ಸಾಂಗತ್ಯದಲ್ಲಿ ಬೆಳೆಯುವ ಯುವ ಜನಾಂಗಕ್ಕೆ ಇಂದಿನ ಹಬ್ಬದ ರೀತಿ ರಿವಾಜುಗಳು ಆಪ್ತ ಕಾರಣ ಇಷ್ಟೇ ಪೂರ್ವಜರಿಗೆ ಕೃಷಿ ಬದುಕಿಗೆ ಮೂಲವಾಗಿತ್ತು ಅದಕ್ಕಾಗಿ ಸಹಕರಿಸುವ ವಸ್ತುಗಳಿಗೂ ಗೌರವ ಕೊಡಬೇಕಿತ್ತು ಬೆಳೆದ ಬೆಳೆಗಳನ್ನು ಪೂಜಿಸಿ ವಂದನೆ ಸಲ್ಲಿಸಿ ಮನೆಮಂದಿ ನೆರೆಹೊರೆಯವರ ಜತೆ ಬಾಂಧವ್ಯದ ಕೊಂಡಿ ಉತ್ತಮ ಪಡಿಸಿಕೊಳ್ಳವ ಆಚರಣೆಯಾಗಿ ಹಬ್ಬದ ರೂಪ ತಳೆಯಿತು. ಇಂದು ಕೃಷಿ ಭೂಮಿ ಬೆರಳೆಣಿಕೆ ಎಷ್ಟಿದೆ ಏನಿದ್ದರೂ ಐಟಿ ಬಿಟಿಗಳ ಕಾರುಬಾರು ರಾತ್ರಿ ಹಗಲಾಗಿ ಹಗಲು ರಾತ್ರಿಯಾಗಿ ವಿರೋಧಾಭಾಸದ ನಡುವೆ ದುಡಿಯುವ ಅವರಿಗೆ ಹಬ್ಬವೆಂದರೆ ರಜೆ ಎಂದರೆ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳ್ಳೋದು ಇಲ್ಲಾಂದ್ರೆ ಪ್ರವಾಸದ ನೆಪದಲ್ಲಿ ಶಾಂತಿ ಅರಸಿ ರೆಸಾರ್ಟ್ ಗಳಲ್ಲಿ ಕಾಲ ಕಳೆದು ಬರುವವರೇ ಅಧಿಕ.
ದಿನದ 24 ಗಂಟೆ ಸಾಲದಾಗಿರುವ ಮೂರು ಅಥವಾ ನಾಲ್ಕು ಸದಸ್ಯರಿರುವ ಸಣ್ಣ ಕುಟುಂಬಕ್ಕೆ ಹಬ್ಬದ ಅಡುಗೆ ದೊಡ್ಡ ತಲೆನೋವು ಸ್ವಲ್ಪ ಮಾಡಿದರೆ ಕಮ್ಮಿ ಜಾಸ್ತಿ ಮಾಡಿದರೆ ಮಿಕ್ಕಿ ವೇಸ್ಟ್ ಆಗುವ ಭಯ ಹೀಗಾಗಿ ಎಲ್ಲದಕ್ಕೂ ರೆಡಿಮೇಡ್‌ಗೆ ಮೊರೆ. ರಂಗೋಲಿಯಿಂದ ಹಿಡಿದು ತೋರಣಕ್ಕು ಆನ್ಲೈನ್ ನಲ್ಲಿ ಹುಡುಕಾಟ. ನಮಗಾಗಿ ಹಬ್ಬವನ್ನು ಆಚರಿಸುವುದಕ್ಕಿಂತಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲು ಆಚರಿಸುವುದಕ್ಕಾಗಿ ಇದ್ದಂತಿದೆ ಈಗಿನ ಟ್ರೆಂಡ್ ಶುಭಾಶಯಗಳ ವಿನಿಮಯ ವಾಟ್ಸ್‌ಆ್ಯಪ್‌ನಲ್ಲಿ ಮುಗಿದುಬಿಡುತ್ತದೆ ಶುಭಾಶಯ ಕೋರುವ ಗ್ರೀಟಿಂಗ್ಸ್ ಅಡ್ರೆಸ್ ಇಲ್ಲದೆ ಪೋಸ್ಟ್ ಬಾಕ್ಸ್‌ನಲ್ಲಿ ಕೊಳೆಯುತ್ತಿದೆ ಸಂಸ್ಕೃತಿ ಸಂಪ್ರದಾಯದ ರಾಯಭಾರಿಯಾಗಿರುವ ದೀಪಾವಳಿ ಹಬ್ಬವನ್ನು ಆಧುನಿಕತೆಯ ಜಗಮಗಿಸುವ ಬೆಳಕಿನಲ್ಲಿ ಪುಟ್ಟ ಹಣತೆಗೂ ಸ್ಥಾನ ನೀಡೋಣ ಗೋಣುಮುರಿದು ಮೊಬೈಲ್‌ನಲ್ಲಿ ಮುಳುಗಿರುವ ಯುವ ವಾಹಿನಿ ಕತ್ತೆತ್ತಿ ಆಕಾಶಬುಟ್ಟಿಯ ನೋಡಲಿ ಮನ ಬಿಚ್ಚಿ ಸಂಭ್ರಮಿಸಲಿ ಎಂಬ ಸಣ್ಣ ಹಾರೈಕೆ.
– ವಿದ್ಯಾ ಶೆಣೈ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.