ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ
Team Udayavani, Oct 24, 2022, 12:00 PM IST
ದೀಪಾವಳಿ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಂತಸದಿ ನಾವಿರಿಸುವ ಹೆಜ್ಜೆಯದು. ಪುಟ್ಟ ಮಕ್ಕಳಿಂದ ಹಿರಿಯವರೂ ಕೂಡ ಆನಂದದಿಂದ ಆಚರಿಸುವ ಆಚರಣೆಯದು.
ಆ ಆಚರಣೆಯು ತಪ್ಪಲ್ಲ, ಅದರ ಹಿಂದಿನ ಉದ್ದೇಶವು ತಪ್ಪಲ್ಲ, ನಡೆಸುತ್ತಿರುವ ವಿಧಾನವೂ ತಪ್ಪಲ್ಲ. ಆದರೆ ಆಚರಣೆಯ ಖುಷಿಯಲ್ಲಿ ನಾವು ಏನನ್ನೋ ಮರೆಯುತ್ತಿದ್ದೇವೆ. ಏನದು? ಏನನ್ನು ಮರೆಯುತ್ತಿದ್ದೇವೆ ನಾವು? ನಮ್ಮಿಂದ ಆಗುತ್ತಿರುವ ತಪ್ಪಾದರೂ ಏನು? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಸರಿಯಾಗಿ ಯೋಚಿಸಿದರೆ ನಿಮಗೆ ಅದರ ಉತ್ತರ ತಿಳಿಯುತ್ತದೆ.
ದೀಪಾವಳಿ ಎಂಬ ಹೆಸರಲ್ಲೇ ದೀಪವಿದೆ. ದೀಪಾವಳಿಗೆ ಚೀನದಿಂದ ಆಮದು ಮಾಡಿಕೊಂಡ ವಸ್ತುಗಳನ್ನು ಬಳಸುವ ಬದಲು ಸ್ವದೇಶಿ ವಸ್ತುಗಳನ್ನೇ ಬಳಸಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ದೀಪಾವಳಿ ಎಂದರೆ ಕಾಣಸಿಗುವುದು ಪಟಾಕಿ. ಮಕ್ಕಳಿಗೂ ಕೂಡ ಪಟಾಕಿಯೆಂದ ತತ್ ಕ್ಷಣ ಕಿವಿ ಅರಳುತ್ತದೆ. ಅವರಿಗೆ ಇಷ್ಟವಾಗುವುದೆಂದು ಪಟಾಕಿಗಳನ್ನು ಖರೀದಿಸುವ ನೀವು, ಅದರಿಂದಾಗುವ ತೊಂದರೆಯ ಬಗ್ಗೆ ಸಹ ಗಮನವಿರಿಸುವ ಅಗತ್ಯವಿದೆ.
ಪಟಾಕಿ ಖರೀದಿಸುವುದು, ಸಿಡಿಸುವುದು ತಪ್ಪಲ್ಲ. ಖುಷಿಯಿಂದ ಪಟಾಕಿ ಸಿಡಿಸುವ ಮಕ್ಕಳಿಗೆ ಮುಂದೆ ಅದು ದುಃಖವನ್ನುಂಟು ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲದಕ್ಕೂ ಒಂದು ಮಿತಿ ಎಂದು ಇರುತ್ತದೆ, ಆದರೆ ಅದೇ ಮಿತಿಯನ್ನು ನಾವು ಮೀರುತ್ತಿದ್ದೇವೆ. ಅದುವೇ ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಮಕ್ಕಳನ್ನು ಖುಷಿಪಡಿಸಲು ಪಟಾಕಿ ಕೊಡಿಸುವಾಗ ಭವಿಷ್ಯದಲ್ಲಿ ಅದರ ಪರಿಣಾಮವೇನೆಂಬುದನ್ನು ಒಮ್ಮೆ ಯೋಚಿಸಿ. ಎಲ್ಲ ಪ್ರಶ್ನೆಗಳಿಗೂ ಉತ್ತರ ನಿಮ್ಮಲ್ಲೇ ಇದೆ.
ನಿರ್ಧಾರವೂ ನಿಮ್ಮದೇ ಆಗಿದೆ. ನೀವು ತೆಗೆದುಕೊಳ್ಳುವ ನಿರ್ಧಾರವು ಕತ್ತಲನ್ನು ಹೊಡೆದೋಡಿಸುವ ಬೆಳಕಿನಂತೆ ಬೆಳಗಲಿ, ನಿಮ್ಮ ಜೀವನದಲ್ಲಿ ಸಂತೋಷವನ್ನು ತರಿಸಲಿ. ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
–ರವೀಶ್ ಶೆಟ್ಟಿ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.