ದೀಪಾವಳಿ ಹಬ್ಬದ ಖುಷಿಗೆ ಟಿಕೆಟ್‌ ದರ ಏರಿಕೆ ಬಿಸಿ


Team Udayavani, Oct 26, 2019, 3:39 AM IST

a-67

ಸಾಂದರ್ಭಿಕ ಚಿತ್ರ

ಮಹಾನಗರ: ವಿಶೇಷ ದಿನ, ಚುನಾವಣೆ ಸಹಿತ ಜನಸಾಮಾನ್ಯರು ಅಗತ್ಯವಾಗಿ ಸಂಚಾರ ನಡೆಸಬೇಕಾದ ದಿನಗಳಂದು ಖಾಸಗಿ ಬಸ್‌, ವಿಮಾನಯಾನ ದರ ದುಪ್ಪಟ್ಟುಗೊಳಿಸುವುದು ನಡೆಯುತ್ತಲೇ ಇರುತ್ತದೆ. ಈ ಚಾಳಿ ದೀಪಾವಳಿಗೂ ಮುಂದುವರಿದಿದ್ದು, ಶನಿವಾರ, ಸೋಮವಾರದಂದು ವಿಮಾನ, ಖಾಸಗಿ ಬಸ್‌ ದರಗಳನ್ನು ವಿಪರೀತ ಏರಿಕೆ ಮಾಡಲಾಗಿದೆ.

ಬೆಂಗಳೂರು ಸಹಿತ ದ.ಕ. ಜಿಲ್ಲೆಯಿಂದ ಹೊರ ಭಾಗದಲ್ಲಿದ್ದುಕೊಂಡು ಉದ್ಯೋಗ ನಿರ್ವಹಿಸುವ, ಊರಿನಿಂದ ಹೊರಗೆ ವಾಸವಾಗಿರುವ ಜನರು ವರ್ಷಕ್ಕೊಮ್ಮೆ ಹಬ್ಬಕ್ಕಾಗಿ ಊರಿಗೆ ಮರಳುವುದು ವಾಡಿಕೆ. ಆದರೆ ಹಬ್ಬದ ಖುಷಿಯಲ್ಲಿ ಊರಿಗೆ ಮರಳುತ್ತಿರುವ ಜನರಿಗೆ ದರ ಏರಿಕೆ ಮೂಲಕ ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ಬಸ್‌ ಸಂಸ್ಥೆಗಳು ಶಾಕ್‌ ನೀಡಿವೆ. ಶನಿವಾರ ನಾಲ್ಕನೇ ಶನಿವಾರ ವಾದ್ದರಿಂದ ಬಹುತೇಕ ಕಂಪೆನಿಗಳಿಗೆ ರಜಾ ದಿನ ವಾಗಿರುತ್ತದೆ. ರವಿವಾರ, ಸೋಮವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಇರುತ್ತದೆ. ಹಾಗಾಗಿ ಬಹುತೇಕ ಪರವೂರಿ ನಲ್ಲಿರು ವವರು ಶನಿವಾರವೇ ತಂತಮ್ಮ ಊರುಗಳಿಗೆ ಹೊರಡುತ್ತಾರೆ. ಮಂಗಳವಾರ ಮತ್ತೆ ಎಂದಿನ ಕೆಲಸ ಕಾರ್ಯಗಳು ಆರಂಭವಾಗುವುದರಿಂದ ಸೋಮವಾರ ಜನರು ತಾವು ಉಳಿದುಕೊಂಡಿರುವ ಊರುಗಳತ್ತ ಪ್ರಯಾಣಿಸುತ್ತಾರೆ. ಈ ಸಮಯವನ್ನು ನೋಡಿಕೊಂಡು ಖಾಸಗಿ ವಿಮಾನಯಾನ ಸಂಸ್ಥೆಗಳು ಮತ್ತು ಬಸ್‌ ಸಂಸ್ಥೆಗಳು ಪ್ರಯಾಣದರವನ್ನು ಹೆಚ್ಚಳ ಮಾಡಿ ಪ್ರಯಾಣಿಕರ ಹಬ್ಬದ ಖುಷಿಗೆ ಟಿಕೆಟ್‌ ದರ ಏರಿಕೆಯ ಬಿಸಿ ನೀಡಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರ ಸಾಮಾನ್ಯವಾಗಿ 700 ರೂ.ಗಳಿಂದ 900 ರೂ.ಗಳಿದ್ದರೆ, ಶನಿವಾರ 1,790 ರೂ.ಗಳಾಗಿವೆ. ಅ. 28ರಂದು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಲು ಬಸ್‌ಗೆ ಗರಿಷ್ಠ 1940 ರೂ. ನಿಗದಿಪಡಿಸಲಾಗಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳ ಮಾಮೂಲಿ ದರ 2,500 ರೂ.ಗಳಿದ್ದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 4,500 ರೂ.ಗಳಿಂದ 8,500 ರೂ.ಗಳವರೆಗೆ ಏರಿಕೆ ಮಾಡಲಾಗಿದೆ.

45 ಬಸ್‌ಗಳು ಭರ್ತಿ!
ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ದೀಪಾವಳಿ ಸಮಯದಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶೇ. 10-20ರಷ್ಟು ಟಿಕೆಟ್‌ ದರ ಏರಿಕೆ
ಮಂಗಳೂರಿನಿಂದ ಬೆಂಗಳೂರಿಗೆ 45 ಹೆಚ್ಚುವರಿ ಬಸ್‌ ವ್ಯವಸ್ಥೆಯನ್ನು ದೀಪಾವಳಿ ಹಿನ್ನೆಲೆಯಲ್ಲಿ ಕಲ್ಪಿಸಲಾಗುವುದು. ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಮೈಸೂರಿಗೂ ಹೆಚ್ಚುವರಿ ಬಸ್‌ ಒದಗಿಸಲಾಗುವುದು. ಬೆಂಗಳೂರಿನಿಂದ ಮಂಗಳೂರಿಗೆ ಹೆಚ್ಚುವರಿ ಬಸ್‌ ಓಡಾಟ ಈಗಾಗಲೇ ಪ್ರಾರಂಭವಾಗಿದೆ. ಶೇ. 10-20ರಷ್ಟು ಟಿಕೆಟ್‌ ದರ ಏರಿಕೆ ಮಾಡಲಾಗಿದೆ.
 - ಜಯಶಾಂತ್‌, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಕೆಎಸ್ಸಾರ್ಟಿಸಿ: ಶೇ. 20 ದರ ಹೆಚ್ಚಳ
ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ದರ ಏರಿಕೆ ಯಾಗಿದ್ದರೆ, ಇತ್ತ ಕೆಎಸ್ಸಾರ್ಟಿಸಿಯಲ್ಲಿಯೂ ಸ್ವಲ್ಪ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ವೋಲ್ವೋ ಬಸ್‌ಗಳಲ್ಲಿ ಶೇ. 20 ಮತ್ತು ಇತರ ಬಸ್‌ಗಳಲ್ಲಿ ಶೇ. 10ರಷ್ಟು ದರ ಏರಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ದಿನಗಳಲ್ಲಿ 600 ರೂ.ಗಳಿದ್ದರೆ, ದೀಪಾವಳಿಗೆ ಊರಿಗೆ ಬರಬೇಕಾದರೆ 720 ರೂ.ಗಳನ್ನು ಪಾವತಿಸುವ ಅನಿವಾರ್ಯ ಗ್ರಾಹಕರಿಗಿದೆ.

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.