ಪರಿಸರ ಸ್ನೇಹಿಯಾಗಿರಲಿ ದೀಪಾವಳಿ
Team Udayavani, Oct 26, 2019, 3:32 AM IST
ಮಹಾನಗರ: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಅದರಂತೆಯೇ ಪಟಾಕಿ ಅಂಗಡಿಗಳಲ್ಲಿ ಪ್ರತೀ ವರ್ಷದಂತೆ ಈಗಾಗಲೇ ಬಿರುಸಿನ ಖರೀದಿ ಆರಂಭಗೊಂಡಿದೆ.
ನಗರದ ಅಲ್ಲಲ್ಲಿ ಪಟಾಕಿ ಸ್ಟಾಲ್‌ಗಳನ್ನು ತೆರೆಯಲಾಗಿದ್ದು, ಬೆಳಗ್ಗೆಯಿಂದಲೇ ಜನ ಪಟಾಕಿ ಖರೀದಿಸುವುದರಲ್ಲಿ ತೊಡಗಿದ್ದಾರೆ. ಆಕಾಶದೆತ್ತರಕ್ಕೆ ಹಾರಿ ಚಿತ್ತಾರವನ್ನು ಮೂಡಿಸುವಂತಹ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೇ ತುಳಸೀಕಟ್ಟೆ, ರಾಕೆಟ್ ಮುಂತಾದ ಹೆಚ್ಚು ಶಬ್ದವನ್ನು ಮಾಡದ ಪಟಾಕಿಗಳತ್ತ ಜನರ ಒಲವು ಹರಿದಿದೆ.
ಚೀನ ವಸ್ತುಗಳಿಗೆ ಬಹಿಷ್ಕಾರ ಹಿನ್ನೆಲೆ ಯಲ್ಲಿ ನಗರದ ಕೆಲವು ಪಟಾಕಿ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ಕುಸಿದಿದೆ. ಇನ್ನು ಕೆಲವು ಮಳಿಗೆಗಳ ಮಾಲಕರು ಚೀನ ಪಟಾಕಿ ಮಾರುವುದಿಲ್ಲ ಎಂದಿದ್ದಾರೆ. ಜನರೂ ಚೀನ ಪಟಾಕಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಕೆಲವು ವ್ಯಾಪಾರಸ್ಥರು. ಆದಾಗ್ಯೂ ನಗರದ ಕೆಲವು ಪ್ರಖ್ಯಾತ ಮಳಿಗೆಗಳಲ್ಲಿ ಎಲ್ಲ ರೀತಿಯ ಪಟಾಕಿಗಳಿಗೂ ಈ ಹಿಂದಿನಂತೆಯೇ ಬೇಡಿಕೆ ಇದೆ.
ಪಟಾಕಿ ವ್ಯಾಪಾರ ಕಡಿಮೆ
ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಪಟಾಕಿ ವ್ಯಾಪಾರ ಕಡಿಮೆಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಪ್ರಕಾರ ಶಬ್ದ ಮಾಡುವ ಪಟಾಕಿ ಖರೀದಿಯಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ನೆಲಚಕ್ರ, ಸುರ್‌ಸುರ್ ಬತ್ತಿ ಸಹಿತ ಅತೀ ಹೆಚ್ಚು ಶಬ್ದ ಮಾಡದ ಪಟಾಕಿ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳಲಾಗಿದೆ
ವೆನಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಒಂದೆಡೆ ಮಳೆ ಸುರಿಯುತ್ತಿದ್ದು, ಮತ್ತೂಂದೆಡೆ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವೆನಲಾಕ್ ಆಸ್ಪತ್ರೆಯ ಎಲ್ಲ ಸಿಬಂದಿ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಇನ್ನು, ವೆನಲಾಕ್ ಆಸ್ಪತ್ರೆಯಲ್ಲಿ ಸುಟ್ಟಗಾಯಕ್ಕೆಂದು ಸ್ಪೆಷಲ್ ವಾರ್ಡ್ ಇದ್ದು, 9 ಬೆಡ್‌ಗಳಿವೆ. ವಿಶೇಷ ತಜ್ಞರು, ಅಗತ್ಯ ವೈದ್ಯಕೀಯ ಸಲಕರಣೆಗಳು ತಯಾರಿದೆ’ ಎನ್ನುತ್ತಾರೆ. ಇನ್ನು ನಗರದ ಇತರೇ ಖಾಸಗಿ ಕಣ್ಣಿನ ಆಸ್ಪತ್ರೆಗಳು ಕೂಡ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ.
ಪಟಾಕಿ ಸಿಡಿಸುವ ಮುನ್ನ ಇರಲಿ ಎಚ್ಚರ
ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚಬೇಡಿ
ಪಟಾಕಿ ಹಚ್ಚುವಾಗ ಜಾಗರೂಕರಾಗಿರಿ
ಅಪಾಯ ರಹಿತ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಿ
ಒಂಟಿಯಾಗಿ ಮಕ್ಕಳ ಕೈಯಲ್ಲಿ ಪಟಾಕಿ ಹಚ್ಚಲು ಹೆತ್ತವರು ಬಿಡಬೇಡಿ
ಅರೆಬರೆ ಸುಟ್ಟ ಪಟಾಕಿಗಳನ್ನು ಕೈಯಲ್ಲಿ ಮುಟ್ಟಲು ಹೋಗಬೇಡಿ
ಬಯಲು ಪ್ರದೇಶದಲ್ಲಿ ಪಟಾಕಿ ಹಚ್ಚಿ
ಪಟಾಕಿಗೆ ಬೆಂಕಿ ಹಚ್ಚುವಾಗ ಉದ್ದ ಊದು ಬತ್ತಿಯನ್ನು ಬಳಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.