ಗ್ರಾಮೀಣ ದೀಪಾವಳಿ: ಹಂಚೋಣ ಪ್ರೀತಿಯ ಬೆಳಕು

ವಿಶೇಷ ಎಣ್ಣೆಸ್ನಾನದ ಹಬ್ಬ ನರಕ ಚತುರ್ದಶಿ

Team Udayavani, Oct 26, 2019, 4:07 AM IST

a-68

ಸಂಭ್ರಮದ ಮೂರು ದಿನ ಆಚರಣೆಯ ದೀಪಾವಳಿಯಲ್ಲಿ ಮೊದಲ ದಿನ ನರಕ ಚತುರ್ದಶಿಯನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ತುಳುನಾಡಿನಲ್ಲಿ ವಿಶೇಷವಾಗಿ ಸ್ನಾನದ ಹಬ್ಬ ಎಂದರೆ ತುಳುವಿನಲ್ಲಿ (ಮೀಪಿನ ಪರ್ಬ) ಎಂದು ಆಚರಿಸಲಾಗುತ್ತದೆ. ತ್ರಯೋದಶಿಯ ದಿನ ಬಚ್ಚಲು ಮನೆಯ ನೀರಿನ ಹಂಡೆಗೆ ಶೇಡಿಯಿಂದ ರಂಗೋಲಿ ಬಿಡಿಸಿ ಹೂವಿನ ಹಾರ ಹಾಕಿ ಜಾಗಟೆ ಬಡಿದು ಪೂಜೆ ನಡೆಸಿದ ಅನಂತರ ನೀರು ತಂದು ಬಿಸಿ ಮಾಡಲಾಗುತ್ತದೆ. ಸಂಜೆಯ ಹೊತ್ತಿಗೆ ಎಳೆಯ ಮಕ್ಕಳಿದ್ದರೆ ಅವರನ್ನು ಅಂದೆ ಸ್ನಾನ ಮಾಡಿಸುವ ಕ್ರಮ ನಡೆಯುತ್ತದೆ. ಮತ್ತೆ ನೀರನ್ನು ಭರ್ತಿಗೊಳಿಸಿ ರಾತ್ರಿ ಕಾಯಿಸಿ ಬಿಸಿಯಾದ ನೀರನ್ನು ಬೆಳಗ್ಗೆ ಮನೆಯ ಪ್ರತಿಯೊಬ್ಬರು ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು ಇದರಿಂದ ರೋಗ ರುಜಿನೆಗಳು ಮಾಯವಾಗಿ ಆರೋಗ್ಯ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ. ಅದಕ್ಕಾಗಿಯೇ ತೆಂಗಿನ ಎಣ್ಣೆಯನ್ನು ತಲೆ, ಕುತ್ತಿಗೆ, ಎದೆ, ಕಾಲು ಹೀಗೆ ಎಲ್ಲ ಭಾಗಗಳಿಗೆ ಹಚ್ಚ ಬೇಕು ಎನ್ನುತ್ತಾರೆ. ಅದಾದ ಅನಂತರ ಹೊಸ ಬಟ್ಟೆ ತೊಡುವ ಸಂಪ್ರದಾಯವಿದ್ದು ಆ ದಿನ ಹೊಸ ಬಟ್ಟೆ ತೊಟ್ಟು ಹಬ್ಬ ನಡೆಯುತ್ತಿತ್ತು. ಈಗ ಅದೆಲ್ಲ ಕಡಿಮೆಯಾಗಿ ಗೀಸರ್‌ ಮೂಲಕ ನೀರು ಬಿಸಿ ಮಾಡಿ ಶಾಸ್ತ್ರಕ್ಕಾಗಿ ಎಣ್ಣೆ ಹಚ್ಚಿ ಸ್ನಾನ ಮಾಡುವ ಕ್ರಮ ನಡೆಯುತ್ತಿದೆ.

ಎಣ್ಣೆಸ್ನಾನದ ವಿಶೇಷತೆ
ಪುರಾಣದಲ್ಲಿ ವಿವರಿಸಿದಂತೆ ನರಕಾಸುರ ಎಂಬ ರಾಕ್ಷಸನ ವಧೆಯಾದ ದಿನದ ನೆನಪಿಗಾಗಿ ಶ್ರೀಕೃಷ್ಣ ದೇವರು ಕೊಟ್ಟ ವರದಂತೆ ಈ ಎಣ್ಣೆಸ್ನಾನದ ಕ್ರಮವನ್ನು ಆಚರಿಸಲಾಗುತ್ತದೆ ಎಂಬುದು ವಾಡಿಕೆ. ಹಿಂದಿನ ಹಿರಿಯರು ತಿಳಿಸಿದಂತೆ ದೀಪಾವಳಿ ಅನಂತರ ಬರುವುದು ಕಟುವಾದ ಚಳಿಗಾಲ ಆಗಿದ್ದು ಅದನ್ನು ಎದುರಿಸಲು ಮತ್ತು ದೇಹ ಹಾಗೂ ಚರ್ಮವನ್ನು ಸುರಕ್ಷಿತವಾಗಿಡುವುದಕ್ಕೆ ಎಣ್ಣೆ ಸ್ನಾನ ಮಾಡುತ್ತಿದ್ದರು.
ಇದರ ಜತೆಗೆ ಭತ್ತ ಕೊಯ್ಲಿನ ದಣಿವಾರಿಸಿಕೊಳ್ಳಲು ದೇಹಕ್ಕೆ ಹೊಸ ಚೈತನ್ಯ ತುಂಬಲು ಕೂಡ ಇದು ಅನುಕೂಲವಾಗುತ್ತಿತ್ತು. ಬೆಳಕಿನ ಹಬ್ಬ ದೀಪಾವಳಿ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಹಬ್ಬವೂ ಪಾರಂಪರಿಕವಾದ ಐತಿಹ್ಯ ಹೊಂದಿದೆ. ಸುಮಾರು 50-60 ವರ್ಷಗಳ ಹಿಂದಿನ ಆಚರಣೆಯ ಬಗ್ಗೆ ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರು ತಮ್ಮ  ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

-ಶ್ರೀಧರ ಆಳ್ವ ಬಪ್ಪನಾಡುಗುತ್ತು, ಮೂಲ್ಕಿ

ಬಲೀಂದ್ರ ಕರೆಯುವುದೇ ಸಂಭ್ರಮ
ದೀಪಾವಳಿಯಲ್ಲಿ ಇತರ ಆಚರಣೆಗಳಿದ್ದರೂ ನಮ್ಮಲ್ಲಿ ಪ್ರಮುಖ ಸಡಗರವೆಂದರೆ ಬಲೀಂದ್ರ ಕರೆಯುವುದು. ಇದಕ್ಕೆ 2-3 ದಿನಗಳಿಂದ ತಯಾರಿ ನಡೆಯುತ್ತದೆ. ಮುಖ್ಯವಾಗಿ ತೆಂಗಿನ ಸಿಂಗಾರದ ಒಣಗಿದ ಹಾಳೆಯನ್ನು ತೆಗೆದು ಅದನ್ನು ಸಪೂರವಾಗಿ ಸೀಳಿ ಒಣಗಿಸಿಡಲಾಗುತ್ತದೆ. ದೀಪಾವಳಿಯ ದಿನ ಇದರ ಒಂದು ತುದಿಗೆ ಸ್ವತ್ಛವಾದ ಬಿಳಿ ಬಟ್ಟೆಯನ್ನು ಸುಮಾರು ಎರಡು ಇಂಚು ಸುತ್ತಿ ಸಂಜೆಯ ವೇಳೆಗೆ ಎಣ್ಣೆಯಲ್ಲಿ ಅದ್ದಿ ತೆಗೆಯಲಾಗುತ್ತದೆ. ಅನಂತರ ಅದನ್ನೆಲ್ಲ ಒಟ್ಟು ಸೇರಿಸಿ ಸೂಡಿ ಮಾಡಲಾಗುತ್ತದೆ. ಅದೇ ರೀತಿ ತೆಂಗಿನ ಮರದ ನಾರು ಸಹಿತ ಇತರ ವಸ್ತುಗಳನ್ನು ಬಳಸಿ ಗಟ್ಟಿಯಾದ ತೂಟೆಯೊಂದನ್ನು ತಯಾರಿಸಲಾಗುತ್ತದೆ. ಇವಿಷ್ಟು ದೀಪ ಇಡುವ ಸಾಮಗ್ರಿಗಳು. ಇನ್ನು ಬಲೀಂದ್ರ ಕರೆಯಲು, ಎಲೆ, ಅಡಿಕೆ, ಕೇಪುಲ, ಕುರಿr ಹೂವು, ಗೊಂಡೆ ಹೂವು, ಅವಲಕ್ಕಿ ಇತ್ಯಾದಿ ವಸ್ತುಗಳು ಬೇಕು. ಇವೆಲ್ಲವನ್ನೂ ಮೊದಲೇ ಜೋಡಿಸಿಟ್ಟುಕೊಂಡು ಸೂರ್ಯಾಸ್ತದ ಬಳಿಕ ಗದ್ದೆಗಳಿಗೆ ದೀಪ ಇಡಲು ತೆರಳಲಾಗುತ್ತದೆ. ಕಂಬಳ ಗದ್ದೆ ಸಹಿತ ದೊಡ್ಡ ಗದ್ದೆಗಳಿಗೆ ವಿಶೇಷ ಅಲಂಕಾರದ ಹತ್ತಾರು ದೀಪಗಳಿರುವ ದೀಪಸ್ತಂಭವನ್ನು ನೆಟ್ಟು ಅದರಲ್ಲಿ ದೀಪ ಇಡಲಾಗುತ್ತದೆ. ಅನಂತರ ತಂದಿರುವ ಪರಿಕರಗಳನ್ನು ಅಲ್ಲಿಟ್ಟು ಬಲೀಂದ್ರನನ್ನು ಕರೆಯಲಾಗುತ್ತದೆ. ಹೀಗೆ ದೀಪ ಇಡಲು ಮನೆ ಯಜಮಾನ ಮತ್ತು ಮನೆಯ ಮಕ್ಕಳೆಲ್ಲರೂ ಹೋಗುವುದು ಕ್ರಮ. ಕೃಷಿ ಮಾಡುವ ಎಲ್ಲ ಗದ್ದೆಗಳಿಗೆ, ಬಾವಿಗೆ, ಕೃಷಿ ಸಲಕರಣೆಗಳಿಗೆ, ಗೊಬ್ಬರದ ರಾಶಿಗೆ ಹೀಗೆ ದೀಪ ಇಡಲಾಗುತ್ತದೆ. ಆದರೆ ಈಗ ಆ ಸಂಭ್ರಮವೇ ಕಾಣೆಯಾಗುತ್ತಿದೆ.

-ರಮಣಿ ಪೂಜಾರಿ, ಮದ್ದೇರಿ ಗುತ್ತು, ತೋಕೂರು

ಭತ್ತದ ರಾಶಿಯ ಪೊಲಿ ಪೂಜೆ
ತುಳುನಾಡಿನ ಕೃಷಿ ಆರಾಧನೆ ಸಂಪ್ರದಾಯವನ್ನು ಪ್ರತಿಬಿಂಬಿಸುವುದಕ್ಕಾಗಿ ದೀಪಾವಳಿ ಸಮಯದಲ್ಲಿ ಪೊಲಿ ಪೂಜೆ ಮಾಡಲಾಗುತ್ತದೆ. ಮನೆಯ ಕೋಣೆಯಲ್ಲಿ ಒಟ್ಟಾಗಿಟ್ಟಿತ್ತು ಭತ್ತದರಾಶಿ ಗೆ ಪೂಜೆ ಮಾಡುವ ಸಂಪ್ರದಾಯವೇ ಪೊಲಿ ಪೂಜೆ. ಶ್ರಮದ ಪ್ರತಿಫ‌ಲಕ್ಕೆ ಹೆಚ್ಚುವರಿ ಆದಾಯದ ಸಂಭ್ರಮಕ್ಕಾಗಿ ಭತ್ತದ ರಾಶಿಗೆ ಪೊಲಿ ಪೂಜೆಯನ್ನು ದೀಪಾವಳಿಯ ಪಾಡ್ಯದ ದಿನ ಮಾಡಲಾಗುತ್ತದೆ. ಭತ್ತ ಸತ್ವವಾಗಿ ಇರಲಿ, ಕುಟ್ಟೆ, ಕುಂಭುಯಾಗದರಲಿ, ಸಂಪತ್‌ಭರಿತವಾಗಿ ಅಕ್ಕಿಯಾಗಿ ಬರಲಿ, ಧಾನ್ಯಲಕ್ಷ್ಮೀ ಮನೆ ತುಂಬಲಿ ಎಂಬ ನಂಬಿಕೆಯಿಂದ ಈ ಅಚರಣೆಯನ್ನು ಮಾಡಲಾಗುತ್ತಿತ್ತು.
ಮನೆಯ ಯಾಜಮಾನ ಬಿಳಿ ಮುಂಡು ಧರಿಸಿ ಭತ್ತದ ರಾಶಿಯ ಎದುರು ದೀಪ ಬೆಳಗಿಸಿ, ಗೆರಸೆಯಲ್ಲಿ ಅಡಿಕೆ, ವೀಳ್ಯದೆಲೆ, ಬೆಲ್ಲ, ತೆಂಗಿನಕಾಯಿಯ ತುಂಡು, ಗೊಂಡೆ ಹೂ, ಕುರುಡಿ ಹೂ, ಜತೆಗೆ ಒಂದೊಂದು ಸಾಲು ಅವಲಕ್ಕಿ, ಅಕ್ಕಿ, ಭತ್ತವನ್ನು ಇಟ್ಟು ಒಂದು ಸಾಲಿನಲ್ಲಿ ಮೂರು, ಮೂರು ಹಣತೆಯ ದೀಪ ಇಟ್ಟು ಒಟ್ಟು ಒಂಬತ್ತು ದೀಪ ಬೆಳಗಿಸಿ, ಭತ್ತದ ರಾಶಿಗೆ ಪೂಜೆ ಮಾಡಲಾಗುತ್ತದೆ. ಅಗ ಪೊಲಿ ಒಕ್ಕಣೆ ಹೇಳಲಾಗುತ್ತದೆ. ಕೊನೆಗೆ ಭತ್ತರಾಶಿಗೆ ಒಂದು ದೊಂಬಿ ದೀಪ ಇಡಲಾಗುತ್ತದೆ. ಇದು ದೃಷ್ಟಿ ಬೀಳದ ಹಾಗೆ ಎಂಬ ನಂಬಿಕೆ ಇದೆ.

ದೈವಗಳಿದ್ದ ಮನೆಗಳಲ್ಲಿ ಮೊದಲು ದೈವಗಳನ್ನು ಪೂಜೆ ಮಾಡಿ ಅನಂತರ ಭತ್ತದ ರಾಶಿಗೆ ಪೂಜೆ ಮಾಡುತ್ತಾರೆ. ಬಳಿಕ ದನದ ಹಟ್ಟಿಗೆ, ಭತ್ತ ಹೊಡೆಯುವ ಪಡಿ, ಅಲ್ಲಿದ್ದ ಭತ್ತದ ಹುಲ್ಲಿನ ರಾಶಿಗೂ ಪೂಜೆ ಮಾಡಲಾಗುತ್ತದೆ. ಕೆಲವೆಡೆ ಭತ್ತದ ರಾಶಿಗೆ ಬೂದಿಯಿಂದ ಮೂರು ನಾಮವನ್ನು ಹಾಕಲಾಗುತ್ತದೆ. ಇದು ಸಂಪತ½ ಭರಿತ ದೇವರ ಆಚರಣೆಯ ಧೊತಕವಾಗಿ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ. ಪೊಲಿ ಎಂಬ ಶಬ್ದ ಬೇರೆಬೇರೆ ಅರ್ಥವನ್ನು ಕೊಡುತ್ತದೆ. ಹೆಚ್ಚುವರಿ ಲಾಭ, ಬಡ್ಡಿ, ಖುಷಿ ಎಂಬ ಅರ್ಥದಲ್ಲಿ ಈ ಆಚರಣೆಯಾಗುತ್ತಿತ್ತು.

-ಹರಿಣಾಕ್ಷಿ ಟಿ. ಶೆಟ್ಟಿ, ಕಾವರಮನೆ, ಎಕ್ಕಾರು

ಗೋರಕ್ಷಣೆಯ ದ್ಯೋತಕ ಗೋಪೂಜೆ
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪ್ರಧಾನವಾಗಿರುವುದರಿಂದ ದೀಪಾವಳಿಯಲ್ಲಿ ದನ, ಕರು, ಕೋಣ, ಎಮ್ಮೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದ ಎರಡನೇ ದಿನದಂದು ಗೋವುಗಳಿಗೆ ಪೂಜೆ ಮಾಡುಲಾಗುತ್ತದೆ. ಒಂದು ವೈದಿಕ ವಿಧಾನ, ಗ್ರಾಮೀಣ ಪದ್ಧತಿಯ ಎಂಬ ಎರಡು ಮುಖ್ಯ ವಿಧಾನದಲ್ಲಿ ಗೋ ಪೂಜೆ ನಡೆಸುತ್ತಾರೆ.

ಗೋ ಪೂಜೆಯಂದು ಹಟ್ಟಿಯಲ್ಲಿ ಗೊಬ್ಬರ ತೆಗೆದು, ತೊಳೆದು ಶುಚಿಗೊಳಿಸಿ ದನಕರು, ಕೋಣ, ಎಮ್ಮೆಗಳನ್ನು ಗುಡ್ಡೆಗೆ ಮೇಯಲು ಬಿಡದೆ ಅವುಗಳಿಗೆ ಸ್ನಾನ ಮಾಡಿಸಿ, ಗೊಂಡೆಯ ಹೂವಿನ ಮಾಲೆ ಹಾಕಿ ದನಗಳಿಗೆ ಕರುಗಳಿಗೆ ಅವಲಕ್ಕಿ ಪಂಚಾಕಜ್ಜಯ, ಸಿಹಿ ಗಟ್ಟಿ, ಚಪ್ಪೆ ಗಟ್ಟಿ ಮಾಡಿ ಹಾಗೂ ಹಿಂಡಿ ನೀಡಿ ಆರತಿ ಬೆಳಗಿ ಪೂಜೆ ಮಾಡುವ ವಿಧಾನ ಇತ್ತು. ಇದರಿಂದ ಮನೆ ಮಂದಿ ಸಂತಸ ಪಡುತ್ತಿದ್ದರು. 25 ವರ್ಷಗಳ ಹಿಂದೆ ಹಟ್ಟಿ ತುಂಬಾ ದನ, ಕರು, ಗದ್ದೆ ಹೊಳುವ ಕೋಣಗಳು ಇದ್ದವು ಆದರೆ ಇಂದು ಆಧುನಿಕತೆಗೆ ಬೇಸಾಯ ಪದ್ಧತಿಯು ಬದಲಾಗಿದೆ ಹಾಗೂ ಹಬ್ಬ ಆಚರಣೆಯಲ್ಲೂ ಬದಲಾವಣೆ ಆಗಿದೆ.

-ಸಚ್ಚಿದಾನಂದ ಉಡುಪ, ಕೊಡೆತ್ತೂರು

ಹಿರಿಯರ ನೆನಪಿಗೆ ವಾರ್ಷಿಕ ಪರ್ವ
ತುಳುನಾಡಿನಲ್ಲಿ ದೀಪಾವಳಿ ಆಚರಣೆಗೆ ಪಾರಂಪರಿಕ ಸಂಪ್ರದಾಯವಿದೆ. ವಿಶೇಷವಾಗಿ ದೀಪಾವಳಿಯಲ್ಲೂ ಕೂಡ ತುಳುನಾಡಿನಲ್ಲಿ ಚೌತಿಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಇದು ಗಣೇಶನ ಆರಾಧನೆಯ ಚೌತಿ ಅಲ್ಲ, ಬದಲಾಗಿ ಗತಿಸಿ ಹೋದ ಹಿರಿಯರಿಗೆ ನೀಡುವ ವಾರ್ಷಿಕ ಪರ್ವ.

ದೀಪಾವಳಿಯ ಎರಡನೇ ದಿನದಂದು ಚೌತಿ ಹಬ್ಬವನ್ನು ಆಚರಿಸಲಾಗುತ್ತದೆ. ಸಂಜೆಯ ವೇಳೆಗೆ ಚೌತಿ ಹಬ್ಬಕ್ಕೆ ಸಂಬಂಧಿಸಿದ ತಯಾರಿಗಳನ್ನು ಮಗಿಸಿ ಕುಟುಂಬದ ದೈವಗಳಿಗೆ ದೇವರಿಗೆ ಹೊದ್ಲು, ಬಾಳೆಹಣ್ಣು, ಬೆಲ್ಲ ತೆಂಗಿನಕಾಯಿ, ಸೀಯಾಳವನ್ನು ಬಾಳೆ ಎಲೆಯಲ್ಲಿ ಬಡಿಸಿ ಅನಂತರ ಗದ್ದೆಯ ಬದಿಯಲ್ಲಿ ಕೋಲಿಗೆ ಬಟ್ಟೆ ಸುತ್ತಿ ಅಲ್ಲಿಯೂ ಎಲೆಯಲ್ಲಿ ಬಡಿಸಿ ಬಂದು ಮನೆಯ ಒಳಗೆ ಕುಟುಂಬದಲ್ಲಿ ದೈವಾದೀನರಾದ ಹಿರಿಯರಿಗೆ ಪರ್ಬಗ್‌ ಬಳಸುನ ನಡೆಯುತ್ತದೆ.

ಮುಖ್ಯವಾಗಿ 16 ಎಲೆಗಳಿಗೆ ಬಡಿಸುವ ಪದ್ದತಿ ಇದ್ದು, ಮೀನು, ಕೋಳಿ, ಅರಿವೆ ಮತ್ತು ಕೆಸು ದಂಡು ಪದಾರ್ಥವನ್ನು ಅನ್ನದೊಂದಿಗೆ ಕುಟುಂಬದ ಮಹಿಳೆಯರು ಬಡಿಸುವ ಪದ್ಧತಿಯಿದೆ. ಅನಂತರ ಮನೆ ಹಿರಿಯರು ಪ್ರಾರ್ಥನೆ ನಡೆಸುವರು. ಬಡಿಸಿದ ಬಳಿಕ ಮನೆಯಲ್ಲಿದ್ದವರೂ ಹೊರಗೆ ತೆರಳಿ ಕೆಲವು ನಿಮಿಷ ಬಾಗಿಲು ಹಾಕಿ ಹೊರಗೆ ನಿಲ್ಲಬೇಕು. ಅನಂತರ ಬಡಿಸಿದ ಮಹಿಳೆ ತಂಬಿಗೆಯಲ್ಲಿ ತಂದ ನೀರನ್ನು ಮೂರು ಬಾರಿ ಮನೆಯ ಮಾಡಿಗೆ ಚಿಮುಕಿಸಿದ ಬಳಿಕ ಒಳಗೆ ತೆರಳಿ ಬಡಿಸಿಟ್ಟ ಆಹಾರವನ್ನು ಕುಟುಂಬದ ಸದಸ್ಯರು ತಿನ್ನುವ ಪರಿಪಾಠ ಇದೆ. ಕುಟುಂಬದ ಸದಸ್ಯರು ಹೊರತು ಬೇರೆಯವರು ಬಡಿಸಿದ ಆಹಾರ ತಿನ್ನವಂತಿಲ್ಲ. ದೀಪಾವಳಿ ಸಂದರ್ಭ ಇಂತಹ ಕಾರ್ಯಕ್ರಮ ನಡೆಯುತ್ತದೆ. ಆ ವರ್ಷದಲ್ಲಿ ಯಾರಾದರೂ ಕುಟುಂಬದ ಸದಸ್ಯರು ಗತಿಸಿದರೆ ಅವರನ್ನು ಒಂದು ವರ್ಷದೊಳಗೆ 16ಕ್ಕೆ ಸೇರಿಸುವ ಕಾರ್ಯ ಆಗಬೇಕಾಗಿದ್ದು, 16 ಎಲೆಗಳೊಂದಿಗೆ ಆ ವರ್ಷದಲ್ಲಿ ಸತ್ತವರ ಸಂಖ್ಯೆಯಷ್ಟು ಹೆಚ್ಚುವರಿ ಎಲೆ ಹಾಕಿ ಬೇರೆಯೇ ಅಡಿಗೆ ಮಾಡಿ ಬಡಿಸಬೇಕು ಮಹಿಳೆ ಸತ್ತಿದ್ದರೆ ಸೀರೆ, ಪುರುಷರು ಸತ್ತರೆ ಪಂಚೆಯನ್ನು ಇಡುವ ಸಂಪ್ರದಾಯವಿದೆ.

-ರಮೇಶ್‌ ಭಂಡಾರಿ, ಬೋಳಿಯಾರ್‌

ಟಾಪ್ ನ್ಯೂಸ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.