ಕಲಾವಿದನ ಕೈಚಳಕ: ಭತ್ತದಲ್ಲಿ ಅರಳಿದ ದೀಪಾವಳಿ ಹಬ್ಬದ ಅಲಂಕಾರಿಕ ವಸ್ತುಗಳು
Team Udayavani, Oct 23, 2022, 6:48 PM IST
ಗಂಗಾವತಿ: ಬೆಳಕಿನ ಹಬ್ಬ ದೀಪಾವಳಿ ವಿವಿಧ ಅಲಂಕಾರಿಕ ವಸ್ತುಗಳನ್ನು ಮನೆ ಮತ್ತು ವ್ಯಾಪಾರದ ಸ್ಥಳವನ್ನು ಅಲಂಕರಿಸಲು ಬಳಕೆ ಮಾಡುವ ಹಬ್ಬವಾಗಿದೆ. ಈ ಹಬ್ಬವನ್ನು ಮಹಿಳೆಯರು ಮತ್ತು ವ್ಯಾಪಾರಸ್ಥರು ಅತ್ಯಂತ ಸಡಗರದಿಂದ ಆಚರಣೆ ಮಾಡುತ್ತಾರೆ. ಮನೆ ಮತ್ತು ವ್ಯಾಪರಸ್ಥರನ್ನು ಅಲಂಕಾರ ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಆದರೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ನ ಕಲಾವಿದ ಭೀಮರಾಯ ಹದ್ದಿನಾಳ ಭತ್ತದ ಬೆಳೆಯಲ್ಲಿ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವ ಮೂಲಕ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ಅಲಂಕಾರ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ .
ಪ್ಲ್ಯಾಸ್ಟಿಕ್ ಅಲಂಕಾರಿಕ ವಸ್ತುಗಳಿಂದಾಗಿ ಹಬ್ಬದ ಸಂಭ್ರಮಗಳು ಕಳೆಗುಂದುತ್ತಿವೆ. ಈ ನಿಟ್ಟಿನಲ್ಲಿ ನೈಸರ್ಗಿಕ ಉತ್ಪನ್ನಗಳಿಂದ ತಳಿರು, ತೋರಣಗಳನ್ನು ತಯಾರಿಸಿ ಉಚಿತ ದರದಲ್ಲಿ ಮಾರಾಟ ಮಾಡುವ ಮೂಲಕ ಜನರಲ್ಲಿ ನಿಸರ್ಗ ಸ್ನೇಹಿ ಮನೋಭಾವ ಮೂಡಿಸುವ ಪ್ರಯತ್ನವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಗ್ರಾಮದ ಕಲಾವಿದರೊಬ್ಬರು ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಗ್ರಾಮದ ಈ ಕಲಾವಿದರ ಹೆಸರು ಭೀಮರಾಯ ದೇವಿಕೇರಿ. ಚಿತ್ರ ಕಲೆಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿ ಪೂರೈಸಿರುವ ಇವರ ಕ್ಯಾನ್ವಾಸ್ ಪೇಂಟಿಂಗ್ ಗಳಿಗೆ ಬೆಂಗಳೂರು, ಮುಂಬಯಿ, ಗೋವಾ, ಕೋಲ್ಕತ್ತಾ ಸೇರಿದಂತೆ ಇನ್ನಿತರೆಡೆ ಭಾರೀ ಬೇಡಿಕೆ ಇದೆ. ಚಿತ್ರಕಲೆಯಲ್ಲದೆ ಟೆರ್ರಕೋಟ, ಆ್ಯಂಬೋಜಿಂಗ್ ಇನ್ನಿತರ ಕರಕುಶಲ ಕಲೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಇವರ ಫೈನ್ ಆರ್ಟ್ ಗಾಗಿ ಕೇಂದ್ರೀಯ ಸಚಿವಾಲಯದಿಂದ “ಫೆಲೋಶಿಪ್” ದೊರೆತಿದೆ.
ಸದ್ಯಕ್ಕೆ ಸ್ವಗ್ರಾಮ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಕ್ಯಾಂಪಿನಲ್ಲಿ ನೆಲೆಗೊಂಡಿರುವ ಇವರು, ಸಮೀಪದ ಗಂಗಾವತಿಯಲ್ಲಿ ” ಚಿತ್ರಿತಾ ಲಲಿತ ಕಲಾಕೇಂದ್ರ” ಎಂಬ ಹೆಸರಿನಲ್ಲಿ ಗ್ಯಾಲರಿ ಆರಂಭಿಸಿದ್ದಾರೆ.
ತಮ್ಮ “ಶ್ರೀ ಹಂಪಿ ವಿರೂಪಾಕ್ಷೇಶ್ವರ ವಿಶ್ವ ಪಾರಂಪರಿಕ ಕಲಾ ಸಂಸ್ಥೆ” ಯ ಮೂಲಕ ಗ್ರಾಮೀಣ ಭಾಗಗಳ ಸಾಂಸ್ಕೃತಿಕ, ಪಾರಂಪರಿಕ ಕರಕುಶಲ ಕಲೆಗಳನ್ನು ಬೆಳಕಿಗೆ ತರುವ ಪ್ರಯತ್ನ ನಡೆಸಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಿ ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳಿಗೆ ಮಾರುಕಟ್ಟೆ ನೀಡುವ ಪ್ರಯತ್ನ ನಡೆಸಿದ್ದಾರೆ. ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳಿಂದ ಪರಿಸರಕ್ಕೆ ಆಗುವ ಹಾನಿಯ ಜತೆಗೆ ನೈಸರ್ಗಿಕ ಉತ್ಪನ್ನಗಳಿಂದಾಗುವ ಲಾಭಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ.
ಈ ಕಲಾವಿದರು ತಯಾರಿಸುತ್ತಿರುವ ಭತ್ತದ ತೋರಣಗಳು ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಜನರ ಬೇಡಿಕೆ ಹೆಚ್ಚಿತ್ತಿದೆ. ಸದ್ಯಕ್ಕೆ ಬೇಡಿಕೆಗೆ ತಕ್ಕಂತೆ ಜನರಿಗೆ ಪೂರೈಸಲು ಆಗುತ್ತಿಲ್ಲ ಎಂಬುದು ಕಲಾವಿದ ಭೀಮರಾಯ ದೇವಿಕೇರಿಯವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.