ಗೋರಕ್ಷಣೆಯ ದ್ಯೋತಕ ಗೋಪೂಜೆ
Team Udayavani, Oct 26, 2019, 5:00 AM IST
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪ್ರಧಾನವಾಗಿರುವುದರಿಂದ ದೀಪಾವಳಿಯಲ್ಲಿ ದನ, ಕರು, ಕೋಣ, ಎಮ್ಮೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದ ಎರಡನೇ ದಿನದಂದು ಗೋವುಗಳಿಗೆ ಪೂಜೆ ಮಾಡುಲಾಗುತ್ತದೆ. ಒಂದು ವೈದಿಕ ವಿಧಾನ, ಗ್ರಾಮೀಣ ಪದ್ಧತಿಯ ಎಂಬ ಎರಡು ಮುಖ್ಯ ವಿಧಾನದಲ್ಲಿ ಗೋ ಪೂಜೆ ನಡೆಸುತ್ತಾರೆ.
ಗೋ ಪೂಜೆಯಂದು ಹಟ್ಟಿಯಲ್ಲಿ ಗೊಬ್ಬರ ತೆಗೆದು, ತೊಳೆದು ಶುಚಿಗೊಳಿಸಿ ದನಕರು, ಕೋಣ, ಎಮ್ಮೆಗಳನ್ನು ಗುಡ್ಡೆಗೆ ಮೇಯಲು ಬಿಡದೆ ಅವುಗಳಿಗೆ ಸ್ನಾನ ಮಾಡಿಸಿ, ಗೊಂಡೆಯ ಹೂವಿನ ಮಾಲೆ ಹಾಕಿ ದನಗಳಿಗೆ ಕರುಗಳಿಗೆ ಅವಲಕ್ಕಿ ಪಂಚಾಕಜ್ಜಯ, ಸಿಹಿ ಗಟ್ಟಿ , ಚಪ್ಪೆ ಗಟ್ಟಿ ಮಾಡಿ ಹಾಗೂ ಹಿಂಡಿ ನೀಡಿ ಆರತಿ ಬೆಳಗಿ ಪೂಜೆ ಮಾಡುವ ವಿಧಾನ ಇತ್ತು. ಇದರಿಂದ ಮನೆ ಮಂದಿ ಸಂತಸ ಪಡುತ್ತಿದ್ದರು. 25 ವರ್ಷಗಳ ಹಿಂದೆ ಹಟ್ಟಿ ತುಂಬಾ ದನ, ಕರು, ಗದ್ದೆ ಹೊಳುವ ಕೋಣಗಳು ಇದ್ದವು ಆದರೆ ಇಂದು ಆಧುನಿಕತೆಗೆ ಬೇಸಾಯ ಪದ್ಧತಿಯು ಬದಲಾಗಿದೆ ಹಾಗೂ ಹಬ್ಬ ಆಚರಣೆಯಲ್ಲೂ ಬದಲಾವಣೆ ಆಗಿದೆ.
– ಸಚ್ಚಿದಾನಂದ ಉಡುಪ, ಕೊಡೆತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.