ದಸರಾ ಬೊಂಬೆಗಳ ಪ್ರದರ್ಶನ ಜನಾಕರ್ಷಣೆ
ನವರಾತ್ರಿ ದಸರಾ ಪ್ರಯುಕ್ತ ಗೊಂಬೆ ಪ್ರದರ್ಶನ ಅರ್ಚಕ ಕೃಷ್ಣಭಟ್ ಸರ್ವಮಂಗಳಾ ದಂಪತಿ ಆಯೋಜನೆ
Team Udayavani, Oct 12, 2021, 6:26 PM IST
ಶ್ರೀರಂಗಪಟ್ಟಣ: ಪಟ್ಟಣದ ಜ್ಞಾನ ಮಂದಿರದಲ್ಲಿ ನವ ರಾತ್ರಿ ಸಂಭ್ರಮ ದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನಾಕರ್ಷಣೆ ಪಡೆಯುತ್ತಿದೆ. ಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯಲ್ಲಿ, ಲಕ್ಷ್ಮೀದೇವಿ ದೇಗುಲದ ಪ್ರಧಾನ ಅರ್ಚಕ ಕೃಷ್ಣಭಟ್ಟ್ ಸರ್ವಮಂಗಳಾ ದಂಪತಿ ಹಲವಾರು ಬೊಂಬೆ ಗಳನ್ನು ಜೋಡಿಸಿ ಪ್ರದರ್ಶಿಸಿದ್ದಾರೆ.
ದಸರಾ ಉತ್ಸವ, ಪಟ್ಟಾಭಿ ಷೇಕ, ನವ ದುರ್ಗೆಯರು, ಜಾನಪದ ಕಲಾವಿ ದರು, ದೇಸಿ ನೃತ್ಯ, ಗಿರಿಜಾ ಕಲ್ಯಾಣ, ಮಹಾವಿಷ್ಣು, ಶ್ರೀರಂಗ ನಾಥ, ಶ್ರೀಕೃಷ್ಣ ರುಕ್ಕಿಣಿ, ಗೋಪಿಕೆಯರು, ಸಪ್ತ ಋಷಿಗಳ ಯಾಗ, ಶ್ರೀರಾಘ ವೇಂದ್ರರ ಬೃಂದಾವನ, ಗಜಗರಿ, ವಿನಾ ಯಕ, ಯತಿಗಳು, ಸಿಪಾಯಿಗಳ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.
ಒಂದಕ್ಕಿಂತ ಒಂದು ಭಿನ್ನ: ಮದುವೆ ದಿಬ್ಬಣ, ನಾಟ್ಯ ಕಲಾವಿದೆಯರು, ಕಾಮಧೇನು, ತೊಟ್ಟಿಲು ಕೃಷ್ಣ ಗ್ರಾಮೀಣ ಕಸುಬು, ಎತ್ತಿನಗಾಡಿ, ಗುಡಿ ಕೈಗಾರಿಕೆ, ರಾಜಸ್ತಾನಿ ವಾದ್ಯವೃಂದ, ಹೂವಾಡಗಿತ್ತಿ ಯರ ಬೊಂಬೆಗಳು ಗಮನ ಸೆಳೆಯುತ್ತವೆ. ಮುಂದಿನ ದ್ವಾರ ದಲ್ಲಿ ಮೃಗಾಲಯದ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ಜ್ಞಾನ ಮಂದಿರದಲ್ಲಿ ಕೃಷ್ಣಭಟ್ ಸರ್ವಮಂಗಳಾ ಸಂಪತಿ ದಸರಾ ಬೊಂಬೆಗಳ ಪ್ರದರ್ಶನ ಏರ್ಪಡಿಸಿದ್ದಾರೆ.
ಇದನ್ನೂ ಓದಿ;- ಭಾರೀ ಮಳೆ: ಅವಾಂತರ
ನವಧಾನ್ಯ: ಕ್ರಿಕೆಟ್ ಆಟ, ಕಿರಾಣಿ ಅಂಗಡಿ, ಬಟ್ಟೆ ಇತರ ಅಂಗಡಿಗಳ ಚಿತ್ರಣ ಕೂಡ ಇಲ್ಲಿ ಕಾಣ ಸಿಗು ತ್ತದೆ. ಬೊಂಬೆಗಳ ಜತೆಗೆ ನವಧಾನ್ಯಗಳ ಪೈರು ಗಳನ್ನು ಪ್ರದರ್ಶನಕ್ಕೆ ಇರಿಸಿರುವುದು ವಿಶೇಷ. ಸಿಹಿತಿಂಡಿ: ಶ್ರೀರಂಗಪಟ್ಟಣದಲ್ಲಿ ದಸರಾ ಬೊಂಬೆಗ ಳನ್ನು ವೀಕ್ಷಿಸಲು ವಿವಿಧ ಗ್ರಾಮಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ಬೊಂಬೆಗಳನ್ನು ವೀಕ್ಷಿಸಲು ಬರುವವರಿಗೆ ಕೃಷ್ಣಭಟ್ ದಂಪತಿ ಸಿಹಿತಿಂಡಿ ಕೊಟ್ಟು ಅವರ ಸಂತಸ ಇಮ್ಮಡಿಗೊಳಿಸುತ್ತಿದ್ದಾರೆ.
ಪಟ್ಟಣದ ನಮ್ಮ ಮನೆಯಲ್ಲಿ ನಮ್ಮ ತಾಯಿ 40 ವರ್ಷಗಳ ಹಿಂದೆ ಮನೆಯಲ್ಲಿ ದಸರಾ ಬೊಂಬೆ ಕೂರಿ ಸುವ ಪರಿಪಾಠ ಹೊಂದಿ ಗೊಂಬೆಗಳನ್ನು ವೇದಿಕೆ ನಿರ್ಮಿಸಲು ಒಂದು ಸಣ್ಣ ವೇದಿಕೆ ಮಾಡಿ ದಶಕದ ಈಚೆಗೆ ದಸರಾ ಬೊಂಬೆಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ಇಲ್ಲಿರುವ ಸಹ ಸ್ರಾರು ಬೊಂಬೆ ಗಳ ಪೈಕಿ ನೂರಾರು ಬೊಂಬೆಗಳನ್ನು ಪತ್ನಿ ಸರ್ವ ಮಂಗಳಾ ಮೂಲಕ ಅವರೇ ಸಿದ್ಧಪಡಿಸಿದ್ದಾರೆ. ದಸರಾ ಉತ್ಸವ ಮುಗಿದ ಒಂದು ವಾರದವರೆಗೂ ಬೊಂಬೆಗಳ ಪ್ರದರ್ಶನ ಇರುತ್ತದೆ ಎಂದು ಕೃಷ್ಣಭಟ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.