ಮಡಿಕೇರಿ ದಸರಾಕ್ಕೆ 200 ವರ್ಷಗಳ ಇತಿಹಾಸ; ಕುಂದುರುಮೊಟ್ಟೆ ಚೌಟಿಮಾರಿಯಮ್ಮ ವಿಶೇಷತೆ ಏನು?


Team Udayavani, Sep 28, 2019, 12:29 PM IST

kunduru

ಮಡಿಕೇರಿಯಲ್ಲಿ ದಸರಾ ಆಚರಣೆ ಪ್ರತಿವರ್ಷ ಬಹಳ ವಿಭಿನ್ನವಾಗಿರುತ್ತದೆ. ಮಹಾಲಯ ಅಮವಾಸ್ಯೆಯ ಮಾರನೇಯ ದಿನದಂದು ಕರಗ ಹೊರಡುವುದರೊಂದಿಗೆ ದಸರಾ ಉತ್ಸವ ಆರಂಭವಾಗುತ್ತದೆ. ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರು ವರುಷಗಳ ಇತಿಹಾಸವಿದೆ. ನವರಾತ್ರಿಯ ಮೊದಲನೇಯ ದಿನದಂದು ನಾಲ್ಕು ಮಾರಿಯಮ್ಮ ದೇವಾಲಯದ ಪೂಜಾರಿಗಳು ಕರಗಕಟ್ಟುವ ಸಲಕರಣೆಗಳೊಂದಿಗೆ ನಗರದ ಹೊರವಲಯದಲ್ಲಿರುವ ಪಂಪಿನ ಕೆರೆ ಬಳಿ ತೆರಳಿ ಕರಗವನ್ನು ಕಟ್ಟುತ್ತಾರೆ. ಆ ಬಳಿಕ ಒಂಬತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಪೂಜೆ ಸ್ವೀಕರಿಸಲಾಗುತ್ತದೆ. ಕರಗ ಕುಣಿತವು ನೋಡಲು ಬಲು ಆಕರ್ಷಣೀಯ. ದಸರೆಯ ದಿನದಂದು ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ಈ ಕರಗ ಉತ್ಸವ ಮುಕ್ತಾಯಗೊಳ್ಳುವುದು.

ಮಡಿಕೇರಿಯಲ್ಲಿ ವಿಜಯದಶಮಿಯ ದಿನ ಎಲ್ಲೆಲ್ಲೂ ಬೆಳಕಿನ ಚಿತ್ತಾರ. ದುಷ್ಟಶಕ್ತಿಗಳನ್ನು ದಮನಗೊಳಿಸಿ ಶಿಷ್ಟಶಕ್ತಿಗಳ ಜಯದ ಸಂಕೇತವಾದ ನಾಡಹಬ್ಬ ಮಡಿಕೇರಿಯಲ್ಲಿ ಜನೋತ್ಸವವಾಗಿ ಆಚರಿಸಲ್ಪಪಡುತ್ತದೆ. ಮಡಿಕೇರಿ ಜನಸಂಖ್ಯೆ ಅಂದಾಜು 25 ರಿಂದ 30 ಸಾವಿರ. ಆದರೆ ದಸರೆಯ ದಿನ ಲಕ್ಷಾನುಗಟ್ಟಲೆ ಜನಸಂದಣಿಯನ್ನು ಕಾಣಬಹುದು. ಮಕ್ಕಳಿಂದ ಹಿರಿಯರಾದಿವರೆಗೂ ಸುತ್ತುಮತ್ತಲಿನ ಹಳ್ಳಿಗಳಿಂದ ಮಾತ್ರವಲ್ಲದೆ ರಾಜ್ಯದ ಬೇರೆಬೇರೆ ಭಾಗಗಳಿಂದ ಪ್ರವಾಸಿಗರು ಈ ನಾಡಹಬ್ಬ ವೀಕ್ಷಣೆಗೆ ಬರುತ್ತಾರೆ. ಇತ್ತೀಚಿಗಂತೂ ದಸರಾ ಪ್ರವಾಸೋದ್ಯಮಕ್ಕೆ ವಿಶೇಷ ಹಿನ್ನಲೆ ಒದಗಿಸಿರುವುದಂತೂ ಸುಳ್ಳಲ್ಲ.

ಮಡಿಕೇರಿ ದಸರಾಕ್ಕೆ ತನ್ನದೆ ಆದ ಐತಿಹಾಸಿಕ ಮಹತ್ವವಿರುವುದು ಕಾಣಬಹುದು. ಕೊಡಗಿನ ಅರಸರ ಕಾಲದಿಂದ ನವರಾತ್ರಿ ಆಚರಣೆ ರೂಢಿಗೆ ಬಂತು ಎಂಬ ಪ್ರತೀತಿ ಇದೆ. ಸುಮಾರು 1914 ರಲ್ಲಿ ಪೇಟೆ ಶ್ರೀರಾಮಮಂದಿರ ಭಜನಾ ಮಂದಿರವಾಗಿ ಅಸ್ಥಿತ್ವದಲ್ಲಿತ್ತು. ಆ ಕಾಲದಲ್ಲಿ ಶ್ರೀರಾಮಪಟ್ಟಾಭಿಷೇಕದ ಚಿತ್ತಾರದೊಂದಿಗೆ ಮಡಿಕೇರಿ ನಗರದ ನಾಲ್ಕು ಶಕ್ತಿದೇವತೆಗಳ ಕರಗದೊಂದಿಗೆ ನಗರದೊಳಗೆ ಪ್ರದಕ್ಷಿಣೆ ಹೋಗುವ ರೂಢಿಯಿತ್ತು. ಕ್ರಮೇಣ ಅಲಂಕೃತ ಮಂಟಪದೊಂದಿಗೆ ಹೊರಡುವ ಕ್ರಮ ಜಾರಿಗೆ ಬಂತು. 1952ರಲ್ಲಿ ಮತ್ತೆರೆಡು ದೇವಾಲಯಗಳ ಮಂಟಪಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳ ತೊಡಗಿದವು. ನಂತರ ಮಡಿಕೇರಿ ನಗರದ ನಾಲ್ಕು ಶಕ್ತಿದೇವಾಲಯಗಳಾದ ಕುಂದುರು ಮೊಟ್ಟೆ ಚೌಟಿಮಾರಿಯಮ್ಮ, ಕಂಚಿಕಾಮಾಕ್ಷಿ, ದಂಡಿನಮಾರಿಯಮ್ಮ, ಕೋಟೆಮಾರಿಯಮ್ಮ ದೇವಾಲಗಳ ಮಂಟಪಗಳೇ ಅಲ್ಲದೆ ಚೌಡೇಶ್ವರಿ ದೇವಾಲಯ, ಕೋಟೆಗಣಪತಿ, ದೇಚೂರು ರಾಮಮಂದಿರ, ಕರವಲೆಭಗವತಿ, ಕೋದಂಡರಾಮ ದೇವಾಲಯಗಳ ಮಂಟಪಗಳು ಈ ಉತ್ಸವಕ್ಕೆ ಮೆರುಗು ನೀಡಿದವು .

ಹೀಗೆ ಮಡಿಕೇರಿಯಲ್ಲಿ ವಿಜಯದಶಮಿ ಆಚರಣೆಗೆ ವಿಶೇಷ ಆಕರ್ಷಣೆ ಒದಗಿಬಂತು. ಶಕ್ತಿದೇವತೆಗಳ ಪೈಕಿ ಹಿರಿಯವಳಾದ ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ಕೊಡಗಿನ ಜನತೆಯ ಮಾರಿ ಬೇನೆಗಳನ್ನು ನೀಗಿಸುವಳೆಂದು ನಂಬಿಕೆಯಿದೆ. ಈ ಶಕ್ತಿದೇವತೆಗೆ ಮೂರು ಮಂದಿ ತಂಗಿಯಂದಿರು. ಕೋಟೆಮಾರಿಯಮ್ಮ ಮಡಿಕೇರಿ ಕೋಟೆಯ ರಕ್ಷಣೆ ಮಾಡುವವಳೆಂಬ ನಂಬಿಕೆಯಿದೆ. ಕಂಚಿಕಾಮಾಕ್ಷಿ ರಾಜನ ಖಜಾನೆಯೆ ರಕ್ಷಣೆ ಮಾಡಿದರೆ, ದಂಡಿನಮಾರಿಯಮ್ಮ ರಾಜನ ಸೈನ್ಯಕ್ಕೆ ಬೆಂಗಾವಲಾಗಿ ನಿಂತು ರಕ್ಷಿಸುತ್ತಿದ್ದಳೆಂಬ ನಂಬಿಕೆಯಿದೆ.

ಮಡಿಕೇರಿಯ ರಾಮಮಂದಿರಗಳ ಪೈಕಿ, ದೇಚೂರು ರಾಮಮಂದಿರಕ್ಕೆ ಒಂದು ಶತಮಾನದ ಇತಿಹಾಸವಿದೆ. ಕೋದಂಡ ರಾಮ ದೇವಾಲಯ ಇತ್ತೀಚಿನದ್ದು. ಮಡಿಕೇರಿಯ ಮಹದೇವಪೇಟೆಯಲ್ಲಿರುವ ಚೌಡೇಶ್ವರಿ ದೇವಾಲಯ ಹಿಂದೆ ಶಂಕರಿಗುಡಿ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿತ್ತು, ಕ್ರಮೇಣ ಚೌಡೇಶ್ವರಿ ಎಂದು ಹೆಸರಾಯಿತು. ಇಲ್ಲಿ ಈಗ ಚೌಡೇಶ್ವರಿಯೇ ಅಲ್ಲದೆ ಸತ್ಯನಾರಾಯಣ ನವಗ್ರಹ ಗುಡಿಗಳು ಇವೆ. ಈ ದೇವಾಲಯ 1962ರಿಂದಲೂ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿವೆ. ಮಡಿಕೇರಿ ಕೋಟೆಯೊಳಗಿರುವ ಗಣಪತಿ ಗುಡಿ ಕೊಡಗಿನ ರಾಜರ ಕಾಲದಿಂದಲೂ ಪ್ರಸಿದ್ಧಿಯಲ್ಲಿದೆ. ಗಣೇಶ ಚತುರ್ಥಿಯದಿನ ಭಕ್ತರು ಸಾಲುಗಟ್ಟಿ ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ. ಪ್ರಾಚೀನ ಇತಿಹಾಸ ಹೊಂದಿರುವ ಕರವಲೆ ಬಾಡಗ ಗ್ರಾಮದ ಭಗವತಿ ದೇವಾಸ್ಥಾನ ಎತ್ತರದ ಸ್ಥಾನದಲ್ಲಿ ನಿಂತು ಇಡೀ ಮಡಿಕೇರಿ ನಗರವನ್ನು ವೀಕ್ಷಿಸುವಂತಿದೆ. ದಸರಾದ ಶೋಭಾಯಾತ್ರೆಯಲ್ಲಿ ಈ ದೇವಾಲಯದ ಮಂಟಪ 1995 ರಿಂದ ಪಾಲ್ಗೊಳ್ಳುತ್ತಿದೆ.

ಮಡಿಕೇರಿ ದಸರಾ ಉತ್ಸವವನ್ನು ವೀಕ್ಷಿಸಲು, ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರು ಸಾಲುಗಟ್ಟಿ ಮಡಿಕೇರಿಗೆ ಬರುತ್ತಿರುವುದು ಇತ್ತೀಚಿನ ಬೆಳವಣಿಗೆ. ಹಗಲು ಮೈಸೂರಿನ ಜಂಬೂ ಸವಾರಿಯನ್ನು ನೋಡಿ ರಾತ್ರಿ ಜನ ಮಡಿಕೇರಿಗೆ ಆಗಮಿಸುತ್ತಾರೆ. ವಿಜಯದಶಮಿ ಮಡಿಕೇರಿ ಪಾಲಿಗೆ ಅದ್ಭುತ ಅನುಭವ ಕೊಡುವ ಸುಂದರ ಶೋಭಾಯಮಾನ ರಾತ್ರಿ. ಆ ರಾತ್ರಿ ಮಡಿಕೇರಿಯ ಬೀದಿ ಬೀದಿಗಳಲ್ಲಿ ರಾಕ್ಷಸ ವೇಷಗಳು ಅಬ್ಬರಿಸುತ್ತಾರೆ, ಶುಂಭ-ನಿಶುಂಭರು, ಚಂಡ-ಮುಂಡರು ತಮ್ಮ ಅಸುರಗಣಗಳೊಂದಿಗೆ ಎಂಥವರ ಎದೆಯನ್ನೂ ನಡುಗಿಸುವಂತೆ ತಮ್ಮ ಪ್ರತಾಪ ತೋರಿಸುತ್ತಾರೆ. ಕೊನೆಗೊಮ್ಮೆ ಶಿಷ್ಟಶಕ್ತಿಯ ಎದುರು ನಾಶವಾಗುತ್ತಾರೆ. ಧರ್ಮಕ್ಕೆ ಎಂದಿಗೂ ಜಯವಿದ್ದೇ ಇದೆ ಎಂಬುದನ್ನು ಆದಿಶಕ್ತಿಯು ತನ್ನ ಶಕ್ತಿಯ ಮೂಲಕ ತೋರಿಸಿಕೊಡುತ್ತಾಳೆ. ವರ್ಷದಿಂದ ವರ್ಷಕ್ಕೆ ಕಲಾಕೃತಿಗಳು ಬೆರಗು ಹುಟ್ಟಿಸುವಂತೆ ತಯಾರಾಗುತ್ತದೆ. ಒಂದೊಮ್ಮೆ ಸ್ಥಬ್ಧ ಚಿತ್ರದಂತಿದ್ದ ಮಂಟಪಗಳು ಆಧುನಿಕ ತಂತ್ರಜ್ಞಾನದಿಂದ ಧ್ವನಿ ದೃಶ್ಯಗಳ ಆಳವಡಿಕೆಯಿಂದ ಮೆರಗು ಪಡೆಯುತ್ತಿದೆ. ಕಣ್ಣೆದುರೆ ನಡೆಯುವ ರಾಕ್ಷಸ ಸಂಹಾರ ಮೈನವಿರೇಳಿಸುತ್ತದೆ. ನೋಡುಗರನ್ನು ಮಾಯಾಲೋಕ ಕ್ಕೆಸೆಳೆಯುತ್ತದೆ.

ಮಿಥುನ್ ಮೊಗೇರ

ಟಾಪ್ ನ್ಯೂಸ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Z-LOGO-DASARA-2019

ದಸರಾ ಜನೋತ್ಸವ ವಾಹನ, ಕಟ್ಟಡಗಳ ಅಲಂಕಾರ: ಸಮಿತಿ ಮನವಿ

Z-MAKKALA-DASARA-1

ಮಡಿಕೇರಿ ದಸರಾ: ಗಮನ ಸೆಳೆದ ಮಕ್ಕಳ ಸಂತೆ, ಮಕ್ಕಳ ಮಂಟಪ

goni-koppalu

ಗೋಣಿಕೊಪ್ಪಲು :41ನೇ ದಸರಾ ಜನೋತ್ಸವ ಆಚರಣೆಗೆ ಚಾಲನೆ

MADIKERI-DAS

ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ

Z-DASARA-PRESS-1

ಐತಿಹಾಸಿಕ ದಸರಾ ಮಹೋತ್ಸವಕ್ಕೆ ಮಡಿಕೇರಿ ಸಜ್ಜು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.