ಜಂಬೂ ಸವಾರಿಗೆ ಕಲಾ ತಂಡಗಳ ಮೆರುಗು
Team Udayavani, Oct 16, 2021, 12:16 PM IST
ಮೈಸೂರು: ಅರಮನೆ ಅಂಗಳದಲ್ಲಿ ಶುಕ್ರವಾರ ಮುಸ್ಸಂಜೆ ಹೊತ್ತಲ್ಲಿ ನಡೆದ ದಸರಾ ಜಂಬೂ ಸವಾರಿಗೆ ವಿವಿಧ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಮೆರುಗು ನೀಡಿದವು. ಅರಮನೆಯ ಉತ್ತರ ದ್ವಾರದ ಬಳಿಯ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಅರಮನೆ ಮುಂಭಾಗದ ವೇದಿಕೆ ಆಗಮಿಸಿದ ನಂತರ ಆರಂಭವಾದ ದಸರಾ ಮೆರವಣಿಗೆಯಲ್ಲಿ ಮಹ ದೇವಪ್ಪ, ಮಲ್ಲೇಶಯ್ಯ ಅವರ ತಂಡದಿಂದ ನಂದಿಧ್ವಜ ಮೆರವಣಿಗೆ ಹಿಂದೆಯೇ ನಿಶಾನೆ ಆನೆ ಧನಂಜಯ, ಸಾಲಾನೆ ಅಶ್ವತ್ಥಾಮ ಹಾಗೂ ನೌಪತ್ ಆನೆ ಗೋಪಾಲಸ್ವಾಮಿ ಗಾಂಭೀರ್ಯದ ಹೆಜ್ಜೆ ಹಾಕಿದವು.
ಬಳಿಕ ಮಂಡ್ಯದ ಆರ್.ನಾಗರಾಜ್ ಹಾಗೂ ಕೆ.ಆರ್. ನಗರದ ಎಚ್.ಎಂ.ಮಹದೇವ್ ಅವರ ತಂಡದಿಂದ ನಾದಸ್ವರ ವಾದನ, ರತ್ನಮ್ಮ ತಂಡದಿಂದ ಸ್ಯಾಕೋ ಫೋನ್, ಮೈಸೂರಿನ ಅಂಬಳೆ ಶಿವಣ್ಣ ತಂಡ, ಸರಗೂರಿನ ನೀಲಕಂಠ ತಂಡ, ತಿ.ನರಸೀಪುರದ ಆನಂದಕುಮಾರ್ ತಂಡ, ದಾವಣಗೆರೆ ಎಚ್.ಪಿ. ರುದ್ರೇಶ್ ತಂಡ ಮತ್ತು ವೀರಭದ್ರೇಶ್ವರ ವೀರಗಾಸೆ ತಂಡ ದಿಂದ ವೀರಗಾಸೆ ಕುಣಿತ ಜನರನ್ನು ಆಕರ್ಷಿಸಿತು.
ನಂತರ ನಂಜನಗೂಡಿನ ಕೆಂಪಿನಸಿದ್ದನ ಹುಂಡಿ ಮಹ ದೇವು, ಮೈಸೂರಿನ ಚಿಕ್ಕಮರಿಯಪ್ಪ ತಂಡ, ಮೈಸೂರು ಕಂಸಾಳೆ ಸಿದ್ದ ರಾಮು ಮತ್ತು ಕೃಷ್ಣ ಜನಮನ ಮತ್ತು ತಂಡದಿಂದ ಕಂಸಾಳೆ ನೃತ್ಯ, ಮೈಸೂರಿನ ರಮ್ಯ ತಂಡ, ಕಿರಣ್ ತಂಡ, ಕುಮಾರ್ ತಂಡ ಮತ್ತು ಸ್ವಾಮಿ ನಾಯಕ ತಂಡ ದಿಂದ ಡೊಳ್ಳು ಕುಣಿತ, ಅಮೃತ ಮತ್ತು ತಂಡದವರಿ ನಾಗರಿ ಕುಣಿತ, ತಿ.ನರಸೀಪುರದ ಪಲ್ಲವಿ ಮತ್ತು ತಂಡ, ವೈ.ಬಿ.ಪ್ರಕಾಶ್ ತಂಡದಿಂದ ಪೂಜಾ ಕುಣಿತ ಪ್ರದರ್ಶನ ಮೆಚ್ಚುಗೆ ಪಡೆಯಿತು.
ಇವರ ಹಿಂದೆ ರಾಜಶೇಖರ್ ಮತ್ತು ತಂಡ ದಿಂದ ಚಿಲಿಪಿಲಿ ಗೊಂಬೆ, ಮಂಡ್ಯದ ಎಚ್.ಕೆ.ನಳಿನಿ ಮತ್ತು ತಂಡದಿಂದ ಕುಂಬು ಕಹಳೆ, ಶ್ರೀಧರ್ ತಂಡ ದಿಂದ ಗಾರುಡಿ ಗೊಂಬೆ, ಪೌರಾ ಣಿಕ ವೇಷಧಾರಿಗಳು, ರಾವಣ ನನ್ನು ಸಂಹರಿಸುತ್ತಿರುವ ರಾಮನ ವೇಷಧಾರಿಗಳು ಗಮನ ಸೆಳೆದರು. ಉಡುಪಿ ವಾಸುದೇವ ಬನ್ನಂಜೆ ತಂಡದಿಂದ ಚೆಂಡೆ ವಾದನ ಹಾಗೂ ಆನೆಬಂಡಿ ಸ್ತಬ್ಧಚಿತ್ರ ಸಾಗಿತು. ಕೊನೆಗೆ ಮಹಾ ಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಯಕ್ಷಗಾನ ಪ್ರದರ್ಶನದೊಂದಿಗೆ ಮೆರ ವಣಿಗೆ ಯಶಸ್ವಿಯಾಗಿ ಅಂತ್ಯಗೊಂಡಿತು.
ಗಮನ ಸೆಳೆದ ಸಬ್ದ ಚಿತ್ರಗಳು
ಪ್ರತಿವರ್ಷವೂ 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಅರಮನೆಗೆ ದಸರಾ ಉತ್ಸವ ಸೀಮಿತವಾದ್ದರಿಂದ ಕೇವಲ 6 ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸಿದ್ದವು. 75ನೇ ಸ್ವಾತಂತ್ರೊÂàತ್ಸವದ ಪ್ರಯುಕ್ತ ಅಮೃತ ಮಹೋತ್ಸವದ ಸ್ತಬ್ಧಚಿತ್ರವೂ ದೇಶದ ಏಕತೆಯನ್ನು ಪ್ರತಿನಿಧಿಸುವಂತಿತ್ತು. ಸ್ವಾತಂತ್ರÂ ಹೋರಾಟಗಾರರ ಭಾವಚಿತ್ರ ಅಳವಡಿಸಿ ವಿಶೇಷ ಗೌರವ ಸಲ್ಲಿಸಲಾಯಿತು. ಇದರ ಜೊತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಹು ನಿರೀಕ್ಷಿತ ಯೋಜನೆಯಾದ ಬಹು ವಸತಿ ಸಂಕೀರ್ಣದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಜೊತೆಗೆ ಕೊರೊನಾ ಸೋಂಕು ಮುಕ್ತ ಕರ್ನಾಟಕ, ಪರಿಸರ ಸಂರಕ್ಷಣೆ, ಸಮಗ್ರ ಕೃಷಿಯ ಸ್ತಬ್ಧಚಿತ್ರ ಹಾಗೂ ಆನೆ ಬಂಡಿ ಗಮನ ಸೆಳೆದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.