ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರು
Team Udayavani, Oct 11, 2021, 1:39 PM IST
ಮೈಸೂರು: ಸರಳ ದಸರಾ ಮಹೋತ್ಸವದ ನಡುವೆಯೂ ನಗರದ ಸಾಹುಕಾರ್ ಎಸ್.ಚನ್ನಯ್ಯ ಕುಸ್ತಿ ಅಖಾಡದಲ್ಲಿ ಭಾನುವಾರ ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಂದ ನಾಡ ಕುಸ್ತಿ ಪಂದ್ಯಾವಳಿ ಮೇಳೈಸಿತು.
14 ಕುಸ್ತಿ ಪಂದ್ಯ:ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘ ವಿವಿಧ ಗರಡಿ ಮನೆಗಳ ಸಹಯೋಗದಲ್ಲಿ ಆಯೋಜಿ ಸಿದ್ದ ನಾಡಕುಸ್ತಿ ಪಂದ್ಯಾವಳಿ ಇದಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗ, ಬೆಳಗಾವಿ, ಚಿಕ್ಕನಾಯಕನಹಳ್ಳಿ ಸೇರಿ ರಾಜ್ಯದ ಮೂಲೆ-ಮೂಲೆಗಳಿಂದ 28ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿ ಜಟ್ಟಿ ತನ ಮೆರೆದರು. ಒಟ್ಟು 14 ಕುಸ್ತಿ ಪಂದ್ಯ ನಡೆದವು. ಬಗೆಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿ ಮೇಲೆ ಪೈಲ್ವಾನರು ವಿಭಿನ್ನ ಪಟ್ಟು ಪ್ರದರ್ಶಿಸಿದರು. ಮದಗಜಗಳ ರೀತಿ ಪೈಲ್ವಾನರು ಸೆಣೆಸುತ್ತಿದ್ದಂತೆ ಅಖಾಡದಲ್ಲಿ ಆಸೀನಾರಗಿದ್ದ ಪ್ರೇಕ್ಷರಿಂದ ನೆಚ್ಚಿನ ಪೈಲ್ವಾನರಿಗೆ ಜೈಕಾರ ಮೊಳಗಿದವು. ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್ ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ;- MAA ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್‍ಗೆ ಸೋಲು
ಕುಸ್ತಿಯಲ್ಲಿ ಸಮಬಲದ ಹೋರಾಟ: ರಮ್ಮನಹಳ್ಳಿ ಪೈ.ರಾಘು ಮತ್ತು ಕುಂಬಾರಕೊಪ್ಪಲು ಪೈ.ಠಾಕೂರ್, ಹೊಂಗಳ್ಳಿ ಪೈ.ನಿಶ್ಚಿತ್ ಮತ್ತು ಕೆಸರೆ ಪೈ.ರೋಮೆನ್,ಪೈ.ಹೊಸಳ್ಳಿ ಪೈ.ಮನೋಜ್ ಮತ್ತು ವೀರನಗೆರೆ ಪೈ. ವಿಕಾಶ್, ನಂಜನಗೂಡು ಪೈ.ಸೂರಿ ಮತ್ತು ಈಶ್ವರರಾಯನ ಗರಡಿ ಪೈ.ಚಂದನ್ ನಾಯ್ಕ, ನಂಜನಗೂಡು ಪೈ.ಮಹೇಂದ್ರ ಮತ್ತು ಭೂತಪ್ಪನವರ ಗರಡಿಯ ಪೈ.ಸಾಗರ್, ಇಟ್ಟಿಗೆ ಗೂಡು ಪೈ.ಭುವನ್ ಮತ್ತು ಕೆಸರೆ ಪೈ.ಮಹಮ್ಮದ್ ಶೊಯೇಬ್, ಬೆಳಗಾವಿ ಪೈ.ರಾಕೇಶ್ ಮತ್ತು ವೀರನಗೆರೆ ಪೈ.ಚಿರು ನಡುವಿನ ಕುಸ್ತಿ ಡ್ರಾ ಆದವು.
ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧ ವಿಶ್ವ ವಿಖ್ಯಾತ ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧವಿದೆ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಏನೋ ಸಂಭ್ರಮ. ಪೈಲ್ವಾನರಿಗೆ ಅಖಾಡದಲ್ಲಿ ಹಣಾಹಣಿ ನಡೆಸುವುದೇ ಪ್ರತಿಷ್ಠೆಯ ವಿಚಾರ. ಹೀಗಾಗಿ ಯಾವುದೇ ಕಾರಣಕ್ಕೂ ಕುಸ್ತಿ ಪಂದ್ಯಾವಳಿ ರದ್ದುಗೊಳಿಸಬಾರದು. ನಮ್ಮ ಪರಂಪರೆ ಮುಂದುವರಿಸಲೆಂದು ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘ ವಿವಿಧ ಗರಡಿ ಮನೆಗಳ ಸಹಯೋಗದಲ್ಲಿ ನಾಡಿನ ಗಂಡು ಕಲೆ “ಕುಸ್ತಿ’ ಪರಂಪರೆಯನ್ನು ಮತ್ತೆ ವಿಜೃಂಭಿಸುವಂತೆ ಮಾಡುವ ದೃಷ್ಟಿಯಿಂದ ಕುಸ್ತಿ ಆಯೋಜಿಸಲಾಗಿದೆ ಎಂದು ಸಾಹುಕಾರ್ ಚನ್ನಯ್ಯ ಕುಸ್ತಿ ಅಖಾಡ ಕಾರ್ಯದರ್ಶಿ ಪೈಲ್ವಾನ್ ಮಹದೇವ್ ತಿಳಿಸಿದರು.
ಅಕ್ರಂಗೆ ಗೆಲುವು ಮೈಸೂರು ಪೈಲ್ವಾನ್ ವಿಷ್ಣು ಬಾಲಾಜಿ ಮತ್ತು ಶಿವಮೊಗ್ಗ ಪೈಲ್ವಾನ್ ಅಕ್ರಂ ನಡುವಿನ ಕುಸ್ತಿಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರೂ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚಪ್ಪಾಳೆ, ಸಿಳ್ಳೆ ಮೂಲಕ ಇವರಿಬ್ಬರನ್ನು ಪ್ರೋತಾಹಿಸಿದರು. ಆರಂಭದಿಂದಲೂ ಇಬ್ಬರುಪಟ್ಟಿಗೆ- ಪ್ರತಿಪಟ್ಟು ಹಾಕುತ್ತ ಮದಗಜಗಳ ರೀತಿ ಹೋರಾಡಿದರು. ಈ ವೇಳೆ ಎದುರಾಳಿ ಮೇಲೆ ಹಿಡಿತ ಸಾಧಿಸಿದ ಅಕ್ರಂ, ವಿಷ್ಣುರನ್ನುಚಿತ್ ಮಾಡಿದರು.
ಮತ್ತೂಂದು ಕುಸ್ತಿಯಲ್ಲಿ ಕುಂಬಾರ ಕೊಪ್ಪಲಿನ ಪೈ.ನಂದನ್ ವಿರುದ್ಧ ಶಿವಮೊಗ್ಗ ಪೈ.ಜಾವಿದ್ ಗೆಲುವಿನ ನಗೆ ಬೀರಿದರು. ಪೈ.ಫಯೀಜ್ ಕುರೈಶಿ ವಿರುದ್ಧ ಪೈ.ಬೈರನಾಯ್ಕ, ಪಡುವಾರಳ್ಳಿ ಪೈ. ಮಾಯಂಕ್ ವಿರುದ್ಧ ಕೆಸರೆ ಪೈ. ಗವಿರಂಗಪ್ಪ, ಆಲನಹಳ್ಳಿ ಪೈ. ಕಯಾಂ ವಿರುದ್ಧ ಪೈ.ನಿತಿನ್, ಇಟ್ಟಿಗೆಗೂಡು ಪೈ.ವರುಣ್ ವಿರುದ್ಧ ಚಿಕ್ಕನಾಯ್ಕನಹಳ್ಳಿ ಪೈ. ಹರ್ಷ ಜಯ ಸಾಧಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.