ಕಾವ್ಯದಸರಾ ಹಾಗೂ ದಸರಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಹೊರ ಜಗತ್ತಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಪರಿಚಯಿಸಿ
Team Udayavani, Oct 13, 2021, 4:37 PM IST
ಮೈಸೂರು: ಭಾರತೀಯ ಸಾಹಿತ್ಯ ಬೆಳವಣಿಗೆಗೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ನಮ್ಮ ಕನ್ನಡ ಕವಿ, ಸಾಹಿತಿಗಳ ಸಾಮರ್ಥ್ಯ ಇದರಿಂದ ಹೊರ ಜಗತ್ತಿಗೂ ಪರಿಚಯವಾಗಬೇಕಿದೆ ಎಂದು ಆಕಾಶವಾಣಿ ಮೈಸೂರು ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕಿ ರಾಜಲಕ್ಷ್ಮೀ ಶ್ರೀಧರ್ ಅಭಿಪ್ರಾಯಪಟ್ಟರು.
ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದಿಂದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಮಂಗಳವಾರ ಆಯೋ ಜಿಸಿದ್ದ ಕಾವ್ಯದಸರಾ ಹಾಗೂ ದಸರಾ ಪ್ರಶಸ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ತನ್ನದೇ ಇತಿಹಾಸ ಇರುವುದ ರಿಂದ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಈ ಮೂಲಕ ನಮ್ಮ ಕನ್ನಡ ಸಾಹಿತ್ಯ, ಸಾಹಿತಿಗಳು, ಕವಿಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿ ಕೊಡಬೇಕು.
ಕನ್ನಡದಲ್ಲಿರುವ ಗಟ್ಟಿತನ, ಕಲೆ, ಸಾಹಿತ್ಯ, ಸಂಸ್ಕೃತಿ ಹೊರಗಿನವರಿಗೂ ತಿಳಿಯು ವಂತಾಗಬೇಕು ಎಂದರು. ರನ್ನ, ಪಂಪ, ಬಸವಣ್ಣ, ಗೋವಿಂದಪೈ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಮಹಾನ್ ಕವಿಗಳು, ಸಾಹಿತಿಗಳು ನಮ್ಮ ನಾಡಿನಲ್ಲಿ ಬದ್ಧತೆಯಿಂದ ಸಾಹಿತ್ಯಸೇವೆ ಮಾಡಿಕೊಂಡು ಬಂದಿದ್ದಾರೆ. ಈ ಪರಂಪರೆಯನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕಿದೆ.
ಆಧುನೀಕತೆಯಿಂದ ಸಾಹಿತ್ಯವನ್ನು ಕಡೆಗಣಿಸದೆ ಅದನ್ನು ಬೆಳೆಸಬೇಕಿದೆ ಎಂದು ಹೇಳಿದರು. ಎಲ್ಲ ಭಾಷೆಗಳಿಗೂ ಸಂಸ್ಕೃತ ಭಾಷೆ ತಾಯಿ ಬೇರು ಎಂದು ಹೇಳಲಾಗುತ್ತದೆ. ಆದ್ದರಿಂದ ಸಂಸ್ಕೃತ ಯಾರ ಒಬ್ಬರ ಸ್ವತ್ತಲ್ಲ. ಅದನ್ನು ಸಹನೆ, ತಾಳ್ಮೆಯಿಂದ ಎಲ್ಲರೂ ಬಳಸುವ ಮೂಲಕ ನಮ್ಮ ಭಾಷೆಯಲ್ಲಿ ಉದುಗಿರುವ ಸತ್ವವನ್ನು ತಿಳಿದು ಕೊಳ್ಳುವ ಕೆಲಸವಾಗಬೇಕು ಎಂದರು.
ಇದನ್ನೂ ಓದಿ;- ಸಾವರ್ಕರ್ ಗೆ ಕ್ಷಮಾಪಣಾ ಪತ್ರ ಬರೆಯಲು ಸಲಹೆ ಕೊಟ್ಟಿದ್ದು ಮಹಾತ್ಮ ಗಾಂಧಿ; ಸಿಂಗ್
ಪ್ರಶಸ್ತಿ: ಕಾರ್ಯಕ್ರಮದಲ್ಲಿ ಡಾ.ಸಿ.ತೇಜೋವತಿ ಅವರಿಗೆ ಡಾ.ಡಿ.ಎಲ್.ವಿಜಯಕುಮಾರಿ ಸಾಧನಾ ಪ್ರಶಸ್ತಿ, ಕೆ.ಟಿ. ಶ್ರೀಮತಿ ಅವರಿಗೆ ದಸರೆಯ ಕವಿ ಪ್ರಶಸ್ತಿ, ಸುಶ್ಮಿತಾ ಸುಖೀಭವ, ಅತಿಶಯ್ ಜೈನ್ ಅವರಿಗೆ ದಸರಾ ಯುವ ಪ್ರತಿಭೆ ಪ್ರಶಸ್ತಿ, ಮ.ವಿ.ರಾಮಪ್ರಸಾದ್ (ನಾಗರಿಕ ಸೇವೆ), ಮುಂಬೈನ ಶಾರದಾ ಅಂಚನ್ (ವೈದ್ಯಸಾಹಿತ್ಯ), ವಿದುಷಿ ಆರ್.ಸಿ.ರಾಜಲಕ್ಷ್ಮೀ (ಸಂಗೀತ), ಚೂಡಾಮಣಿ (ವಚನ ಗಾಯನ), ಆರ್. ಕೃಷ್ಣಮೂರ್ತಿ (ಗೀತಗಾಯನ), ಆರ್.ಕೃಷ್ಣ (ಪತ್ರಿಕಾ ಮಾಧ್ಯಮ), ಪ್ರಕಾಶ್‌ಬಾಬು (ದೃಶ್ಯ ಮಾಧ್ಯಮ), ನಂಜನಗೂಡು ಸತ್ಯನಾರಾಯಣ (ವಿಜ್ಞಾನ, ಪರಿಸರ ಸಾಹಿತ್ಯ) ಅವರಿಗೆ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೇಲುಕೋಟೆ ವಂಗೀಪುರ ನಂಭೀಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜು, ಸವಿಗನ್ನಡ ಪತ್ರಿಕೆ ಗೌರ ಸಂಪಾದಕ ಎಸ್.ರಾಮಪ್ರಸಾದ್, ಸಂಪಾದಕ ರಂಗನಾಥ್ ಮೈಸೂರು, ಲೇಖಕಿ ಉಷಾನರಸಿಂಹನ್ ಇತರರು ಇದ್ದರು. ಬಳಿಕ ಲೇಖಕಿ ಉಷಾನರಸಿಂಹನ್ ಅವರ ಅಧ್ಯಕ್ಷತೆಯಲ್ಲಿ “ಕಾವ್ಯದಸರಾ’ ಖಾಸಗಿ ದಸರಾ ಕವಿಗೋಷ್ಠಿ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.