ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ

ಶುಕ್ರವಾರ ಸಂಜೆ ಜಂಬೂ ಸವಾರಿಯೊಂದಿಗೆ ಸಂಪನ್ನಗೊಳ್ಳುವ ನವರಾತ್ರಿ ಉತ್ಸವ „ 500 ಗಣ್ಯರಿಗೆ ಮಾತ್ರ ಅವಕಾಶ

Team Udayavani, Oct 14, 2021, 10:22 AM IST

dasara

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಘಟ್ಟವಾದ ಜಂಬೂ ಸವಾರಿ ಅ.15ರಂದು ಸಾಯಂಕಾಲ ಅರಮನೆ ಅಂಗಳದಲ್ಲಿ ಸರಳವಾಗಿ ಜರುಗಲಿದೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ ಸರಳವಾಗಿ ಆರಂಭವಾಗಿದ್ದ ನಾಡಹಬ್ಬ ದಸರಾ ಮಹೋತ್ಸವ ಅಂತಿಮ ಹಂತ ತಲುಪಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ಹಾಗೂ ಅರಮನೆ ಅಂಗಳದಲ್ಲಿ ಜಂಬೂ ಸವಾರಿಗೆ ಸೀಮಿತವಾಗಿದ್ದ 411ನೇ ದಸರಾ ಉತ್ಸವ ಸಂಪನ್ನದೆಡೆಗೆ ಸಾಗಿದೆ.

ಕಳೆದ 7 ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಅರಮನೆ ಅಂಗಳ ಅ.15ರಂದು ಶುಕ್ರವಾರ ನಡೆಯುವ ಜಂಬೂ ಸವಾರಿಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಅ.15ರಂದು ಸಂಜೆ 4.36ರಿಂದ 4.46ರವರೆಗೆ ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವರು.

ನಂತರ ಸಂಜೆ 5ರಿಂದ 5.30ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಇದರೊಂದಿಗೆ ಅಂಬಾರಿ ಹೊತ್ತ ಅಭಿಮನ್ಯು ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾಳೊಂದಿಗೆ ಹೆಜ್ಜೆ ಹಾಕಲಿದ್ದಾನೆ. ಅಂಬಾರಿ ಆನೆ ಮುಂದೆ ನಿಶಾನೆ ಆನೆಯಾಗಿ ಧನಂಜಯ, ಅದರ ಹಿಂದೆ ಅಶ್ವತ್ಥಾಮ, ನೌಪತ್‌ ಆನೆಯಾಗಿ ಗೋಪಾಲಸ್ವಾಮಿ ಸಾಗಲಿವೆ. ಮೆರವಣಿಗೆಯಲ್ಲಿ ಅಶ್ವಾರೋಹಿ ದಳ, ಪೊಲೀಸ್‌ ಬ್ಯಾಂಡ್‌, ಆಯ್ದ ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿ ವರ್ಷವೂ ಸಾವಿರಾರು ಕಲಾವಿದರು, 50ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಭಾಗವಹಿಸುತ್ತಿದ್ದವು.

ಆದರೆ ಈ ಬಾರಿ ಕೆಲವೇ ಕೆಲವು ಕಲಾವಿದರು, ಕೇವಲ 6 ಸ್ತಬ್ಧಚಿತ್ರಗಳು ಮಾತ್ರ ಭಾಗವಹಿಸಲಿವೆ. ಈ ಬಾರಿ ಪಂಜಿನ ಕವಾಯತು ಇಲ್ಲದಿರುವುದರಿಂದ ಕೇವಲ 40 ನಿಮಿಷ ನಡೆಯುವ ಮೆರವಣಿಗೆಯೊಂದಿಗೆ 9 ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ವೇಳೆ ಶಿಷ್ಟಾ ಚಾರದ ಪ್ರಕಾರ ಆರು ಮಂದಿ ಗಣ್ಯರಿಗೆ ಮಾತ್ರ ಅವ ಕಾಶವಿದೆ. ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತರು, ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೇಯರ್‌ ವೇದಿಕೆಯಲ್ಲಿರುತ್ತಾರೆ. ಉಳಿದಂತೆ ಇತರ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ.

ಇದನ್ನೂ ಓದಿ;- ಭೂಕಂಪ: ಸಿಎಂ ಗಮನಕ್ಕೆ ತಂದ ಸಂಸದ ಜಾಧವ-ತೇಲ್ಕೂರ

 500 ಮಂದಿಗಷ್ಟೆ ಅವಕಾಶ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿ ಸುತ್ತಿದ್ದು, ಕೋವಿಡ್‌-19 ತಾಂತ್ರಿಕ ಸಲಹಾ ಸಮಿ ತಿಯ ಶಿಫಾರಸಿನಂತೆ ಉದ್ಘಾಟನೆಗೆ 400 ಹಾಗೂ ಜಂಬೂ ಸವಾರಿಯಂದು ಕೇವಲ 500 ಮಂದಿ ಗಣ್ಯ ರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಶುಕ್ರವಾರ ನಡೆಯುವ ಜಂಬೂಸವಾರಿ ಯಲ್ಲಿ 500 ಮಂದಿ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಸ್ವಾಗತ ಮತ್ತು ಆಮಂತ್ರಣ ಸಮಿತಿ ವತಿಯಿಂದ ಜಿಲ್ಲಾಡಳಿತ ಹೆಸರಿಸಿರುವ ಗಣ್ಯ ರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಸಂಪ್ರದಾಯದಂತೆ ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಶಾಸಕರು, ಸಚಿವರು, ಹೈಕೋರ್ಟ್‌ ನ್ಯಾಯಾಧೀಶರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ.

ಉತ್ಸವಕ್ಕೆ ಸಕಲ ಸಿದ್ಧತೆ: ಈಗಾಗಲೇ ಜಂಬೂಸವಾರಿ ಮೆರವಣಿಗೆಗೆ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವರೋಹಿಪಡೆಗಳು ತಾಲೀಮಿ ನೊಂದಿಗೆ ಸಜ್ಜಾಗಿವೆ. ಅರಮನೆ ಎದುರು ವಿಶಾಲ ವಾದ ಶಾಮಿಯಾನ ಹಾಕಿ, ಗಣ್ಯರು, ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮುಂಭಾಗ ಪುಷ್ಪಾರ್ಚನೆ ವೇಳೆ ಗೌರವ ವಂದನೆ ಸಲ್ಲಿಸುವ ಅಭಿಮನ್ಯು ನೇತೃತ್ವದ ಗಜಪಡೆ ಬಲರಾಮ ದ್ವಾರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ. ಬಳಿಕ ವಾಪಸ್‌ ರಾಜಮನೆತನದವರು ಇರುವ ನಿವಾಸಕ್ಕೆ ಬಂದ ಮೇಲೆ ಅಂಬಾರಿ ಇಳಿಸಲಾಗುತ್ತದೆ.

6 ಸ್ತಬ್ಧಚಿತ್ರ, 14 ಕಲಾತಂಡ ಭಾಗಿ

ಮೈಸೂರು: ಮೆರವಣಿಗೆಯಲ್ಲಿ ಬಹು ವಸತಿ ಸಂಕೀರ್ಣ, ಕೊರೊನಾ ಮುಕ್ತ ಕರ್ನಾಟಕ, ಆನೆಬಂಡಿ, ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ, ಪರಿಸರ ಸಂರಕ್ಷಣೆ, ಸಮಗ್ರ ಕೃಷಿಯ ಸ್ತಬ್ಧಚಿತ್ರಗಳು, ಅಶ್ವರೋಹಿಪಡೆ, ಶಸ್ತ್ರಸಜ್ಜಿತ ಪೊಲೀಸರು, ಪೊಲೀಸ್‌ ವಾದ್ಯ ವೃಂದದವರು ಭಾಗವಹಿಸಲಿದ್ದಾರೆ. ಸರಳ ಆಚರಣೆ ಹಿನ್ನಲೆಯಲ್ಲಿ 14 ಜಾನಪದ ಕಲಾತಂಡ ಗಳು ಪಾಲ್ಗೊಳ್ಳಲಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಅವಕಾಶ ನೀಡಿರುವುದರಿಂದ ಕಡಿಮೆ ಸಂಖ್ಯೆಯ ಕಲಾವಿದರು ಭಾಗವಹಿಸ ಲಿದ್ದು, ಮೊದಲಿಗೆ ನಂದಿಧ್ವಜ ತಂಡ, ವೀರಗಾಸೆ ತಂಡ ಸಾಗಿದರೆ, ಹಿಂದೆ ನಿಶಾನೆ ಆನೆಗಳು, ನೌಪತ್‌ ಆನೆಗಳು ಸಾಗಲಿವೆ.

ಬಳಿಕ ನಾದಸ್ವರ ತಂಡ, ಸ್ಯಾಕೊÕàಫೋನ್‌, ವೀರಗಾಸೆ, 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಅಮೃತೋ ತ್ಸವದ ಸ್ತಬ್ಧಚಿತ್ರ, ಕಂಸಾಳೆ, ಮುಡಾದ ಬಹು ಮಹಡಿಯ ಸ್ತಬ್ಧಚಿತ್ರ, ಡೊಳ್ಳು ಕುಣಿತ, ಕೋವಿಡ್‌ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ನಗಾರಿ, ಪೂಜಾಕುಣಿತ ತಂಡಗಳು ಸಾಗಿದರೆ, ಅದರ ಹಿಂದೆ ಪರಿಸರದ ಪ್ರಾಮುಖ್ಯತೆ ತಿಳಿಸುವ ಸ್ತಬ್ಧಚಿತ್ರ, ಬಳಿಕ ಚಿಲಿಪಿಲಿ ಗೊಂಬೆ, ಕೊಂಬು-ಕಹಳೆ, ಗಾರುಡಿ ಗೊಂಬೆ ಸಾಗಲಿವೆ. ನಂತರ ಕೃಷ್ಟಿ ಇಲಾಖೆಯ ಸ್ತಬ್ಧಚಿತ್ರ, ಚೆಂಡೆ ವಾದನ ಹಾಗೂ ಕೊನೆಗೆ ಆನೆ ಬಂಡಿ ಮತ್ತು ಯಕ್ಷಗಾನ ಕಲಾ ತಂಡ ಸಾಗಲಿದೆ.

ವರ್ಚುಯಲ್‌ನಲ್ಲಿ ನೇರ ಪ್ರಸಾರ..

ಪ್ರತಿವರ್ಷ ದೇಶವಿದೇಶದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿ ಜಂಬೂಸವಾರಿಯ ವೈಭವ ಕಣ್ತುಂಬಿ ಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣಕ್ಕಾಗಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸುತ್ತಿರು ವುದರಿಂದ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ. ಹೀಗಾಗಿ ಅಂಬಾವಿಲಾಸ ಅರಮನೆ ಎದುರು ನಡೆಯುವ ಸರಳ ಜಂಬೂಸವಾರಿ ಮೆರವಣಿಗೆಯನ್ನು ವರ್ಚುಯಲ್‌ ಮೂಲಕ ನೇರಪ್ರಸಾರ ಮಾಡಲಾಗುತ್ತದೆ.

ಫೇಸ್‌ಬುಕ್‌ : https://www.facebook.com/mysurevarthe

ಯೂಟೂಬ್‌: https://tinyurl.com/mysurudasara2021

ವೆಬ್‌ಸೈಟ್‌: https://mysuredasara.gov.in  ಮೂಲಕ ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಬಹುದು.

ಜಂಬೂ ಸವಾರಿಗೆ 5 ಆನೆಗಳಿಗೆ ಅವಕಾಶ

ಅರಮನೆಗೆ ಸೀಮಿತವಾದಂತೆ ಸರಳವಾಗಿ ದಸರಾ ಉತ್ಸವ ನಡೆಯುತ್ತಿರುವುದರಿಂದ ಈ ಬಾರಿ 5 ಆನೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾ ಗಿದೆ. ಅಂಬಾರಿ ಆನೆಯಾಗಿ ಅಭಿಮನ್ಯು, ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ, ನಿಶಾನೆ ಆನೆಗಳಾಗಿ ಧನಂಜಯ ಮತ್ತು ಅಶ್ವತ್ಥಾಮ, ನೌಪತ್‌ ಆನೆಯಾಗಿ ಗೋಪಾಲಸ್ವಾಮಿ ಭಾಗವಹಿಸಲಿದ್ದಾನೆ. ಉಳಿದಂತೆ ಲಕ್ಷ್ಮೀ ಆನೆ ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಆಗಮಿಸಿರುವುದರಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಜೊತೆಗೆ ವಿಕ್ರಮ ಆನೆಗೆ ಮದ ಇಳಿಯದ ಕಾರಣ ಜಂಬೂ ಸವಾರಿಯಿಂದ ದೂರ ಉಳಿಯಲಿದೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.