ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

ಬಂಗಾಲದಲ್ಲಿ ಶಕ್ತಿ ಪೂಜೆ, ಉತ್ತರ‌ದಲ್ಲಿ ರಾಮಲೀಲೆ

Team Udayavani, Sep 27, 2022, 6:15 AM IST

ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

ಭಾರತದಲ್ಲಿ ನವರಾತ್ರಿಯ ದಿನಗಳು, ದೇವಿ ಆರಾಧಕರಿಗೆ, ಶ್ರೀರಾಮಭಕ್ತರಿಗೆ ಅತ್ಯಂತ ಮಹತ್ವದ ಸಮಯ. ಈ ಸಂದರ್ಭದಲ್ಲಿ ಇಡೀ ವಾತಾವರಣದಲ್ಲಿ ಒಂದು ಪಾವಿತ್ರ್ಯ ಎಲ್ಲರ ಅನುಭವಕ್ಕೆ ಬರುತ್ತಿರುತ್ತದೆ. ಉತ್ತರಭಾರತದಲ್ಲಿ ನವರಾತ್ರಿ ಆಚರಣೆ ಬಹಳ ವಿಶೇಷ. ಆದಿ ಪರಾಶಕ್ತಿ ಮಹಿಷಾಸುರನನ್ನು ಇದೇ ಅವಧಿಯಲ್ಲಿ ವಧಿಸುತ್ತಾಳೆ. ಶ್ರೀರಾಮ ರಾವಣನನ್ನು ಸಂಹರಿಸಿದ ಸಮಯವೂ ಹೌದು. ಹಾಗಾಗಿ ದೇಶಾದ್ಯಂತ ಈ ಅವಧಿಯಲ್ಲಿ ಬಹಳಷ್ಟು ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತವೆ. ದೇಶದ ಯಾವ್ಯಾವ ಭಾಗಗಳಲ್ಲಿ ಏನೇನು ಆಚರಣೆಗಳಿವೆ ಎಂಬ ಮಾಹಿತಿ ಇಲ್ಲಿದೆ.

ದುರ್ಗಾ ಅಂದರೆ…
ಯಾರು ದುರಿತಗಳು ಅಂದರೆ ಕಷ್ಟಗಳನ್ನು ನಿವಾರಿಸುತ್ತಾಳ್ಳೋ ಅವಳು ದುರ್ಗಾ. ದುರ್ಗಮನೆಂಬ ರಾಕ್ಷಸನನ್ನು ಕೊಂದಿದ್ದರಿಂದಲೂ ಆಕೆ ದುರ್ಗಾ. ಗಮಿಸಲು ಕಷ್ಟಕರವಾದ ಸಂಸಾರ ಸಾಗರವನ್ನು ದಾಟಿಸು ವವಳಾದ್ದರಿಂದಲೂ ಅವಳು ದುರ್ಗಾ. ದೇವಿಯನ್ನು ಪುಟ್ಟ ಬಾಲಕಿ ಯಿಂದ ಹಿಡಿದು ಪ್ರೌಢ ಸ್ತ್ರೀರೂಪಗಳಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ದೇವಿಯ 9 ವರ್ಷದ ಬಾಲಕಿಯ ಸ್ವರೂಪಕ್ಕೂ ದುರ್ಗಾ ಎಂದು ಕರೆಯ ುತ್ತಾರೆ. ಯಾವ ದೇವಿ ಮಧುಕೈಟಭರನ್ನು ನಾಶ ಮಾಡಿ ದಳ್ಳೋ, ಯಾರು ಮಹಿಷಾಸುರನನ್ನು ಕೊಂದಳ್ಳೋ, ಯಾವಾಕೆ ಶುಂಭ, ನಿಶುಂಭರನ್ನು ನಿರ್ನಾಮ ಮಾಡಿ, ಜಗತ್ತನ್ನು ಸಂಕಟದಿಂದ ಪಾರು ಮಾಡಿದಳ್ಳೋ ಅವಳು ದುರ್ಗಾ. ಹೀಗಾಗಿ ಯಾವುದೇ ಸ್ತ್ರೀದೇವತೆಯನ್ನು ದುರ್ಗಾ ಎಂದರೆ ತಪ್ಪಿಲ್ಲ. ಆದರೂ ಸಿಂಹವಾಹಿನಿಯಾದ ದೇವಿಯರನ್ನು ಮಾತ್ರ ದುರ್ಗಾ ಎನ್ನುವ ಪದ್ಧತಿಯೊಂದು ಚಾಲ್ತಿಯಲ್ಲಿದೆ.

ಪ.ಬಂಗಾಲದಲ್ಲಿ ಎಲ್ಲೆಲ್ಲೂ ದೇವಿಯೇ
ಇಡೀ ದೇಶದಲ್ಲಿ ನವರಾತ್ರಿ ಹೊತ್ತಿನಲ್ಲಿ ದುರ್ಗಾ ಸಪ್ತ ಶತೀಯನ್ನು ಗರಿಷ್ಠ ಪಾರಾಯಣ ಮಾಡು ವುದು, ದೇವಿಯನ್ನು ವಿವಿಧ ರೂಪಗಳಲ್ಲಿ ಆರಾ ಧನೆ ಮಾಡುವುದು ಪಶ್ಚಿಮ ಬಂಗಾಲದಲ್ಲಿ. ತ್ರಿಶೂಲ, ಚಕ್ರ, ಗದೆಯಂತಹ ಶಸ್ತ್ರಗಳನ್ನು ಹಿಡಿದ ದೇವಿ ಯರನ್ನು ಶಕ್ತಿ ರೂಪದಲ್ಲಿ ಅರ್ಚಿಸಲಾಗುತ್ತದೆ. ಇವರನ್ನು ಶಾಕ್ತರು ಎನ್ನುತ್ತಾರೆ. ಇವರು ತಂತ್ರ ಮಾರ್ಗ  ದಲ್ಲೂ ದೇವಿಯನ್ನು ಆರಾಧಿಸುತ್ತಾರೆ. ಇನ್ನು ಸರಸ್ವತೀ,ಲಕ್ಷ್ಮೀಯ ರೂಪದಲ್ಲೂ ಪೂಜಿಸಲಾಗುತ್ತದೆ. ಇವರದ್ದು ಸೌಮ್ಯ ಸ್ವಭಾವ.

ಬೀದಿಬೀದಿಗಳಲ್ಲೂ ಪೆಂಡಾಲ್‌ಗ‌ಳನ್ನು ಹಾಕಿ, ಸಿಂಹವಾಹಿನಿ, ಮಹಿಷಾಸುರಮರ್ದಿನಿಯ ರೂಪದಲ್ಲಿರುವ ದೇವಿಯ ಮಣ್ಣಿನ ವಿಗ್ರಹವನ್ನು ಪೂಜಿಸಲಾಗುತ್ತದೆ. 9 ದಿನಗಳ ಕಾಲ ಅದಕ್ಕೆ ಪೂಜೆ ಸಲ್ಲಿಸಿ, 10ನೇ ದಿನ ಅಂದರೆ ವಿಜಯದಶಮಿಯಂದು ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಹಾಗೆಯೇ ವೇದಿಕೆಗಳಲ್ಲಿ ಹಾಡು, ನರ್ತನ, ನಾಟಕಗಳನ್ನು ಆಡಿಸಲಾಗುತ್ತದೆ. ಇಲ್ಲೆಲ್ಲ ದೇವಿಯ ರೂಪ, ಮಹಿಷಾಸುರನ ನಾಶವನ್ನೇ ವರ್ಣಿಸ ಲಾಗುತ್ತದೆ. 9ನೇ ದಿನ ಎಂದಿನಂತೆ ಆಯುಧಪೂಜೆ ನಡೆಯುತ್ತದೆ. ವಿಜಯ ದಶಮಿಯಂದು ಮಹಿಳೆ ಯರು ವಿವಿಧ ಬಣ್ಣಗಳ ಸೀರೆಗಳನ್ನುಟ್ಟುಕೊಂಡು, ಪರಸ್ಪರರ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ. ಹಾಗೆಯೇ ದೇವಿಯ ಪಾದ, ಹಣೆಗೂ ಸಿಂಧೂರ ವನ್ನು ಬಳಿಯುತ್ತಾರೆ. ಇದನ್ನು ಸಿಂಧೂರ ಖೇಲಾ ಎಂದೇ ಕರೆಯುತ್ತಾರೆ.

ತ.ನಾಡು, ಆಂಧ್ರದಲ್ಲಿ ಗೊಂಬೆಗಳ ಪೂಜೆ
ಇಲ್ಲೂ ದೇಶಾದ್ಯಂತ ನಡೆಯುವಂತೆಯೇ ಸಾಂಪ್ರ ದಾಯಿಕ ಕ್ರಮದಲ್ಲಿ ದೇವಿ ಪೂಜೆ ನಡೆಯುತ್ತದೆ. ಕನ್ನಿಕೆ, ಕುಮಾರಿಕೆಯರ (9 ವರ್ಷದೊಳಗಿನ ಬಾಲಕಿಯರು) ಪೂಜೆ ನಡೆಯುತ್ತದೆ. ಮುತ್ತೈದೆಯನ್ನು ಮನೆಗೆ ಕರೆದು ಅರಿಶಿನ, ಕುಂಕುಮ, ಬಾಗಿನ ಕೊಡಲಾಗು ತ್ತದೆ. ಈ ಎರಡೂ ರಾಜ್ಯಗಳಲ್ಲಿ ಗಮನಿಸಲೇಬೇಕಾದ ಸಂಗತಿಯೆಂದರೆ ಗೊಂಬೆಗಳ ಪೂಜೆ ನಡೆಸುವುದು. ತಮಿಳುನಾಡಿನಲ್ಲಿ ಇದನ್ನು ಬೊಮ್ಮಾಯಿ ಗೊಲು, ಆಂಧ್ರಪ್ರದೇಶದಲ್ಲಿ ಬೊಮ್ಮಲ ಕೊಲುವು ಎಂದು ಕರೆಯಲಾಗುತ್ತದೆ. ಇಲ್ಲಿ ದೇವದೇವಿಯರು, ಸಾಧುಸಂತರ ಸಣ್ಣಸಣ್ಣ ಗಾತ್ರದ ಆಟಿಕೆಗಳಂತಹ ಗೊಂಬೆಗಳನ್ನು ಜೋಡಿಸಲಾಗುತ್ತದೆ. 9 ಮೆಟ್ಟಿಲುಗಳನ್ನು ಮಾಡಿ, ಪ್ರತೀ ಮೆಟ್ಟಿಲಿನ ಮೇಲೆ ಈ ಆಟಿಕೆ ಗಳನ್ನು ಕೂರಿಸ ಲಾಗುತ್ತದೆ. ಮೇಲಿನ ಮೆಟ್ಟಿಲಿನಲ್ಲಿ ದೇವಿಯ ಮೂರ್ತಿ ಗಳನ್ನು ಇಡಲಾಗುತ್ತದೆ. ಇದು ಕರ್ನಾಟಕದ ಹಲವು ಭಾಗಗಳಲ್ಲೂ ನಡೆಯುತ್ತದೆ. 10ನೇ ದಿನ ಈ ಗೊಂಬೆಗಳನ್ನು ತೆಗೆದು, ಸುರಕ್ಷಿತವಾಗಿ ಕಟ್ಟಿಡಲಾಗುತ್ತದೆ.

ಆಂಧ್ರ, ತೆಲಂಗಾಣದಲ್ಲಿ ಬತುಕಮ್ಮ ಪಂಡುಗ…
ಆಂಧ್ರಪ್ರದೇಶದಲ್ಲಿ ಗೊಂಬೆ ಪೂಜೆ ಮಾಡುವುದರ ಜೊತೆಗೆ ಬತುಕಮ್ಮ ಪಂಡುಗ ಮಾಡುತ್ತಾರೆ. ಅಂದರೆ ಗೌರಿ ದೇವಿಯ ಹಬ್ಬ. ಕನ್ನಡದಲ್ಲಿ ಬದುಕು ಎನ್ನುವುದನ್ನೇ ತೆಲುಗಿನಲ್ಲಿ ಬತುಕು ಎನ್ನಲಾಗುತ್ತದೆ. ಅರ್ಥಾತ್‌ ಇಲ್ಲಿ ಬದುಕಿನ ಹಬ್ಬ ಮಾಡಲಾಗುತ್ತದೆ. ಔಷಧದ ಗುಣಗಳಿರುವ ವಿವಿಧ ಹೂವುಗಳಿಂದ ಗೋಪುರಗಳನ್ನು ಮಾಡಲಾ  ಗುತ್ತದೆ. ಅದನ್ನೇ ಪೂಜಿಸಲಾಗುತ್ತದೆ. ಇಲ್ಲಿ ಬಣ್ಣಬಣ್ಣದ ವಿವಿಧ ಹೂವಿನ ಮಾಲೆಗಳಿರುತ್ತವೆ. ಒಟ್ಟಾರೆ ಈ ಹೂವು ಗಳ ಗೋಪುರಗಳನ್ನು ಮಾಡಿ ಗೌರಿಯನ್ನು ಆರಾ ಧಿಸಲಾಗುತ್ತದೆ. 10ನೇ ದಿನ ಈ ಹೂವಿನ ಗೋಪುರ ಗಳನ್ನು ವಿಸರ್ಜಿಸಲಾಗುತ್ತದೆ. ವಿಶೇಷ ವೆಂದರೆ ಪ್ರತೀವರ್ಷ ಮಹಾಲಯ ಅಮಾವಾಸ್ಯೆಗೆ ಇದು ಆರಂಭವಾಗುತ್ತದೆ.

ಕೇರಳದಲ್ಲಿ ಶಕ್ತಿ, ಸರಸ್ವತೀ ಪೂಜೆ
ಕೇರಳದಲ್ಲಿ ದೇವಿ ಆರಾಧಕರ ಸಂಖ್ಯೆ ಜಾಸ್ತಿ. ಇಲ್ಲಿ ತಾಂತ್ರಿಕರ ಸಂಖ್ಯೆಯೂ ಹೆಚ್ಚು. ಹಾಗಾಗಿ ನವ ರಾತ್ರಿಯನ್ನು ಸಾಂಪ್ರದಾಯಿಕವಾಗಿ ಆರಾಧಿಸಲಾಗುತ್ತದೆ. ವಿಶೇಷವಾಗಿ ವಿದ್ಯಾದೇವಿ ಸರಸ್ವತೀಯನ್ನು ಪೂಜಿಸಲಾಗುತ್ತದೆ. ಉತ್ಸವದ ಕೊನೆಯ ಮೂರು ದಿನಗಳಲ್ಲಿ ಪುಸ್ತಕಗಳನ್ನಿಟ್ಟು ಪೂಜಿಸಲಾಗು ತ್ತದೆ. ಕೊನೆಯ ದಿನದಂದು ಈ ಹೊತ್ತಿಗೆಗಳನ್ನು ತೆರೆದು ಪಾರಾಯಣ ಮಾಡಲಾಗುತ್ತದೆ.

ಉತ್ತರಭಾರತದಲ್ಲಿ ಶ್ರೀರಾಮಲೀಲಾ
ಶ್ರೀರಾಮ, ರಕ್ಕಸ ರಾವಣನನ್ನು ಸಂಹರಿಸಿದ್ದು ನವ ರಾತ್ರಿಯ ಪೈಕಿ 9ನೇ ದಿನ. 10ನೇ ದಿನ ಅದರ ಸಂಭ್ರಮಾಚರಣೆ ಎಂಬ ವಿವರಗಳು ವಾಲ್ಮೀಕಿ ರಾಮಾಯಣದಲ್ಲಿದೆ. ಹೀಗಾಗಿ ಶ್ರೀರಾಮನನ್ನು ಬಹಳ ಪೂಜಿಸುವ ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಹರಿಯಾಣ, ಗುಜರಾತ್‌, ಬಿಹಾರ, ದಿಲ್ಲಿಯಲ್ಲಿ ಶ್ರೀರಾಮಲೀಲೆ ನಡೆಸಲಾಗುತ್ತದೆ. ದಿಲ್ಲಿಯಲ್ಲಂತೂ ಶ್ರೀರಾಮಲೀಲಾ ನಾಟಕಗಳು ಬಹಳ ಜನಪ್ರಿಯ. 10ನೇ ದಿನ ಹತ್ತು ತಲೆಗಳ ರಾವಣನ ಮೂರ್ತಿಯನ್ನು ಮಾಡಿ ಅದನ್ನು ಸುಟ್ಟು ಹಾಕಲಾಗುತ್ತದೆ. ಈ 9 ದಿನಗಳಲ್ಲಿ ವಿವಿಧ ಸಿಹಿತಿನಿಸುಗಳನ್ನು ಮಾಡಲಾಗುತ್ತದೆ. ಸ್ತ್ರೀ ಪುರುಷರು 9 ದಿನಗಳ ಕಾಲ ನೀರನ್ನು ಮಾತ್ರ ಸೇವಿಸುತ್ತ ಉಪವಾಸವಿರುತ್ತಾರೆ. ಈ ಹಬ್ಬ ಅಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತದೆ.

ಪಶ್ಚಿಮಭಾರತದಲ್ಲಿ
ಗೋವಾ, ಗುಜರಾತ್‌, ಮಹಾರಾಷ್ಟ್ರ ಪಶ್ಚಿಮ ಭಾರತದ ಪ್ರಮುಖ ರಾಜ್ಯಗಳು. ಇಲ್ಲಿ ದೇವಿ ಆರಾಧನೆ ಮಾಮೂಲಿಯಂತೆ, ಅಷ್ಟೇ ಅದ್ದೂರಿಯಾಗಿ ನಡೆಯುತ್ತದೆ. ದೇವಸ್ಥಾನಗಳಿಗೆ ಹೋಗುವುದು, ದುರ್ಗಾ ಸಪ್ತಶತೀ, ಲಲಿತಾ ಸಹಸ್ರನಾಮ, ಖಡ್ಗಮಾಲಾ ಸ್ತೋತ್ರಗಳನ್ನು ಓದುವುದು ಸಹಜ. ಮುಖ್ಯವಾಗಿ ಗುಜರಾತ್‌ನಲ್ಲಿ ರಾತ್ರಿ ಹೊತ್ತು ಅಲ್ಲಿನ ಸಾಂಪ್ರದಾಯಿಕ ನೃತ್ಯ “ಗರ್ಭಾ’ ನಡೆಯುತ್ತದೆ. ಇಲ್ಲಿ ಸ್ತ್ರೀ-ಪುರುಷರಿಬ್ಬರೂ ಸೇರಿ ನರ್ತಿಸುತ್ತಾರೆ.

ಟಾಪ್ ನ್ಯೂಸ್

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ತಾಯ್ತನ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.