ನಮಸ್ತೇಸ್ತು ಮಹಾಮಾಯೇ ಶ್ರೀ ಪೀಠೇ ಸುರಪೂಜಿತೇ


Team Udayavani, Sep 26, 2022, 1:41 PM IST

11

ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ – ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರನ್ನು ಆರಾಧಿಸುವ ಪರ್ವ ನವರಾತ್ರಿ. ಮೊದಲ ಮೂರು ದಿವಸಗಳು ದುರ್ಗೆ, ನಂತರದ ಮೂರು ದಿನ ಲಕ್ಷ್ಮೀ, ಮತ್ತು ಕೊನೆಯ ಮೂರು ದಿವಸಗಳಲ್ಲಿ ಸರಸ್ವತಿಯನ್ನು ಪೂಜಿಸುವ ಸಂಪ್ರದಾಯ. 10ನೇ ದಿವಸ ವಿಜಯದಶಮಿ. ದುರ್ಗೆ, ಲಕ್ಷ್ಮೀ, ಸರಸ್ವತಿಯರನ್ನು ಒಲಿಸಿಕೊಂಡರೆ ಜಯ ನಿಶ್ಚಿತ ಎಂದೇ ಅನುಸಂಧಾನ.

ದುರ್ಗತಿಯನ್ನು ಹರಣ ಮಾಡುವವಳೇ ದುರ್ಗಾ. ನಮ್ಮಲ್ಲಿ ಅಡಗಿರುವ ತಮೋ ಗುಣವನ್ನು ನಾಶಗೊಳಿಸುವವಳು ದುರ್ಗೆ. “ಮಹಿಷ’ ತಮೋಗುಣದ ಸಂಕೇತ. ಲಕ್ಷ್ಮೀ ಭೌತಿಕ ಸಂಪತ್ತಿನ ದೇವತೆಯಲ್ಲ. ಭೌದ್ಧಿಕ ಸಂಪತ್ತಿನ ಅಧಿದೇವತೆ.

ಭೌದ್ಧಿಕ ಶ್ರೀಮಂತಿಕೆಯಿಲ್ಲದಿದ್ದಲ್ಲಿ ಭೌತಿಕ ಶ್ರೀಮಂತಿಕೆಯನ್ನು ಅನುಭವಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಮೌಲ್ಯಗಳೇ ಆಂತರಿಕ ಸಂಪತ್ತು. ತೈತ್ತಿರೀಯ ಉಪನಿಷತ್‌, ನಮಗೆ ಮೊದಲು ಉದಾತ್ತ ಗುಣಗಳನ್ನು ನೀಡು ನಂತರ ಸಂಪತ್ತನ್ನು ಕರುಣಿಸು ಎಂದಿದೆ. ಆದಿಶಂಕರಾಚಾರ್ಯರು “ವಿವೇಕಚೂಡಾಮಣಿ’ಯಲ್ಲಿ, ಆರು ಬಗೆಯ ಸಂಪತ್ತನ್ನು ಹೇಳಿದ್ದಾರೆ. ಷಟ್‌ ಸಂಪತಿ. ಲಕ್ಷ್ಮೀಪೂಜೆಯಿಂದ ಸಿದ್ಧಿಸುತ್ತದೆ.

ಆಧ್ಯಾತ್ಮದ ತಿಳುವಳಿಕೆಯೇ ನೈಜ ಜ್ಞಾನ. ಆತ್ಮಜ್ಞಾನ ಅಥವಾ ಸ್ವಜ್ಞಾನಕ್ಕಿಂತ ಶ್ರೇಷ್ಠವಾದ ಬೇರೊಂದು ಜ್ಞಾನವೇ ಇಲ್ಲ. ಆ ಜ್ಞಾನವೇ ಸರಸ್ವತಿ. ಸರಸ್ವತಿಯ ಆರಾಧನೆಯೂ ನವರಾತ್ರಿಯಲ್ಲಿ ವಿಶೇಷ.ಮನಸ್ಸಿನ ಕ್ಲೇಶಗಳನ್ನು ನಿವಾರಿಸಲು ದುರ್ಗೆ, ಉದಾತ್ತ ಮೌಲ್ಯ, ಗುಣಗಳನ್ನು ಕರುಣಿಸಲು ಲಕ್ಷ್ಮೀ. ಪರಮೋತ್ಛ ಆತ್ಮಜ್ಞಾನವನ್ನು ನೀಡಲು ಸರಸ್ವತಿಯನ್ನು ಮೂರು ಮೂರು ರಾತ್ರಿಗಳಲ್ಲಿ ಪೂಜಿಸುವ ವಿಶಿಷ್ಟ ರಾತ್ರಿಯೇ ನವರಾತ್ರಿ. ನವರಾತ್ರಿಯಲ್ಲಿ ರಾತ್ರಿ ಆಚರಣೆಗೇನು ಮಹತ್ವ? ಅದರಲ್ಲೊಂದು ಆಧ್ಯಾತ್ಮ ಸಂದೇಶ ಅಡಗಿದೆ. ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಮಲಗುವುದೇ ನಮಗೆ ರೂಢಿಯಾಗಿದೆ. ನಿದ್ದೆ ತಮೋಗುಣದ ಲಕ್ಷಣ. ಏಳಿ! ತಮೋಗುಣದಿಂದ ಮುಕ್ತರಾಗಿ ಎಂದೇ ಸಂದೇಶ!

ನವರಾತ್ರಿ ಮತ್ತು ವಿಜಯದಶಮಿಯ ಆ ಹತ್ತು ದಿವಸಗಳು ನಮ್ಮಲ್ಲಿ ಅಡಗಿರುವ ಹತ್ತು ಅನಿಷ್ಠ, ಕೆಟ್ಟ ಗುಣಗಳ ಸಂಕೇತವೆನ್ನಬಹುದು. ಕಾಮ, ಕ್ರೋದ, ಲೋಭ, ಮೋಹ, ಅಹಂಕಾರ ಅಥವಾ ಮದ, ಈರ್ಷೆ ಅಥವಾ ಮತ್ಸರ, ಭೀತಿ, ಜಡತ್ವ, ಹಗೆತನ, ಪಶ್ಚಾತ್ತಾಪ ಇತ್ಯಾದಿ ದಶಗುಣಗಳು. ಹಿಂದೂ ಸಂವತ್ಸರದಲ್ಲಿ ನವರಾತ್ರಿ, ಮಹಾರಾತ್ರಿ ಅಥವಾ ಶಿವರಾತ್ರಿ, ಕಾಳರಾತ್ರಿ ಅಥವಾ ದೀಪಾವಳಿ ರಾತ್ರಿ ವಿಶೇಷ ಹಬ್ಬಗಳು.

ವರ್ಷದಲ್ಲಿ ನವರಾತ್ರಿಯನ್ನು ಐದು ಬಾರಿ ಆಚರಿಸುವ ಸಂಪ್ರದಾಯವಿದೆ. ವಸಂತ ನವರಾತ್ರಿ, ಆಷಾಢ ನವರಾತ್ರಿ, ಶಾರದಾ ನವರಾತ್ರಿ ಮತ್ತು ಪೌಷ/ ಮಾಘ ನವರಾತ್ರಿ. ಶಾರದಾ ಮತ್ತು ವಸಂತ ನವರಾತ್ರಿ ಅತಿ ಮಹತ್ವದ್ದು.

ವಸಂತ ನವರಾತ್ರಿ : ನವ ವಿಧ ಶಕ್ತಿ ದೇವತೆಗಳನ್ನು ಆರಾಧಿಸುವ ಪರ್ವವೇ (ಮಾರ್ಚ್‌, ಎಪ್ರಿಲ್‌) ಬಸಂತ ನವರಾತ್ರಿ ಅಥವಾ ಚೈತ್ರ ನವರಾತ್ರಿ. ಇದನ್ನು ರಾಮ ನವರಾತ್ರಿ ಎಂತಲೂ ಕರೆಯುತ್ತಾರೆ.

ಗುಪ್ತ ನವರಾತ್ರಿ : ಗುಪ್ತನವರಾತ್ರಿ ಅಥವಾ, ಆಷಾಡ ಅಥವಾ ಗಾಯತ್ರಿ ಅಥವಾ ಶಾಕಾಂಭರಿ ನವರಾತ್ರಿ ಆಷಾಢ ಶುಕ್ಲ (ಜೂನ್‌- ಜುಲೈ) ದಂದು ಆಚರಿಸಲ್ಪಡುವ ನವರಾತ್ರಿ.

ಶಾರದಾ ನವರಾತ್ರಿ: ಇದು ಮಹಾ ನವರಾತ್ರಿಯೂ ಹೌದು. ಆಶ್ವಯುಜ ಮಾಸದಲ್ಲಿ ನಡೆಯುವ ಶಾರದಾ ನವರಾತ್ರಿಯೂ ಹೌದು. ಸಪ್ಟೆಂಬರ್‌ -ನವೆಂಬರ್‌ ತಿಂಗಳಲ್ಲಿ ಬರುವ ಹಬ್ಬ.

ಪೌಷ ನವರಾತ್ರಿ : ದಶಂಬರ-ಜನವರಿಯಲ್ಲಿ ಬರುವ ನವರಾತ್ರಿ ಹಬ್ಬವಿದು. ಪುಷ್ಯ ಶುಕ್ಲಪಕ್ಷದಂದು ಆಚರಣೆ.

ಮಾಘ ನವರಾತ್ರಿ : ಗುಪ್ತನವರಾತ್ರಿ ಎಂತಲೂ ಹೆಸರಿದೆ. ಮಾಘ ಮಾಸ ಶುಕ್ಲಪಕ್ಷದಲ್ಲಿ ಬರುವ ನವರಾತ್ರಿ (ಜನವರಿ-ಫೆಬ್ರವರಿ) ಚೈತ್ರ ನವರಾತ್ರಿ ಮತ್ತು ಶಾರದಾ ನವರಾತ್ರಿ, ಎಂಬ ಎರಡು ನವರಾತ್ರಿ ಹಬ್ಬಗಳು ಅತಿ ವಿಶಿಷ್ಟವಾದುದು. ಅದರಲ್ಲೂ ಶಾರದಾ ನವರಾತ್ರಿ ಅತೀ ಸಂಭ್ರಮದಿಂದ ನಡೆಯುತ್ತದೆ. ಮೊದಲ ಮೂರು ದಿನಗಳಲ್ಲಿ ಮಹಾಕಾಳಿಯನ್ನೂ, ನಂತರದ ಮೂರು ದಿನಗಳು ಮಹಾಲಕ್ಷ್ಮೀ, ಮತ್ತು ಕೊನೆಯ ಮೂರು ದಿನಗಳಲ್ಲಿ ಮಹಾಸರಸ್ವತಿಯನ್ನು ಪೂಜಿಸುವುದು ಪದ್ಧತಿ.

ಶೈಲಪುತ್ರಿ, ಬ್ರಹ್ಮಚಾರಿಣೀ, ಚಂದ್ರಘಂಟ, ಕೂಷ್ಮಾಂಡ, ಸ್ಕಂಧಮಾತಾ, ಕಾತ್ಯಾಯಿನೀ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಇತ್ಯಾದಿ ಒಂಭತ್ತು ರೂಪಗಳಿಂದ ದೇವಿಯನ್ನು ಪೂಜಿಸುವುದು ನವರಾತ್ರಿಯ ವಿಶೇಷತೆ.

ದುರ್ಗಾ ಪೂಜೆ – ಚರಿತ್ರೆಯ ಪುಟಗಳಲ್ಲಿ:

ದುರ್ಗಾಪೂಜೆಯು ಕುಶಾನರ ಕಾಲದಿಂದ ಅಸ್ತಿತ್ವದಲ್ಲಿತ್ತು. ಪಲ್ಲವ ಮತ್ತು ಪಾಂಡ್ಯರ ಕಾಲದಲ್ಲಿ (7-9 ನೇ ಶತಮಾನದಲ್ಲಿ) ಮಹಿಷಮರ್ಧಿನಿ ಆರಾಧನೆಯು ಕಂಡುಬರುತ್ತಿತ್ತು. ಸುಮಾರು ಇದೇ ಕಾಲದಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲೂ ದೇವೀ ದೇವಾಲಯಗಳು ಅಸ್ತಿತ್ವಕ್ಕೆ ಬಂದವು.

ತುಳುನಾಡಿನಲ್ಲಿ ಬಹುತೇಕ ದುರ್ಗಾ, ದುರ್ಗಾ ಭಗವತೀ, ದುರ್ಗಾಪರಮೇಶ್ವರಿ, ಮಹಿಷಮರ್ಧಿನಿ, ಮಹಿಷಾಸುರಮರ್ಧಿನಿ ಮತ್ತು ಚಂಡಿಕಾದೇವಿ ಎಂಬ ಹೆಸರಿನಲ್ಲಿ ಆರಾಧನೆ ಮತ್ತು ದೇವಾಲಯಗಳಿವೆ. ಸಪ್ತಮಾತೃಕೆಯರ ಪೂಜೆಯನ್ನೂ ಕೆಲವು ದೇವಾಲಯಗಳಲ್ಲಿ ಕಾಣಬಹುದು. ಬ್ರಹ್ಮಣಿ (ಸರಸ್ವತಿ) ಮಾಹೇಶ್ವರೀ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಾ. ಯೋಗೇಶ್ವರೀಯನ್ನು ಆರಾಧಿಸುವ ಪದ್ಧತಿಯಿದೆ. (ಅಷ್ಟ ಮಾತೃಕೆಯರು) ಬ್ರಾಹ್ಮೀ, ಮಾಹೇಶ್ವರೀ, ವೈಷ್ಣವಿಯರನ್ನು ಗಾಯತ್ರಿ ಸಾವಿತ್ರಿ ಮತ್ತು ಸರಸ್ವತಿಯೆಂದು ಕೆಲವೆಡೆ ಪೂಜೆ.

ಅಷ್ಟ ಮಾತೃಕೆಯರು ಎಂಟು ಮನೋ ಗುಣಗಳನ್ನು ಪ್ರತಿನಿಧಿಸುವುದು ಎಂದು ನಂಬಿಕೆ. ಯೋಗೇಶ್ವರಿ – ಕಾಮ, ಮಹೇಶ್ವರಿ – ಕ್ರೋಧ, ವೈಷ್ಣವಿ – ಲೋಭ, ಬ್ರಹ್ಮಣಿ – ಮದ, ಕೌಮಾರಿ – ಮೋಹ, ಇಂದ್ರಾಣಿ – ಮಾತ್ಸರ್ಯ, ಚಾಮುಂಡಾ – ಪೈಶುನ್ಯ ಮತ್ತು ವಾರಾಹಿ – ಅಸೂಯ.

-ಜಲಂಚಾರು ರಘುಪತಿ ತಂತ್ರಿ – ಉಡುಪಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ತಾಯ್ತನ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.