ಶರನ್ನವರಾತ್ರಿಯ ಸಾಧನಾ ವೈಶಿಷ್ಟ್ಯಗಳು


Team Udayavani, Sep 28, 2022, 6:10 AM IST

ಶರನ್ನವರಾತ್ರಿಯ ಸಾಧನಾ ವೈಶಿಷ್ಟ್ಯಗಳು

ಆಶ್ವಿ‌ನ ಶುಕ್ಲಪಕ್ಷ ಪ್ರತಿಪದದಿಂದ ಮೊದಲ್ಗೊಂಡು ದಶಮಿ ಯವರೆಗಿನ ದಶತಿಥಿಗಳಲ್ಲಿ ವಿಶ್ವಾದ್ಯಂತ ಶಕಾöರಾಧನೆಯು ವೈವಿಧ್ಯಪೂರ್ಣವಾಗಿ ನೆರವೇರುತ್ತದೆ. ಶರದೃತುವಿನ ಈ ಪರ್ವಕಾಲವು ಪ್ರಕೃತಿಯ ಆರಾಧನೆಯೆಂದು ಉಲ್ಲೇಖಿತವಾಗಿದ್ದರೂ ಇದರ ತಾಂತ್ರಿಕ ಮತ್ತು ವೈದಿಕ ಹಿನ್ನೆಲೆಯನ್ನು ಗಮನಿಸಿದರೆ ಆಧ್ಯಾತ್ಮಿಕವಾದ ಮೌಲ್ಯದ ಮಹತ್ವವು ರೋಚಕವೆನಿಸುತ್ತದೆ.

ಆದಿ ಶಂಕರಾಚಾರ್ಯರು ತಮ್ಮ ಆನಂದಲಹರಿಯಲ್ಲಿ”ಶಿವ ಶಕ್ತ್ಯಾಯುಕ್ತೋ ಭವತಿ ಪ್ರಭವಿತಂ|
ನಚೀದೇವೀಂ ದೇವೋನ ಬಲುಶಕ್ತಃ ಸ್ಕಂದಿತುಮಷಿ||’ ಎಂದಿದ್ದಾರೆ.

ಅಂದರೆ ಸರ್ವ ಸಮರ್ಥನಾದ ಪರಶಿವನೂ ದೇವೀಶಕ್ತಿ ರಹಿತನಾದರೆ ಏನನ್ನೂ ಮಾಡಲಾರ ಎಂಬ ಭಾವ. ಪುರುಷ ಪ್ರಧಾನ ಸಮಾಜದಲ್ಲಿ ಮಾತೃರಾಧನೆಯು ಎಷ್ಟು ಮಹತ್ತರವಾಗಿತ್ತು ಎನ್ನುವುದನ್ನು ಭಗವತ್ಪಾದದ ಉಲ್ಲೇಖವು ಸ್ಪಷ್ಟಪಡಿಸುತ್ತದೆ. ಈ ರೀತಿಯ ಸ್ತ್ರೀ ಶಕ್ತಿ ಆರಾಧನೆಯ ಪರಿಪಕ್ವ ಕಾಲವೇ ಶರನ್ನವರಾತ್ರಿಯ ಪವಿತ್ರ ನವದಿನಗಳು ಅಂದರೆ ಒಟ್ಟು ಇನ್ನೂರ ಹದಿನಾರು ತಾಸುಗಳು. 2 + 1 + 6 = 9. ಯಾವ ರೀತಿ ಸಮೀಕರಣ ನಡೆಸಿದರೂ ಸಂಖ್ಯೆಯು ಒಂಬತ್ತರ ಮಹತ್ವವನ್ನು ಪಡೆದೇ ಪಡೆಯುತ್ತದೆ. ಬಹುಶಃ ನವಗ್ರಹ, ನವಮಾಸ, ನವಶಕ್ತಿ, ನವಕ ಪ್ರಧಾನ, ನವಧ್ಯಾರ, ನವಧಾನ್ಯ. ಹೀಗೆ ಒಂಬತ್ತರ ಮಹಿಮೆ ಸಾಕಾರಗೊಳ್ಳುತ್ತಲೇ ಹೋಗುತ್ತದೆ.

ಶರನ್ನವರಾತ್ರಿಯ ಪವಿತ್ರ ಕಾಲದಲ್ಲಿ ನಾವು ಶಕ್ತಿ ಸ್ವರೂಪಿಯನ್ನು ಹೊಸ ರೀತಿ ಪ್ರಸನ್ನೀಕರಿಸಬಹುದು? ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ, ತ್ರಿಶಕ್ತಿಗಳ ವೈವಿಧ್ಯಮಯ ಸ್ವರೂಪಗಳ – ನಾಮಗಳ ವೈಶಿಷ್ಟéಪೂರ್ಣ ಆರಾಧನೆ ಹೇಗೆ ನಡೆಸಬಹುದು ಎನ್ನುವುದನ್ನು ಹಲವು ಪುರಾಣಗಳು ಸಾರುತ್ತವೆ. ಆದರೆ ಭಗವತಿ ದುರ್ಗೆಗೆ ಅತ್ಯಂತ ಪ್ರಿಯವಾದ ಅತೀ ಸರಳವಾದ ವಿಧಾನವೆಂದರೆ ಆಚಾರ-ಸ್ತುತಿ-ನುತಿ – ಸ್ತೋತ್ರ ಪಾರಾಯಣ. ಅಷ್ಟಾಂಗ ಯೋಗತಣ್ತೀದಲ್ಲಿಉಲ್ಲೇಖಿತವಾದ ಯಮನಿಯಮಗಳಿಗೆ ಶಕಾöರಾಧನೆಯಲ್ಲಿ ಅತೀ ಮಹತ್ವವಿದೆ.
ಜಗನ್ಮಾತೆಯ ಆರಾಧನೆಗೆ ಉತ್ಸುಕತೆ ಇರುವವರು ಮೊತ್ತಮೊದಲು ಆಚಾರವಂತರಾಗಲು ಪ್ರಯತ್ನಿಸಬೇಕು. ಅಹಿಂಸೆ, ಇಂದ್ರಿಯನಿಗ್ರಹ, ಅಕ್ರೋದ, ಸತ್ಯವಾಚನ, ತ್ರಿಕರಣ ಶುದ್ಧಿಗಳಿಗೆ ಮಹತ್ವ ನೀಡಿ, ಷಡ್ವರ್ಗಗಳನ್ನು ನಿಗ್ರಹಿಸಲು ಯತ್ನಿಸಬೇಕು. ದೇವಿಯ ಪ್ರಸಾದವೆಂದೇ ಆಹಾರಗಳನ್ನು ಪರಿಗಣಿಸಿ ಸೇವಿಸಬೇಕು. ಸಾಧ್ಯವಾದಷ್ಟು ಮೌನವ್ರತರಾಗಿದ್ದುಕೊಂಡು ಸ್ತುತಿ, ಸ್ತೋತ್ರ, ಪಾರಾಯಣಗಳಿಗೆ ತನು-ಮನಗಳನ್ನು ಸಮರ್ಪಿಸಬೇಕು. ಪಾಮರರಿಂದ ಮನುಷ್ಯರು ಕೂಡ ಭಕಾöರಾಧನೆಯನ್ನು ಆಚಾರವಂತರಾಗಿ ಸರಳರೀತಿಯಿಂದ ನೆರವೇರಿಸಬಹುದು. ಯಾವುದೇ ಆರಾಧನೆಯನ್ನು ನಾವು ಎಷ್ಟು ಮಾಡುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ.

ದೇವಿಯು ಪ್ರಿಯಳಾಗುವ ಸರಳ ಸ್ತುತಿಗಳು
ದುರ್ಗೆಯು ಸ್ತೋತ್ರಪ್ರಿಯೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಶರನ್ನವರಾತ್ರಿಯ ಪವಿತ್ರ ಪರ್ವಕಾಲದಲ್ಲಿ ಸರಳವಾದ ಕೆಲವು ಸ್ತೋತ್ರಗಳನ್ನು ಪಠಿಸುವುದರಿಂದ ಮಾತೆಯ ಅನುಗ್ರಹವನ್ನು ಪಡೆಯಲು ಅವಕಾಶವಿದೆ.
“ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿದೇವಿ ಪರಂಸುಖಂ|
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಅದೇ ರೀತಿ,”ವಿದ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂ ಜನಂಕುರು
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಈ ಸ್ತೋತ್ರವನ್ನು ಸರ್ವರೂ ದಿನನಿತ್ಯ ಪಠಿಸಬಹುದು.
“ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಸೆ„ ನಮಸ್ತಸ್ಸೆ„ ನಮಸ್ತಸ್ಸೆ„ ನಮೋ ನಮಃ|’
ಇದು ಸದಾಕಾಲ ಪಠಿಸಬಹುದಾದ ಸರಳವಾದ ಮಾತೃಸ್ತುತಿ. ಎಲ್ಲಕ್ಕಿಂತಲೂ ಸುಲಭವಾದ ಸ್ತುತಿ ಎಂದರೆ ಶಂಕರ ಭಗವತ್ಪಾದರೆಂದಂತೆ ಆತ್ಮಸಮರ್ಪಣೆ ಮತ್ತು ಮನೋರಾಧನೆ. ಇದರಿಂದ ತಾಯಿ ನಮ್ಮ ಮನದಲ್ಲೇ ನೆಲೆ ನಿಲ್ಲುತ್ತಾಳೆ.

– ಮೋಹನದಾಸ ಸುರತ್ಕಲ್‌

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ

Navratri Special: ತಾಯ್ತನ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri Special: ತಾಯ್ತನದ ಭಾವ ಎನ್ನುವುದು ಹೆಣ್ಣಿಗೆ ಮಾತ್ರ ಸೀಮಿತವೇ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.