ಮೊದಲ ಮತದಾರರೇ ಇತ್ತ ನೋಡಿ
Team Udayavani, Apr 17, 2019, 6:00 AM IST
ಕರ್ನಾಟಕದಲ್ಲಿ ಏ.18 (ಗುರುವಾರ) ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. ಮತಗಟ್ಟೆಗೆ ಹೋದಾಗ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತದಾನ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಲಹಾತ್ಮಕ ಅಂಶಗಳಿವು..
3 ವಿಧಗಳಲ್ಲಿ ಮತದಾರರು ನೋಂದಣಿಯಾಗಿರಬೇಕು
1 ಸಾಮಾನ್ಯ ಮತದಾರರು: ಭಾರತ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ವಾಸ್ತವ್ಯ
ಇರುವ ಜನರು.
2 ಸಾಗರೋತ್ತರ ಮತದಾರರು: ಉದ್ಯೋಗಕ್ಕಾಗಿ ಅಥವಾ ಶಿಕ್ಷಣಕ್ಕಾಗಿ ಇತರ ದೇಶಗಳಲ್ಲಿ ನೆಲೆಸಿರುವವರು. ಜತೆಗೆ ನಿಗದಿತ ದೇಶದ ಪೌರತ್ವ ಪಡೆದುಕೊಳ್ಳದೇ ಇರುವವರು.
3 ಸೇವಾ ಮತದಾರರು: ಸೇನೆಯಲ್ಲಿ ಕರ್ತವ್ಯದಲ್ಲಿ, ರಾಜ್ಯಕ್ಕೆ ಸಂಬಂಧಿಸಿದ ಪೊಲೀಸ್ ಪಡೆ, ವಿದೇಶಗಳಲ್ಲಿ ಭಾರತಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ನಿರತರಾದವರು.
ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎಂಬ ಪರಿಶೀಲನೆ ಹೇಗೆ?
ಎನ್‌ಎಸ್‌ವಿಪಿ ವೆಬ್‌ಸೈಟ್‌ನಲ್ಲಿ
ಮೊದಲ ಹಂತ: www.nvsp.in ವೆಬ್‌ಸೈಟ್‌ಗೆ ಭೇಟಿ ಕೊಡಿ
ಎರಡನೇ ಹಂತ: ಎನ್‌ವಿಎಸ್‌ಪಿ ವೆಬ್‌ಸೈಟ್‌ನ ಎಡಭಾಗದಲ್ಲಿರುವ ಸರ್ಚ್ ಫಾರ್ ನೇಮ್ ಇನ್ ಇಲೆಕ್ಟೋರಲ್ ರೋಲ್‌ನಲ್ಲಿ ಪರಿಶೀಲಿಸಿ
ಮೂರನೇ ಹಂತ: ನಿಮ್ಮ ಹೆಸರು, ಹುಟ್ಟಿದ ದಿನಾಂಕ, ತಂದೆಯ ಅಥವಾ ಪತಿಯ ಹೆಸರು, ಲಿಂಗ (ಪುರುಷ ಅಥವಾ ಸ್ತ್ರೀ), ರಾಜ್ಯ, ಜಿಲ್ಲೆ, ಲೋಕಸಭಾ ಕ್ಷೇತ್ರಗಳನ್ನು ಟೈಪ್ ಮಾಡಿ.
ನಾಲ್ಕನೇ ಹಂತ: ಬಳಿಕ ಬರುವ ಕ್ಯಾಪc ಟೆಕ್ಟ್ ಅನ್ನು ಎಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ
ಮೊದಲ ಹಂತ: eci.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
ಎರಡನೇ ಹಂತ: ಸರ್ಚ್ ನೇಮ್ ಇನ್ ವೋಟರ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
ಮೂರನೇ ಹಂತ: ನಿಮ್ಮ ಹೆಸರು, ಹುಟ್ಟಿದ ದಿನಾಂಕ, ತಂದೆಯ ಅಥವಾ ಪತಿಯ ಹೆಸರು, ಲಿಂಗ (ಪುರುಷ ಅಥವಾ ಸ್ತ್ರೀ), ರಾಜ್ಯ, ಜಿಲ್ಲೆ, ಲೋಕಸಭಾ ಕ್ಷೇತ್ರಗಳನ್ನು ಟೈಪ್ ಮಾಡಿ.
ನಾಲ್ಕನೇ ಹಂತ: ಸರ್ಚ್ ಮೇಲೆ ಕ್ಲಿಕ್ ಮಾಡಿ
ವಿವಿಪ್ಯಾಟ್ ಹೇಗೆ ಕೆಲಸ ಮಾಡುತ್ತದೆ?
ವೋಟರ್ ವೆರಿಫಯಬಲ್ ಪೇಪರ್ ಅಡಿಟ್ ಟ್ರಯಲ್ ಇವಿಎಂಗೆ ಸೇರ್ಪಡೆಯಾಗಿಯೇ ಇರುತ್ತದೆ.
ನಿಗದಿತ ಅಭ್ಯರ್ಥಿಗೆ ಮತ ಹಾಕಿದ್ದೇನೆಯೇ ಎಂದು ಮತದಾರನಿಗೆ ನಂತರ ಪರಿಶೀಲಿಸಲು ಅವಕಾಶ ಇದೆ.
ಮತದಾರ ನಿಗದಿತ ಅಭ್ಯರ್ಥಿಗೆ ಮತ ಚಲಾಯಿಸಿದ ಬಳಿಕ ಅದರ ಮುದ್ರಿತ ಪ್ರತಿ ಹೊರ ಬರುತ್ತದೆ. ಅದರಲ್ಲಿ ಮತ ಚಲಾವಣೆಗೊಂಡ ಅಭ್ಯರ್ಥಿಯ ಹೆಸರು, ಪಕ್ಷ, ಸೀರಿಯಲ್ ನಂಬರ್ ಇರುತ್ತದೆ.
7 ಇಷ್ಟು ಸೆಕೆಂಡ್‌ಗಳ ಕಾಲ ಅದನ್ನು ನೋಡಲು ಸಾಧ್ಯ
ಮತದಾನ ಮಾಡುವ ಸ್ಥಳ (ಪೋಲಿಂಗ್ ಬೂತ್) ಹೇಗಿರುತ್ತದೆ?
(ಮತ ಯಂತ್ರಗಳು ಸಂಖ್ಯೆಯ ಆಧಾರದಲ್ಲಿ ಅವುಗಳನ್ನು ಇರಿಸುವ ವಿಭಾಗಗಳು ಬದಲಾಗುತ್ತವೆ)
3 ಮಿಮೀ ದಪ್ಪ ಇರುವ ಸ್ಟೀಲ್ ಗ್ರೇ ಫ್ಲೆಕ್ಸ್ ಬೋರ್ಡ್‌ನಿಂದ ತಡೆ ರಚಿಸಲಾಗುತ್ತದೆ.
24x24x30ಉದ್ದ ಅಗಲ ಎತ್ತರ
ಮತದಾನ ಮಾಡುವ ವಿಭಾಗ ಇರಬೇಕಾದ ಎತ್ತರ: 30”
ಕಂಟ್ರೋಲ್ ಯೂನಿಟ್‌ಗೆ ಸಂಪರ್ಕಿಸುವ ಕೇಬಲ್
2 ಮತ ಯಂತ್ರ ಇರುವ ವಿಭಾಗ36” ಅಗಲ
3 ಮತ ಯಂತ್ರ ಇರುವ ವಿಭಾಗ 48” ಅಗಲ
4 ಮತ ಯಂತ್ರ ಇರುವ ವಿಭಾಗ 60” ಅಗಲ
(ಒಂದು ಮತ ಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಲು ಅವಕಾಶವಿದೆ.
ಸಂಖ್ಯೆ ಹೆಚ್ಚಿದ್ದರೆ 2 ಮತಯಂತ್ರಗಳನ್ನು ಒಟ್ಟಿಗೆ ಇರಿಸಲಾಗುತ್ತದೆ)
(ಮಾಹಿತಿ ಕೃಪೆ: ಸಿಎನ್‌ಬಿಸಿಟಿವಿ 18)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.