ತಾರಾ ವರ್ಚಸ್ಸಿನ 7 ಕ್ಷೇತ್ರಗಳು
Team Udayavani, May 18, 2019, 10:53 AM IST
ಮಥುರಾ (ಉತ್ತರ ಪ್ರದೇಶ)
ಹೇಮಮಾಲಿನಿ (ಬಿಜೆಪಿ) Vs ಕುನ್ವರ್ ನರೇಂದ್ರ ಸಿಂಗ್ (ಆರ್‌ಎಲ್‌ಡಿ)
* ಜಾಟ್ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ ಕನ್ಯೆ ಗೆದ್ದಿದ್ದರು. ಮೋದಿ ಅಲೆಯೂ ಅವರಿಗೆ ಸಹಕಾರಿಯಾಗಿತ್ತು.
* ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಮತಗಳು
ಆರ್‌ಎಲ್‌ಡಿ ಅಭ್ಯರ್ಥಿಗೆ ಹೋಗಲಿದೆ ಎಂಬ ಅಳುಕು.
* ಐದು ವಿಧಾನಸಭಾ ಕ್ಷೇತ್ರಗಳ ಪೈಕಿ, 4ರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಕಣದಲ್ಲಿರುವುದು ಹೇಮಮಾಲಿನಿಗೆ ಅನುಕೂಲ.
ಮುಂಬೈ ಉತ್ತರ (ಮಹಾರಾಷ್ಟ್ರ)
ಗೋಪಾಲ್ ಶೆಟ್ಟಿ (ಬಿಜೆಪಿ) Vs ಊರ್ಮಿಳಾ ಮಾತೊಂಡ್ಕರ್ (ಕಾಂಗ್ರೆಸ್)
* 1989ರಿಂದಲೇ ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು 2004ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
* 2014ರಲ್ಲಿ ಮೋದಿ ಅಲೆಯಲ್ಲಿ ಕರ್ನಾಟಕ ಮೂಲದ ಗೋಪಾಲ್ ಶೆಟ್ಟಿ ಗೆದ್ದಿದ್ದಾರೆ.
* ಪ್ರಸಕ್ತ ಸಾಲಿನಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾತೊಂಡ್ಕರ್ ಸ್ಪರ್ಧಿಸಿರುವುದು ಕಣಕ್ಕೆ ರಂಗೇರಿಸಿದೆ. ಊರ್ಮಿಳಾ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.
ಗುರುದಾಸ್‌ಪುರ (ಪಂಜಾಬ್)
ಸನ್ನಿ ದೇವಲ್ (ಬಿಜೆಪಿ) Vs ಸುನಿಲ್ ಜಾಖಡ್ (ಕಾಂಗ್ರೆಸ್)
* ನಟ ಸನ್ನಿ ದೇವಲ್ ಸ್ಪರ್ಧೆಯಿಂದ ಈ ಕ್ಷೇತ್ರ ತಾರಾ ವರ್ಚಸ್ಸು ಪಡೆದಿದೆ. ಕಾಂಗ್ರೆಸ್ ನಾಯಕ ಸುನಿಲ್ ಜಾಖಡ್ ಕಣದಲ್ಲಿದ್ದಾರೆ.
* 1998ರಲ್ಲಿ ಬಿಜೆಪಿ ಸೇರಿದ್ದ ನಟ ವಿನೋದ್ ಖನ್ನಾ ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಜಯಕ್ಕೆ ಬ್ರೇಕ್ ಹಾಕಿದ್ದರು.
* 2017ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಾಖಡ್ ಗೆದ್ದಿದ್ದರು. ಸನ್ನಿ ದೇವಲ್ ಪರವಾಗಿ ಬಿಜೆಪಿ ಪ್ರಮುಖರು ಪ್ರಚಾರ ನಡೆಸಿದ್ದಾರೆ.
ಚಂಡೀಗಢ (ಪಂಜಾಬ್)
ಪಿ.ಕೆ.ಬನ್ಸಲ್ (ಕಾಂಗ್ರೆಸ್) Vs ಕಿರಣ್ ಖೇರ್ (ಬಿಜೆಪಿ)
* ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಸ್ಪರ್ಧೆಯ ನಿರೀಕ್ಷೆ.
* ಈ ಬಾರಿ ಆಪ್ ಹುರಿಯಾಳು ಬದಲಾಗಿ, ಹರ್ ಮೋಹನ್ ಧವನ್ ಕಣಕ್ಕೆ.
* ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಅಗ್ರೇಸರರಿಂದ ಕಿರಣ್ ಪರ ಪ್ರಚಾರ.
ಪೂರ್ವ ದೆಹಲಿ (ನವದೆಹಲಿ)
ಆತಿಶಿ ಮರ್ಲೆನಾ (ಆಪ್) Vs ಗೌತಮ್ ಗಂಭೀರ್ (ಬಿಜೆಪಿ)
* ಮಾಜಿ ಕ್ರಿಕೆಟಿಗ ಗಂಭೀರ್ ಕಣದಲ್ಲಿರುವುದು ಬಿಜೆಪಿಗೆ ತಾರಾ ವರ್ಚಸ್ಸು ತಂದಿದೆ. ಗಂಭೀರ್ ಪ್ರಬಲ ಸ್ಪರ್ಧೆ ಎದುರೊಡ್ಡುತ್ತಿದ್ದಾರೆ
* ಗಂಭೀರ್ ತಮ್ಮ ತೇಜೋವಧೆ ಮಾಡುವಂಥ ಕರಪತ್ರ ಹಂಚಿದ್ದಾರೆ ಎಂಬ ಆತಿಶಿಯವರ ಆರೋಪವು ವಿವಾದದ ರೂಪ ಪಡೆದಿತ್ತು
* 10 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಆಪ್ ಶಾಸಕರು ಇರುವುದು ಆತಿಶಿಗೆ ಧನಾತ್ಮಕ ಅಂಶ.
ದಕ್ಷಿಣ ದೆಹಲಿ (ನವದೆಹಲಿ)
ಶೀಲಾ ದೀಕ್ಷಿತ್ (ಕಾಂಗ್ರೆಸ್) Vs ಮನೋಜ್ ತಿವಾರಿ (ಬಿಜೆಪಿ)
* ಶೀಲಾ ದೀಕ್ಷಿತ್ ಸ್ಪರ್ಧಿಸಿರುವುದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್.
* ಹಾಲಿ ಸಂಸದ, ನಟ, ಭೋಜ್‌ಪುರಿ ಗಾಯಕ ಮನೋಜ್ ತಿವಾರಿ ಅವರಿಗಿದೆ ಬಹುದೊಡ್ಡ ಬೆಂಬಲಿಗ ಪಡೆ.
* ಪೂರ್ವಾಂಚಲಕ್ಕೆ (ಬಿಹಾರ ಮತ್ತು ಉತ್ತರಪ್ರದೇಶ) ಸೇರಿದ ಜನರೇ ಈ ಲೋಕಸಭಾ ವ್ಯಾಪ್ತಿಯಲ್ಲಿ ಹೆಚ್ಚು ಇದ್ದಾರೆ.
ಜೈಪುರ ಗ್ರಾ. (ರಾಜಸ್ಥಾನ)
ರಾಜ್ಯವರ್ಧನ್ ರಾಥೋಡ್ (ಬಿಜೆಪಿ) Vs ಕೃಷ್ಣ ಪೂನಿಯಾ (ಕಾಂಗ್ರೆಸ್)
* ಒಲಿಂಪಿಂಕ್ ಕ್ರೀಡಾ ಕೂಟದಲ್ಲಿ ಪದಕ ಗೆದ್ದ ಇಬ್ಬರು ಕ್ರಿಡಾಪಟುಗಳು ಈ ಬಾರಿ ಮುಖಾಮುಖೀಯಾಗಿದ್ದಾರೆ.
* ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಪೂನಿಯಾ ಅವರು ಜನಪ್ರಿಯ ಶಾಸಕಿಯಾಗಿಯೂ ಹೆಸರು ಮಾಡಿದವರು.
* ರಜಪೂತ (ರಾಥೋಡ್), ಪೂನಿಯಾ (ಜಾಟ್) ಸಮುದಾಯದ ನಡುವೆ ಹೋರಾಟದ ವಿಶ್ಲೇಷಣೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.