ಕಿರಣ್ ರಿಜಿಜುಗೆ ನಬಂ ಟುಕಿ ಕೊಡ್ತಾರೆ ಭಾರಿ ಸವಾಲು
Team Udayavani, Apr 2, 2019, 6:00 AM IST
ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ನಬಮ್ ಟುಕಿ ನಡುವೆ ನೇರ ಸ್ಪರ್ಧೆ ಇದೆ. ಜರುಮ್ ಇಟೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಈ ಕ್ಷೇತ್ರದ ಕುತೂಹಲದ ಅಂಶವೆಂದರೆ ಕರ್ನಾಟಕದಲ್ಲಿ ಮೈತ್ರಿಯಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಯಾಗಿದ್ದರೆ ಇಲ್ಲಿ ವಿರೋಧಿಗಳಾಗಿವೆ.
ಅರುಣಾಚಲದಲ್ಲಿ ಏ.11ರಂದು ಲೋಕಸಭೆ ಹಾಗೂ ವಿಧಾನಸಭೆಗೆ ಮತದಾನ ನಡೆಯಲಿದೆ. 2 ಬಾರಿ ಮುಖ್ಯಮಂತ್ರಿಯಾಗಿದ್ದ ನಬಮ್ ಟುಕಿ ಲೋಕಸಭೆ ಜೊತೆಗೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಮ್ಮದೇ ಆದ ವರ್ಚಸ್ಸು ಹೊಂದಿರುವ ಇವರು ಈ ಬಾರಿ ಕಿರಣ್ ರಿಜಿಜುಗೆ ಪ್ರಬಲ ಪೈಪೋಟ ನೀಡಲಿದ್ದಾರೆ. ಈ ಕ್ಷೇತ್ರದಲ್ಲಿ ಒಮ್ಮೆ ಸೋತು, 2 ಬಾರಿ ಸಂಸದರಾಗಿರುವ ಕಿರಣ್ ರಿಜಿಜು ವಿರುದ್ಧ ಈ ಬಾರಿ ಅಡಳಿತ ವಿರೋಧಿ ಅಲೆ ಕಂಡುಬರುತ್ತಿರುವುದು ಕಾಂಗ್ರೆಸ್ ಗೆಲುವಿಗೆ ಹವಣಿಸುತ್ತಿದೆ, ಇತ್ತ ಕಿರಣ್ ರಿಜಿಜು, ಈಶಾನ್ಯ ರಾಜ್ಯಗಳ ಅಭಿವೃದ್ಧಿ ವಿಷಯ ಹಾಗೂ ನರೇಂದ್ರ ಮೋದಿ ನಾಮಬಲದೊಂದಿಗೆ ಜಯದ ಕನಸು ಕಾಣುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯು ಇಲ್ಲಿನ ಜನರನ್ನು ಕೆರಳಿಸಿದೆ.
ರಿಜಿಜು ಪ್ಲಸ್ ಪಾಯಿಂಟ್: 33ನೇ ವಯಸ್ಸಿಗೆ ಸಂಸದರಾಗಿರುವ ಕಿರಣ್ ರಿಜಿಜು ಉತ್ತಮ ವಾಗ್ಮಿಯಾಗಿ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ಮೋದಿ ಆಪ್ತವಲಯದಲ್ಲಿ ಗುರುತಿಸಿ ಕೊಂಡಿದ್ದಾರೆ. ರೋಹಿಂಗ್ಯಾ ವಲಸಿಗರ ತಡೆ, ದೆಹಲಿಯ ಜೆಎನ್‌ಯು ವಿವಾದಿತ ಧೋರಣೆಗಳನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು. ಅರುಣಾಚಲ ಸೇರಿದಂತೆ ನೆರೆಯ ರಾಜ್ಯದಲ್ಲಿ ಅತ್ಯುತ್ತಮ ಒಡನಾಟ ಹೊಂದಿದ್ದಾರೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯರಂತೆ ಬೆರೆದು ಜನರಿಗೆ ಹತ್ತಿರವಾಗಿದ್ದಾರೆ.
ಕಣ್ ಕಣ
ಅರುಣಾಚಲ (ಪಶ್ಚಿಮ)
ಪ್ರಸಕ್ತ ಸಂಸದ:
ಕಿರಣ್ ರಿಜಿಜು (ಬಿಜೆಪಿ)
2014ರ ಫಲಿತಾಂಶ
ಕಿರಣ್ ರಿಜಿಜು (ಬಿಜೆಪಿ)
1,69,367
ಟಾಕಮ್ ಸಂಜೋಯ್(ಕಾಂಗ್ರೆಸ್): 1,27,629
ಗೆಲುವಿನ ಅಂತರ: 41,738
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.