ಬಿಜೆಪಿಗೆ 26 ಮಂದಿ ರಾಜೀನಾಮೆ
Team Udayavani, Mar 21, 2019, 12:55 AM IST
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ಅರುಣಾಚಲ ಪ್ರದೇಶ ದಲ್ಲಿ ಇಬ್ಬರು ಸಚಿವರು ಮತ್ತು ಆರು ಶಾಸಕರು ಟಿಕೆಟ್ ನೀಡಿಕೆಗೆ ಸಂಬಂಧಿಸಿದಂತೆ ಪಕ್ಷಕ್ಕೆ ರಾಜೀನಾಮೆ ನೀಡಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಆಫ್ ಮೇಘಾಲಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅವರೊಂದಿಗೆ 19 ಮಂದಿ ಇತರ ನಾಯಕರೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್‌ಪಿಸಿ ಮೇಘಾಲಯದಲ್ಲಿ ಆಡಳಿತ ಪಕ್ಷವಾಗಿದ್ದು, ಅರುಣಾ ಚಲ ಪ್ರದೇಶದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಅರುಣಾಚಲ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯಲಿದ್ದೇವೆ ಎಂದು ಎನ್‌ಪಿಪಿ ಪ್ರಧಾನ ಕಾರ್ಯದರ್ಶಿ ಥಾಮಸ್ ಸಂಗ್ಮಾ ತಿಳಿಸಿದ್ದಾರೆ.
9 ಶಾಸಕರು ಕಣದಲ್ಲಿ
ಕೇರಳದ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿಪಕ್ಷ ಯುಡಿಎಫ್ನ 9 ಶಾಸಕರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಎರಡು ರಂಗಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಪಡಿಸಿದ್ದು, ಅವರು ಈಗಾಗಲೇ ಪ್ರಚಾರದಲ್ಲಿ ನಿರತ ರಾಗಿದ್ದಾರೆ. ಎಲ್‌ಡಿಎಫ್ನ 6, ಯುಡಿ ಎಫ್ನ ಮೂವರು ಶಾಸಕರು ಕಣದಲ್ಲಿ ದ್ದಾರೆ. ಯುಡಿಎಫ್ನ ಅಡೂರ್ ಪ್ರಕಾಶ್ (ಅಟ್ಟಿಂಗಳ್), ಹಿಬಿ ಎಡೆನ್ (ಎರ್ನಾ ಕುಳಂ), ಎಲ್‌ಡಿಎಫ್ನ ಎ.ಪ್ರದೀಪ್ ಕುಮಾರ್ (ಕಲ್ಲಿಕೋಟೆ), ಎಂ.ಆರಿಫ್ (ಆಲಪ್ಪುಳ) ಪ್ರಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.