2ನೇ ಹಂತ ಚುನಾವಣೆ: ನಾಮಪತ್ರ ಸಲ್ಲಿಕೆ ;ಬಿ.ವೈ.ಆರ್‌ ಭರ್ಜರಿ ರೋಡ್‌ ಶೋ


Team Udayavani, Mar 29, 2019, 7:56 AM IST

190328kpn94

ಲೋಕಸಭಾ ಚುನಾವಣೆಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್‌, ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ, ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿ ಸುರೇಶ್‌ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದ ಪ್ರಮುಖರು.

ಬಿ.ವೈ. ರಾಘವೇಂದ್ರ ಭರ್ಜರಿ ರೋಡ್‌ ಶೋ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗುರುವಾರ ನಾಮಪತ್ರ ಸಲ್ಲಿಸಿದರು. ಅಪಾರ ಬೆಂಬಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಿ.ವೈ.ರಾಘವೇಂದ್ರ ಅವರಿಗೆ ಶಾಸಕ ಕೆ.ಎಸ್‌. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ರುದ್ರೇಗೌಡ, ಪತ್ನಿ ತೇಜಸ್ವಿನಿ, ಶಾಸಕ ಹಾಲಪ್ಪ ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಸುವ ಮುನ್ನ ರಾಘವೇಂದ್ರ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆದಿಚುಂಚನಗಿರಿ ಶಾಖಾ
ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಶಾಸಕ ಹಾಗೂ ಹಿರಿಯ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರ ಆಶೀರ್ವಾದ ಪಡೆದರು.

12 ಕೋಟಿ ರೂ. ಹೆಚ್ಚಳ
ಬಿ.ವೈ. ರಾಘವೇಂದ್ರ ಅವರ ಕುಟುಂಬದ ಚರಮತ್ತು ಸ್ಥಿರಾಸ್ತಿಯ ಮೌಲ್ಯವು ಕೇವಲ ಐದು ತಿಂಗಳಲ್ಲಿ 12 ಕೋಟಿ ರೂ. ಏರಿಕೆಯಾಗಿದೆ. 2014ರ ವಿಧಾನಸಭೆ ಉಪ ಚುನಾವಣೆಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯು 3 ಪಟ್ಟು ಹೆಚ್ಚಳವಾಗಿದೆ.
2014ರಲ್ಲಿ 18.34 ಕೋಟಿ ರೂ. ಚರ ಮತ್ತು 15.22 ಕೋಟಿ ರೂ. ಸ್ಥಿರಾಸ್ತಿ, ಅಕ್ಟೋಬರ್‌ನಲ್ಲಿ ನಡೆದ ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲಿ 32.09
ಕೋಟಿ ರೂ. ಚರ ಮತ್ತು 30.91ಕೋಟಿ ರೂ.ಸ್ಥಿರಾಸ್ತಿಗೆ ಏರಿಕೆಯಾಗಿತ್ತು. ಅಲ್ಲಿಂದ ಈಚೆಗೆ ಐದೇ ತಿಂಗಳಲ್ಲಿ 32 ಕೋಟಿ ರೂ. ಚರ ಮತ್ತು 43 ಕೋಟಿ ರೂ. ಸ್ಥಿರಾಸ್ತಿಗೆ ಏರಿಕೆಯಾಗಿದೆ.

ಸಂಸದ ಸುರೇಶ ಅಂಗಡಿ 14 ಕೋಟಿ ಆಸ್ತಿ ಒಡೆಯ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4ನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯ ಸುರೇಶ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದರು. ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸುರೇಶ ಅಂಗಡಿ, ಚುನಾವಣಾ ಆಯೋ ಗಕ್ಕೆ ತಮ್ಮ ಕುಟುಂಬದ
ಆಸ್ತಿ ವಿವರ ಸಹ ಸಲ್ಲಿಸಿದರು.

ಆ ಪ್ರಕಾರ ಐದು ವರ್ಷಗಲ್ಲಿ ಅವರ ಆಸ್ತಿ ಮೌಲ್ಯ ಸುಮಾರು 2 ಕೋಟಿ ಹೆಚ್ಚಾಗಿದೆ.
ಸುರೇಶ ಅಂಗಡಿ ತಮ್ಮ ಹೆಸರಿನಲ್ಲಿ 14.37 ಕೋಟಿ ಆಸ್ತಿ ಘೋಷಿಸಿದ್ದಾರೆ. ತಮ್ಮ ಹೆಸರಿನಲ್ಲಿ 56.91 ಲಕ್ಷ ನಗದು, ಪತ್ನಿ ಮಂಗಳಾ 69.23 ಲಕ್ಷ ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ ಗಳಲ್ಲಿ 17.32 ಲಕ್ಷ ನಗದು, ವಿವಿಧೆಡೆ ಹೂಡಿಕೆ, ಚಿನ್ನಾಭರಣ, ವಾಹನಗಳು ಸೇರಿ 2.12 ಕೋಟಿ ಚರಾಸ್ತಿ ಮತ್ತು 12.24 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

7.69 ಕೋಟಿ ರೂ. ಸಾಲವಿದೆ. ಸಂಸದರು, ಕೋಟ್ಯಧಿಪತಿಯಾದರೂ ಅವರ ಬಳಿ ಸ್ವಂತ ಕಾರಿಲ್ಲ. 4 ಸ್ಕೂಟರ್‌, ಒಂದು ಬೈಸಿಕಲ್‌ ಮಾತ್ರ ಅವರ ಹೆಸರ ಲ್ಲಿದೆ.
300 ಗ್ರಾಂ. ಚಿನ್ನಾಭರಣವಿದೆ. ಪತ್ನಿ ಹೆಸರಲ್ಲಿ 2 ಕಾರು ಸೇರಿ 36 ಸ್ಕೂಟರ್‌ ಹಾಗೂ ಇತರ ವಾಹನಗಳಿವೆ. ಅವರು 1,300 ಗ್ರಾಂ. ಚಿನ್ನಾಭರಣ ಹೊಂದಿದ್ದಾರೆ.

ವೀಣಾ ಕಾಶಪ್ಪನವರ ಉಮೇದುವಾರಿಕೆ

ಬಾಗಲಕೋಟೆ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ
ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ ಗುರುವಾರ ಜಿಲ್ಲಾ
ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದರು. ಮಾಜಿ ಸಚಿವ ಎಚ್‌.
ವೈ. ಮೇಟಿ, ನರಗುಂದ ಮಾಜಿ ಶಾಸಕ ಬಿ.ಆರ್‌. ಯಾವಗಲ್‌, ಕೆಪಿಸಿಸಿ
ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಎಂ.ಎಲ್‌. ಶಾಂತಗೇರಿ,ಹೈಕೋರ್ಟ್‌ ವಕೀಲ ಗಂಗಾಧರಪ್ಪ ಸೇರಿದಂತೆ ಕುಟುಂಬ ಸದಸ್ಯರು ಸಾಥ್‌ ನೀಡಿದರು.
ಏ.1ಕ್ಕೆ ಮತ್ತೆ ನಾಮಪತ್ರ: ಗುರುವಾರ

ಶುಭ ದಿನವಾದ್ದರಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.1ರಂದು
ಮತ್ತೂಂದು ನಾಮಪತ್ರ ಸಲ್ಲಿಸಲಾಗುವುದು ಎಂದು ವೀಣಾ ಕಾಶಪ್ಪನವರ ತಿಳಿಸಿದರು.

4 ಕೋಟಿ ಆಸ್ತಿಯ ಒಡತಿ
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ 4 ಕೋಟಿ ಆಸ್ತಿಯ ಒಡತಿ. 66,55,753
ರೂ. ಚರಾಸ್ತಿ, 3,35,80,000 ರೂ. ಸ್ಥಿರಾಸ್ತಿ ಹೊಂದಿದ್ದು, 200 ಗ್ರಾಂ. ಚಿನ್ನದ ಒಡವೆ
ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 1,62,72,759 ರೂ. ಸಾಲ ಹೊಂದಿದ್ದು, ಒಟ್ಟು
4,02,35,753 ಆಸ್ತಿಯ ಒಡತಿಯಾಗಿದ್ದಾರೆ. 1,62,72,759 ರೂ. ಸಾಲ: ಬೆಂಗಳೂರಿನ ಎಸ್‌ಬಿಐ ಬ್ಯಾಂಕ್‌ (ಮೈಸೂರು ಬ್ಯಾಂಕ್‌ ವೃತ್ತ)ನಲ್ಲಿ 1,23,11,206 ರೂ. ಹೌಸಿಂಗ್‌ ಲೋನ್‌, ಹುನಗುಂದದ ಶಂಕರ ಬ್ಯಾಂಕ್‌ ನಲ್ಲಿ 2.50 ಲಕ್ಷ ವಾಹನ ಸಾಲಸೇರಿ ಒಟ್ಟು 1,62,72,759 ರೂ. ಸಾಲ ಹೊಂದಿದ್ದಾರೆ.

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.