ಎಂಪಿಗಳ ಆಯ್ಕೆಗೆ 5 ಸಾವಿರ ಕೋಟಿ 


Team Udayavani, Mar 18, 2019, 1:45 AM IST

1-bgg.jpg

ಬೆಂಗಳೂರು: ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತದ ಲೋಕಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆಸಲಾಗುವ ಸಾರ್ವತ್ರಿಕ ಚುನಾವಣೆಗೆ ಸರ್ಕಾರದ ಖಜಾನೆಯಿಂದ ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡಲಾಗುತ್ತದೆ.

ಮೊದಲ ಲೋಕಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕೇವಲ ಕೋಟಿಯಲ್ಲಿದ್ದ ಚುನಾವಣಾ ವೆಚ್ಚ, ಈಗ ಸಾವಿರಾರು
ಕೋಟಿ ರೂ.ಆಗಿದೆ. ಮೊದಲ ಚುನಾವಣೆಯಲ್ಲಿ ಪ್ರತಿ ಮತದಾರನ ಮೇಲೆ 60 ಪೈಸೆ ವೆಚ್ಚ ಮಾಡಲಾಗಿದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತದಾರನ ಮೇಲೆ ಮಾಡಲಾದ ವೆಚ್ಚ 46.40 ಪೈಸೆ ಆಗಿತ್ತು. ಸ್ವಾತಂತ್ರಾéನಂತರ 1952ರಲ್ಲಿ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಗ ಸಂಸದರ ಸಂಖ್ಯೆ 401 ಇತ್ತು. ಅಂದು 17.32 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಚುನಾವಣೆಗೆ ಸರ್ಕಾರದಿಂದ
10.45 ಕೋಟಿ ರೂ.ಖರ್ಚು ಮಾಡಲಾಗಿತ್ತು. ಅದರಲ್ಲಿ ಪ್ರತಿ ಮತದಾರನ ಮೇಲೆ ಅಂದಾಜು 60 ಪೈಸೆ ವೆಚ್ಚ ಮಾಡಲಾಗಿತ್ತು.

ಅಂತೆಯೆ, 2014ರ ಲೋಕಸಭಾ ಚುನಾವಣೆಗೆ ಬರೋಬ್ಬರಿ 3,480 ಕೋಟಿ ರೂ.ವೆಚ್ಚ ಆಗಿತ್ತು. ಅದರಂತೆ ಪ್ರತಿ ಮತದಾರನ ಮೇಲಿನ ಅಂದಾಜು ವೆಚ್ಚ 46.40 ಪೈಸೆ ಆಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯ ವೆಚ್ಚ ದುಪ್ಪಟ್ಟಾಗಲಿದ್ದು, 5 ಸಾವಿರ ಕೋಟಿ ರೂ.ದಾಟುವ ನಿರೀಕ್ಷೆ ಇದೆ. ಕಳೆದ ಲೋಕಸಭಾ ಚುನಾವಣೆ ದೇಶದ ಅತ್ಯಂತ ದುಬಾರಿ ಚುನಾವಣೆ ಎನಿಸಿಕೊಂಡಿತ್ತು. 2009ರಲ್ಲಿ ಒಟ್ಟು ಚುನಾವಣಾ ವೆಚ್ಚ 1,483 ಕೋಟಿ ರೂ.ಆಗಿದ್ದು, ಅದು 2014ರ ಚುನಾವಣೆಯಲ್ಲಿ ಎರಡು ಪಟ್ಟು (3,480 ಕೋಟಿ) ಹೆಚ್ಚಾಯಿತು. ಅದೇ ರೀತಿ, 2009ರ ಚುನಾವಣೆಯಲ್ಲಿ ಪ್ರತಿ ಮತದಾರನ ಮೇಲಿನ ವೆಚ್ಚ 12 ರೂ.ಆಗಿದ್ದರೆ, 2014ರಲ್ಲಿ 46 ರೂ.ಅಂದರೆ, ಮೂರು ಪಟ್ಟುಹೆಚ್ಚಾಗಿತ್ತು.

ವೆಚ್ಚದಲ್ಲಿ ಸತತ ಏರಿಕೆ: 1952ರಿಂದ 1997ರವರೆಗೆ ನಡೆದ 6ಲೋಕಸ ಭಾ ಚುನಾವಣೆಗಳಲ್ಲಿ ಪ್ರತಿ ಮತದಾರನ ಮೇಲಿನ ವೆಚ್ಚ ಪೈಸೆಗಳಲ್ಲಿತ್ತು. ಈ ಚುನಾವಣೆಗಳಲ್ಲಿನ ಒಟ್ಟು ವೆಚ್ಚ 5 ಕೋಟಿಯಿಂದ 23 ಕೋಟಿ ರೂ.ವರೆಗೆ ಇತ್ತು. 1980ರ ಲೋಕಸಭಾ ಚುನಾವಣೆ ಯಲ್ಲಿ ಪ್ರತಿ ಮತದಾರನ ಮೇಲಿನ ವೆಚ್ಚ ಮೊದಲ ಬಾರಿಗೆ ರೂಪಾಯಿಗೆ ತಲುಪಿತ್ತು. ಆಗ 1.54 ಪೈಸೆ ವೆಚ್ಚ ಆಗಿತ್ತು. ಅದೇ ರೀತಿ, 1989ರಲ್ಲಿ ನಡೆದ 9ನೇ ಲೋಕಸಭಾ ಚುನಾವಣೆಗೆ ಒಟ್ಟು
ವೆಚ್ಚ 100 ಕೋಟಿ ರೂ.ದಾಟಿತ್ತು. 2004ರಲ್ಲಿ ನಡೆದ 12ನೇ ಲೋಕ ಸಭಾ ಚುನಾವಣೆಯಲ್ಲಿ ಒಟ್ಟು ಚುನಾವಣಾ ವೆಚ್ಚ ಸಾವಿರ ರೂ.ಗಳ ಗಟಿ ದಾಟಿತ್ತು. ಆಗ 1,113 ಕೋಟಿ ರೂ.ವೆಚ್ಚ ಮಾಡಲಾಗಿತ್ತು.

ವೆಚ್ಚ ಏನೆಲ್ಲ ಒಳಗೊಂಡಿರುತ್ತದೆ
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸ್ಥಾಪನೆ,
ಮತಗಟ್ಟೆಗಳಿಗೆ ಬೇಕಾಗುವ ವ್ಯವಸ್ಥೆಗಳ ಪೂರೈಕೆ, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಚುನಾವಣಾ ಸಿಬ್ಬಂದಿಗೆ ವೇತನ-ಭತ್ಯೆ, ಚುನಾವಣಾ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ, ಚುನಾವಣಾ ಸಾಮಗ್ರಿ ಸಾಗಾಣಿಕೆ, ಚುನಾವಣಾ ಸಿಬ್ಬಂದಿಗೆ ತರಬೇತಿ, ಇನ್ನಿತರ ಖರ್ಚುಗಳು ಒಟ್ಟಾರೆ ಚುನಾವಣಾ ವೆಚ್ಚದಲ್ಲಿ ಸೇರುತ್ತವೆ. ಲೋಕಸಭಾ ಚುನಾವಣೆಗೆ ಕಾನೂನು-ಸುವ್ಯವಸ್ಥೆಯ ವೆಚ್ಚ ಹೊರತುಪಡಿಸಿ ಉಳಿದೆಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರ ಭರಿಸುತ್ತದೆ. ಕಾನೂನು-ಸುವ್ಯವಸ್ಥೆಗೆ ಬೇಕಾಗುವ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸುತ್ತವೆ.

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

4(2

Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್‌

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.