ಮುಖ್ಯಮಂತ್ರಿ ಫಡ್ನವೀಸ್ ಅವರಿಂದ 70 ರ‍್ಯಾಲಿಗಳು ಯಶಸ್ವಿ
Team Udayavani, Apr 25, 2019, 11:29 AM IST
ಮುಂಬಯಿ: ಉತ್ತರ ಪ್ರದೇಶದ ಬಳಿಕ ಅತೀ ಹೆಚ್ಚು ಲೋಕಸಭಾ ಸೀಟುಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಬಿಜೆಪಿ ಹಗಲಿರುಳು ಶ್ರಮಿಸುತ್ತಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಅಧಿಕ ಸೀಟುಗಳನ್ನು ಗೆಲ್ಲಲು ಮಹಾರಾಷ್ಟ್ರ ಬಿಜೆಪಿ ವರಿಷ್ಠರಿಗೆ ಸೂಚಿಸಿದ್ದು, ಇಲ್ಲಿಯವರೆಗೆ ಫಡ್ನವೀಸ್ ಅವರು 31 ಸೀಟುಗಳ ಚುನಾವಣ ಪ್ರಚಾರಕ್ಕಾಗಿ 70 ರ್ಯಾಲಿಗಳನ್ನು ನಡೆಸಿ ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯ ಬಿಜೆಪಿ-ಶಿವಸೇನೆ ಸರಕಾರದ ಜನಪರ ಯೋಜನೆಗಳನ್ನು ಜನತೆಯ ಮನ-ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎ. 29 ರಂದು 17 ಸೀಟುಗಳಿಗಾಗಿ 4ನೇ ಹಂತದ ಚುನಾವಣೆ ನಡೆಯಲಿದ್ದು, ಎ. 27ರಂದು ಚುನಾವಣ ಪ್ರಚಾರಕ್ಕೆ ತೆರೆ ಬೀಳಲಿದೆ. ಅಲ್ಲಿಯವರೆಗೆ ಫಡ್ನವೀಸ್ ಅವರು 100ಕ್ಕೂ ಅಧಿಕ ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್-ಎನ್‌ಸಿಪಿ ಮಹಾ ಘಟಬಂಧನ್ ಮಧ್ಯೆ ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷಗಳು 48 ಸೀಟುಗಳಿಗೆ ಸ್ಪರ್ಧಿಸುತ್ತಿವೆ. ಇಲ್ಲಿಯವರೆಗೆ 31 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‌ಸಿಪಿಯ ಪ್ರಬಲ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಇದು ಬಿಜೆಪಿಗೆ ಮತ್ತಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ. ಇದಕ್ಕೆ ವಿರುದ್ಧವಾಗಿ ಫಡ್ನವೀಸ್ ರಾಜ್ಯದ ಪ್ರಮುಖ ಸ್ಥಳಗಳಲ್ಲಿ 70 ಪ್ರಚಾರ ರ್ಯಾಲಿಗಳನ್ನು ನಡೆಸಿದ್ದಾರೆ. ವಿಶೇಷವೆಂದರೆ ಗುಜರಾತ್ ಮತ್ತು ಗೋವಾದಲ್ಲೂ ಫಡ್ನವೀಸ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಪ್ರಚಾರದ ಭರಾಟೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಅವರ ಪ್ರತಿಯೊಂದು ಟೀಕೆಗಳಿಗೆ ಫಡ್ನವಿಸ್ ಸಮರ್ಪಕವಾದ ಉತ್ತರ ನೀಡಿ ಜನಾಕರ್ಷಣೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ರ‍್ಯಾಲಿ-ರಾತ್ರಿ ಸಭೆ
ಫಡ್ನವೀಸ್ ದಿನಂಪ್ರತಿ ಬೆಳಗ್ಗೆಯಿಂದ ಸಂಜೆಯವರೆಗೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಂಡರೆ, ರಾತ್ರಿಯ ಹೊತ್ತು ತಮ್ಮ ವರ್ಷಾ ಬಂಗ್ಲೆಯಲ್ಲಿ ಪಕ್ಷದ ನೇತಾರರೊಂದಿಗೆ ಸಭೆಯಲ್ಲಿ ಬ್ಯುಸಿಯಾಗಿ ದ್ದಾರೆ. ಮುಖ್ಯಮಂತ್ರಿಗಳ ಚುನಾವಣ ಜವಾಬ್ದಾರಿ ಎಷ್ಟಿದೆ ಎಂದರೆ ದಿನದಲ್ಲಿ 3-4 ಚುನಾವಣ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ರಾತ್ರಿ 2 ಗಂಟೆಯವರೆಗೂ ಪಕ್ಷದ ನೇತಾರರೊಂದಿಗೆ ಮಹತ್ವದ ಸಭೆ ಯನ್ನು ನಡೆಸಿ ಚರ್ಚೆಯನ್ನು ಮಾಡಲಾಗುತ್ತಿದೆ. ಬೆಳಗ್ಗೆ ಮತ್ತೆ ಅದೇ ರಾಗ ಎಂಬಂತೆ ರ್ಯಾಲಿಯಲ್ಲಿ ಮುಖ್ಯಮಂತ್ರಿಗಳು ನಿರತರಾಗಿ ಪಕ್ಷದ ಗೆಳುವಿಗಾಗಿ ಶ್ರಮಿಸುತ್ತಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಫಡ್ನವೀಸ್
ಬಿಜೆಪಿಯು ಹೊರಡಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಮೊದಲಿಗಿರುವುದು ವಿಶೇಷವಾಯಾಗಿದೆ. ರಾಜ್ಯದ ಗಡಿcರೋಳಿಯಿಂದ ಹಿಡಿದು ವಾರ್ಧಾ, ನಾಗ್ಪುರ, ಭಂಡಾರ, ಗೋಂಡಿಯಾ, ಬುಲಾzಣ, ಅಮರಾವತಿ, ನಾಂದೇಡ್, ಉಸ್ಮನಾಬಾದ್, ಸಾಂಗ್ಲಿ, ಸತಾರ, ಲಾತೂರ್, ಮಾಡಾ, ಕೊಲ್ಲಾಪುರ ಸೇರಿದಂತೆ ಪ್ರಥಮ, ದ್ವಿತೀಯ, ತೃತೀಯ ಹಂತದಲ್ಲಿ ನಡೆಯಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಫಡ್ನವೀಸ್ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಭಾಗವಹಿಸಿದ ಎಲ್ಲ ರ್ಯಾಲಿಗಳಲ್ಲಿ ಪ್ರಮುಖರಾಗಿದ್ದರು. ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ಹಿಡಿದು ಎಲ್ಲ ಆಯಾಯ ಕ್ಷೇತ್ರಗಳ ಚುನಾವಣ ಪ್ರಚಾರಕ್ಕೆ ಸಂಬಂಧಿಸಿ ಫಡ್ನವೀಸ್ ಅವರ ನೇತೃತ್ವದಲ್ಲೇ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷ ಎನ್ನಬಹುದು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯದಲ್ಲೇ ಬಿಜೆಪಿಯ ಅತ್ಯಂತ ಪ್ರಸಿದ್ಧಿಯ ನೇತಾರರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಜಯ ಗಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ರ್ಯಾಲಿಗಳನ್ನು ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳ ಎಲ್ಲಾ ರ್ಯಾಲಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು, ಇದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬುಂದಕ್ಕೆ ನಿದರ್ಶನವಾಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷಗಳು ಪಡೆಯುವುದರಲ್ಲಿ ಸಂಶಯವಿಲ್ಲ.
– ಕೇಶವ ಉಪಾಧ್ಯೆ,ಬಿಜೆಪಿ ಪ್ರದೇಶ ಪ್ರವರ್ತಕ
ಫಡವೀಸ್ ಅವರ ಭ್ರಷ್ಟಾಚಾರ ಮುಕ್ತ ಸರಕಾರ ಮತ್ತು ವಿಕಾಸ ಕಾರ್ಯಗಳಿಂದ ಜನರು ಪ್ರೇರಿತರಾಗಿ ಅವರ ಭಾಷಣವನ್ನು ಕೇಳಲು ಮುಗಿಬೀಳುತ್ತಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್-ಎನ್‌ಸಿಪಿಯ ಯಾವುದೇ ನಾಯಕರು ಚುನಾವಣೆಗಾಗಿ ಇಷ್ಟೊಂದು ಪ್ರಚಾರದಲ್ಲಿ ತೊಡಗಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ. ಇದರಿಂದ ಬಿಜೆಪಿಗೆ ಬಹಳಷ್ಟು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಫಲಿತಾಂಶ ಮುಂದಿನ ದಿನಗಳಲ್ಲಿ ತಿಳಿಯಲಿದೆ.
– ಮೋಹಿತ್ ಭಾರತೀಯ,ಅಧ್ಯಕ್ಷರು, ಮುಂಬಯಿ ಬಿಜೆಪಿ ಉತ್ತರ ಭಾರತೀಯ ಮೋರ್ಚಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.