ಮತದಾನದಿಂದ ವಿಮುಖರಾಗುವರೇ 91 ಪ್ರತಿಶತ ನಗರ ವಲಸಿಗರು?
Team Udayavani, Mar 11, 2019, 12:30 AM IST
ಮತದಾನದ ಮಹತ್ವದ ಬಗ್ಗೆ ಸರ್ಕಾರಗಳು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ನೋಂದಣಿ ಪ್ರಕ್ರಿಯೆಯಗಳನ್ನು ಜನಸ್ನೇಹಿಯಾಗಿಸಲು ಪ್ರಯತ್ನಿಸಿದರೂ, ಈ ನಿಟ್ಟಿನಲ್ಲಿ ಅಂದುಕೊಂಡಷ್ಟು ಯಶಸ್ಸು ಸಿಗುತ್ತಿಲ್ಲ ಎನ್ನುವು ದಕ್ಕೆ ಇತ್ತೀಚಿನ ಅಧ್ಯಯನ ವರದಿಯೊಂದು ಬೆಳಕು ಚೆಲ್ಲುತ್ತಿದೆ. 20-25 ವಯೋಮಾನದ ನಗರ ವಲಸಿಗರಲ್ಲಿ 91 ಪ್ರತಿಶತ ವಲಸಿಗರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿಲ್ಲ ಎನ್ನುತ್ತದೆ ನೆಸ್ಟ್‌ಅವೇ ಟೆಕ್ನಾಲ ಜೀಸ್ ಸಂಸ್ಥೆಯ ಇತ್ತೀಚಿನ ವರದಿ. ಈ ಸಂಸ್ಥೆಯು Urban Migrants: the silent spectators of Indian elections?’ ಎಂಬ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, 20ರಿಂದ 25 ವಯೋಮಾನದ, ಬೆಂಗಳೂರು-ಮುಂಬೈ-ಹೈದ್ರಾಬಾದ್- ಪುಣೆ-ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಸಿ ಸುವ ನಗರ ವಲಸಿಗರನ್ನು ಆಧರಿಸಿ ಈ ಅಂಕಿಸಂಖ್ಯೆಗಳನ್ನು ಮುಂದಿಟ್ಟಿದೆ.
ಇವರಲ್ಲಿ ಬಹುತೇಕರ ವೋಟರ್ ರೆಜಿಸ್ಟ್ರೇಷನ್ ಈಗಲೂ ಸ್ವಂತ ಊರುಗಳಲ್ಲೇ ಇದ್ದು, ಒಂದು ವೇಳೆ ಮತದಾನ ಮಾಡಲು ಅವರು ತಮ್ಮ ಊರಿಗೆ ತೆರಳದಿದ್ದರೆ, ಅವರೆಲ್ಲರ ಮತಗಳು ವ್ಯರ್ಥವಾಗಲಿವೆ ಎನ್ನುತ್ತದೆ ಈ ವರದಿ. “ಹಲವು ವಲಸಿಗರು ವೋಟರ್ ರೆಜಿಸ್ಟ್ರೇಷನ್‌ನಲ್ಲಿ ತಮ್ಮ ಹೊಸ ವಿಳಾಸವನ್ನು ಬದಲಿಸುತ್ತಾರೆ, ಆದರೆ ಒಂದು ರಾಜ್ಯದಿಂದ ಇನ್ನೊಂದಕ್ಕೆ ವಲಸೆ ಹೋದವರಿಗೆ ಈ ಪ್ರಕ್ರಿಯೆ ಅತ್ಯಂತ ತಲೆನೋವಿನದ್ದಾಗಿದೆ.ಅದರಲ್ಲೂ ಅವರಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೆ ಕಷ್ಟವಾಗುತ್ತದೆ’ ಎನ್ನುತ್ತಾರೆ ನೆಸ್ಟವೇ ಟೆಕ್ನಾಲಜೀಸ್‌ನ ಸಿಇಒ ಅಮರೇಂದ್ರ ಸಾಹು.
ಅಚ್ಚರಿದಾಯಕ ಸಂಗತಿಯೆಂದರೆ, ಈ ಅಧ್ಯಯನದಲ್ಲಿ ಪಾಲ್ಗೊಂಡ 1100ಕ್ಕೂ ಹೆಚ್ಚು ಜನರಲ್ಲಿ 63 ಪ್ರತಿಶತ ಮಂದಿ, “ತಾವು ಬೇರೆ ಊರಿಗೆ ವಲಸೆ ಹೋದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತೇವೆ’ ಎಂದು ಭಾವಿಸಿದರೆ, 41 ಪ್ರತಿಶತ ಮಂದಿ, “ತಮ್ಮ ಬಳಿ ವೋಟರ್ ಐಡಿ ಇರುವುದರಿಂದ, ತಾವು ಎಲ್ಲಿಬೇಕಾದರೂ ಮತದಾನ ಮಾಡಬಹುದು’ ಎಂಬ ತಪ್ಪು ಕಲ್ಪನೆಯಲ್ಲಿ ಇದ್ದಾರೆ. 73 ಪ್ರತಿಶತ ನಗರ ವಲಸಿಗರಿಗೆ ಹೊಸ ಊರಲ್ಲಿ ಹೇಗೆ ಮತದಾರರಾಗಿ ನೋಂದಣಿ ಮಾಡಿಸಿ ಕೊ ಳ್ಳುವುದು ಎನ್ನುವುದು ತಿಳಿದಿಲ್ಲವಂತೆ. ಸರ್ಕಾರ ಮತದಾನದ ಕುರಿತು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳುತ್ತಿ ದ್ದರೂ, ಈ ವಿಷಯದಲ್ಲಿ ಅಗತ್ಯ ಅರಿವು ಮೂಡಿಲ್ಲ, ಬದಲಾ ವಣೆಗಳು ಆಗಿಲ್ಲ ಎನ್ನುವುದನ್ನು ಈ ಅಂಶ ಎತ್ತಿಹಿಡಿಯುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಮತದಾನದ ಕುರಿತ ಈ ರೀತಿಯ ಗೊಂದಲ 20-30 ವಯೋಮಾನದವರಲ್ಲೇ ಅಧಿಕವಿದೆ ಎನ್ನುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.