ಸ್ಪರ್ಧಿಸುವುದೂ ಒಂದು ಕ್ರೇಜ್‌

ಈ ಬಾರಿ ಬೆಳಗಾವಿ, ವಾರಾಣಸಿಯಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳು

Team Udayavani, Mar 30, 2019, 6:00 AM IST

z-10

ಚುನಾವಣೆಯಲ್ಲಿ ಸ್ಪರ್ಧಿಸುವುದು ಎಲ್ಲರಿಗೂ ಪ್ರತಿಷ್ಠೆಯ ವಿಚಾರವೇ. ಈ ಬಾರಿಯ ಚುನಾವಣೆಯಲ್ಲಿ ಇದು ಹೆಚ್ಚಾಗಿ ಕಾಣಿಸು ತ್ತಿದೆ. ಪ್ರಧಾನಿ ಮೋದಿ ವಿರುದ್ಧ ವಾರಾಣಸಿ ಯಲ್ಲಿ ತಮಿಳುನಾಡಿನ 110 ರೈತರು, ಆಂಧ್ರದ ನಿಜಾ ಮಾ ಬಾದ್‌ನಲ್ಲಿ 200 ರೈತರು ಸ್ಪರ್ಧೆಗೆ ಮುಂದಾ ಗಿದ್ದಾರೆ. ಹಾಗಿದ್ದರೆ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಅಷ್ಟೊಂದು ಸುಲಭದ ವಿಚಾರವೇ? 1996ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಸುಮಾರು 14 ಸಾವಿರ ಮಂದಿ ಸ್ಪರ್ಧಿಸಿದ್ದರು. ಅದೇ ವರ್ಷ ಅಮೆರಿಕದಲ್ಲಿ ನಡೆದಿದ್ದ ಸಮ್ಮರ್‌ ಒಲಿಂಪಿಕ್ಸ್‌ನಲ್ಲಿ 10,380 ಮಂದಿ ಭಾಗವಹಿಸಿದ್ದರು!

ನಮ್ಮ ಬೆಳಗಾವಿಯಲ್ಲಿ ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) 100ಕ್ಕೂ ಹೆಚ್ಚು ಸದಸ್ಯರು ಸ್ಪರ್ಧಿಸಲು ಮುಂದಾಗಿದ್ದಾರೆ. ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಿಚಾರ ಮುಂದಿಟ್ಟುಕೊಂಡು ಎಂಇಎಸ್‌ ತಗಾದೆ ತೆಗೆಯುತ್ತದೆ, ಅದನ್ನೇ ಪ್ರಚಾರ ವಿಷಯವಾಗಿಸಿಕೊಳ್ಳುತ್ತದೆ. 1996ರಲ್ಲಿ 452 ಮಂದಿಯನ್ನು ಅದು ಕಣಕ್ಕೆ ಇಳಿಸಿತ್ತು. ಆ ಸಂದರ್ಭದಲ್ಲಿ ಸ್ಪರ್ಧಿಗಳೆಲ್ಲರ ಠೇವಣಿ ಜಪ್ತಿ ಆಗಿತ್ತು. ಗಡಿಭಾಗದಲ್ಲಿರುವ ಮರಾಠಿ ಮತಭಾಷಿಕರ ಮತ ವಿಭಜನೆಯಾಗುವಂತೆ ಮಾಡುವುದೇ ಸಂಘಟನೆಯ ಉದ್ದೇಶ. ಅಭ್ಯರ್ಥಿಯಾಗಲು ಬಯಸುವ ವ್ಯಕ್ತಿ 25 ಸಾವಿರ ರೂ. ಠೇವಣಿ ಇರಿಸಬೇಕು. 100 ಮಂದಿಗೆ ತಗಲುವ ಠೇವಣಿ ವೆಚ್ಚ 25 ಲಕ್ಷ ರೂ.ಮೊತ್ತ. ಈ ಮೊತ್ತವನ್ನದು ಮಹಾರಾಷ್ಟ್ರದಿಂದ ಸಂಗ್ರಹಿಸಲು ಮುಂದಾಗಿದೆ.

ಚುನಾವಣೆಯಲ್ಲಿ ನಿಲ್ಲಬಾರದು ಎಂದು ಆಕ್ಷೇಪ ಮಾಡಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವ ದಯಪಾಲಿಸಿರುವ ಹಕ್ಕು ಇದು. ಈ ಬಗ್ಗೆ ತೀರ್ಮಾನ ಮಾಡಬೇಕಾದದ್ದು ಚುನಾವಣಾ ಆಯೋಗ. 1951-52ನೇ ಸಾಲಿನಿಂದ ಇದುವರೆಗೆ 64, 157 ಮಂದಿ ಅಭ್ಯರ್ಥಿಗಳ ಠೇವಣಿ ಆಯೋಗಕ್ಕೆ ಸೇರಿದೆ. ಅವರ ಪ್ರಮಾಣ ಕಣಕ್ಕೆ ಇಳಿದ ಶೇ.77ರಷ್ಟಾಗಿದೆ. ಚುನಾವಣಾ ಆಯೋಗಕ್ಕೆ ಮೊದಲ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಳೆದುಕೊಂಡ ಠೇವಣಿ 4.02 ಲಕ್ಷ ರೂ ಸಿಕ್ಕಿತ್ತು. 2014ರ ವೇಳೆಗೆ ಅದರ ಪ್ರಮಾಣ 14.57 ಕೋಟಿ ರೂ.ಗೆ ಏರಿಕೆಯಾಗಿತ್ತು.

ಠೇವಣಿ ಹಣ ಕಡಿಮೆ: 1951  -52ನೇ ಸಾಲಿನಿಂದ 1996ರ ವರೆಗಿನ 11ನೇ ಲೋಕಸಭೆ ಚುನಾವಣೆವರೆಗೆ ಕಣಕ್ಕೆ ಇಳಿಯುವ ಹುರಿಯಾಳುಗಳಿಗೆ ಠೇವಣಿ ಮೊತ್ತ 500 ರೂ. ಆಗಿತ್ತು. 1951ರಲ್ಲಿ ಅದು ದೊಡ್ಡ ಮೊತ್ತವೇ ಆಗಿತ್ತು. ಆಗ ದೇಶದಲ್ಲಿ ತಲಾ ಆದಾಯ 286 ರೂ. ಆಗಿತ್ತು. 1996ರಲ್ಲಿ ಅದರ ಪ್ರಮಾಣ 14,058.80 ರೂ. ಆಗಿತ್ತು. ಈ ವರ್ಷ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಶೇ.90ರಷ್ಟು ಮಂದಿಯ ಠೇವಣಿ ಆಯೋಗಕ್ಕೆ ಜಮೆ ಆಗಿತ್ತು. 1998ರ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದವರು 10 ಸಾವಿರ ರೂ. ಠೇವಣಿ ಇರಿಸಬೇಕು ಎಂದು ತೀರ್ಮಾನವಾಗಿ 20ಪಟ್ಟು ಮೊತ್ತವನ್ನು ಹೆಚ್ಚಿಸಲಾ ಯಿತು. ಆ ಸಂದರ್ಭದಲ್ಲಿಯೇ ನೂರಾರು ಮಂದಿ ಚುನಾವಣೆ ಯಿಂದ ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕಿದ್ದರು. 2009ರ ಲೋಕಸಭೆ ಚುನಾವಣೆ ವೇಳೆ ಠೇವಣಿ ಮೊತ್ತವನ್ನು 25 ಸಾವಿರ ರೂ.ಗೆ ಪರಿಷ್ಕರಿಸಲಾಯಿತು.

ತೃತೀಯ ಲಿಂಗಿಗೆ ಆಪ್‌ ಟಿಕೆಟ್‌
ಈ ಬಾರಿ ಪ್ರಯಾಗದ ಕುಂಭಮೇಳದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಕಿನ್ನರ ಅಖಾಡದ (ತೃತೀಯ ಲಿಂಗಿಗಳ ಅಖಾಡಾ)ಮಹಾಮಂಡಲೇಶ್ವರಿ “ಭವಾನಿ ಮಾ ವಾಲ್ಮೀಕಿ’ ಈಗ ಆಪ್‌ ಸೇರಿದ್ದಾರೆ. ಅಲಹಾಬಾದ್‌ನಿಂದ ಈ ಬಾರಿ ಚುನಾವಣೆ ಎದುರಿಸಲಿದ್ದಾರೆ. ಮೂಲತಃ ಇಸ್ಲಾಂ ಧರ್ಮೀಯರಾಗಿದ್ದ ಭವಾನಿ ಮಾ, ಹಿಂದೂ ಧರ್ಮ ಸ್ವೀಕರಿಸಿ ಕಿನ್ನರ ಅಖಾಡಕ್ಕೆ ಸೇರಿದವರು. ತಮಗೆ ಟಿಕೆಟ್‌ ನೀಡಬೇಕೆಂದು ಬಿಜೆಪಿಯನ್ನು ಕೇಳಿದ್ದರಾದರೂ ಅದು ಕಿವಿಗೊಟ್ಟಿರಲಿಲ್ಲ.

ಹಣೆಹಚ್ಕಳಿ, ಮೋದಿ ಟಿಕ್ಕಳಿ
ಮಾರುಕಟ್ಟೆಯಲ್ಲೀಗ ಚುನಾವಣಾ ಕಾವು ಹೆಚ್ಚಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಹೋಳಿ ಹಬ್ಬದಂದು ಉತ್ತರಪ್ರದೇಶದಲ್ಲಿ ಮೋದಿ ಮತ್ತು ಪ್ರಿಯಾಂಕಾ ಪಿಚಕಾರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ನಂತರ ಸೂರತ್‌ನಲ್ಲಿ ಮೋದಿ ಸೀರೆ ಮತ್ತು ಮೋದಿ ಶರ್ಟ್‌ ಸದ್ದು ಮಾಡಿದವು. ಈಗ ಮೋದಿ ಮುಖವಿರುವ ಬಿಂದಿ ಬಂದಿದೆ. ಬಿಂದಿಯ ಪ್ಯಾಕೆಟ್‌ನ ಮೇಲೆ ಬಿಜೆಪಿಯ ಚಿಹ್ನೆಯೂ ಇದ್ದು, ಪಾರಸ್‌ ಬ್ರ್ಯಾಂಡ್‌ ಓನರ್‌ ಬಿಜೆಪಿಯವರೇ ಇರಬೇಕು ಎಂದು ಜನ ಟ್ರಾಲ್‌ ಮಾಡುತ್ತಿದ್ದಾರೆ.

ಪ್ರಥಮ ಮಹಿಳಾ ಅಭ್ಯರ್ಥಿ
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಇರುವುದು ಒಂದೇ ಒಂದು ಲೋಕಸಭಾ ಕ್ಷೇತ್ರ. 1972ರ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸ್ಪರ್ಧೆಗೆ ಇಳಿದಿದ್ದಾರೆ. 63 ವರ್ಷದ ಲಾಲ್ತಾಮುನೈ ಈ ದಾಖಲೆ ಮಾಡಲಿರುವವರು,. “ನಾನು ಮೊದಲ ಮಹಿಳಾ ಅಭ್ಯರ್ಥಿ ಎಂದು ತಿಳಿದು ಹೆಮ್ಮೆಯಾಗುತ್ತಿದೆ. ದೇವರ ಮತ್ತು ಜನರ ಸೇವೆ ಮಾಡಲು ಇದು ಉತ್ತಮ ಅವಕಾಶ’ ಎಂದು ಅವರು ಹೇಳಿಕೊಳ್ಳುತ್ತಾರೆ. ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆ ಏಕೆ?
ತಮಿಳುನಾಡಿನ ಮತ್ತು ನಿಜಾಮಾಬಾದ್‌ನ ರೈತರ ವಿಚಾರಕ್ಕೆ ಬಂದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಬೆಳೆಗಳಿಗೆ ಉತ್ತಮ ಬೆಲೆ ಬೇಕು ಎಂಬ ಬೇಡಿಕೆಯನ್ನು ಈ ರೀತಿಯಲ್ಲಿ ಎದುರಿಡುತ್ತಿದ್ದಾರೆ. ಅವರು ಬೇಡಿಕೆ ಈಡೇರಿಕೆಗಾಗಿ ನಾನಾ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ಕೆಲವೊಂದು ಸಂದರ್ಭಗಳಲ್ಲಿ ವಿನಾ ಕಾರಣ ಗೊಂದಲ, ಗಲಾಟೆ ಸೃಷ್ಟಿಸಲೋಸುಗ ಇಂಥ ಪ್ರಯತ್ನಗಳು ನಡೆಯುತ್ತವೆ.

ಮತಗಳು ಹರಿದುಹಂಚಿಹೋಗುವಂತೆ ಮಾಡಿ ಎದುರಾಳಿ ಪಕ್ಷಕ್ಕೆ ಪೆಟ್ಟು ಕೊಡುವುದಕ್ಕೂ ಹೀಗೆ ಮಾಡಲಾಗುತ್ತದೆ.

ಮದ್ದು ಗುಂಡುಗಳು, ಬಾಂಬ್‌ ದಾಳಿಗಳಿಗೇ ಹೆದರದ ವ್ಯಕ್ತಿ ನಾನು. ಈ ನರೇಂದ್ರ ಮೋದಿ ಮತ್ತು ಚಂದ್ರಶೇಖರ್‌ರಾವ್‌ರನ್ನು ನೋಡಿ ಹೆದರುತ್ತೇನೆ ಅಂದುಕೊಂಡಿದ್ದೀರಾ?
ಚಂದ್ರಬಾಬು ನಾಯ್ಡು

ನಾವು ಭ್ರಷ್ಟಾಚಾರದ ವಿಷಯ ಎತ್ತಿದ ಕೂಡಲೇ ಯೂಟರ್ನ್ ಹೊಡೆದ ಚಂದ್ರಬಾಬು ನಾಯ್ಡು, ಎನ್‌ಡಿಎ ಜೊತೆ ಮೈತ್ರಿ ಮುರಿದುಕೊಂಡುಬಿಟ್ಟರು. ಈಗ ಎತ್ತಿನ ಬಂಡಿ ಓಡಿಸುವವರ ಜೊತೆ ಸೇರಿಕೊಂಡಿದ್ದಾರೆ.
ನರೇಂದ್ರ ಮೋದಿ

ಮತ ಗಣಿತ
16 ದಶಲಕ್ಷ ಲೀಟರ್‌ 2014ರ ಚುನಾವಣೆಯ ವೇಳೆ ವಶಪಡಿಸಿಕೊಂಡ ಮದ್ಯದ ಪ್ರಮಾಣ

ನವಮುಖ
ಉದಯನಿಧಿ ಸ್ಟಾಲಿನ್‌
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಪುತ್ರ ಸದ್ಯ ತಮಿಳು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಂದೆಯೇ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವುದರಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನೀಲಗಿರಿ ಮತ್ತು ಇತರ ಸ್ಥಳಗಳಲ್ಲಿ ಜೋರಾಗಿಯೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೇತೃತ್ವದ ಸರ್ಕಾರಗಳ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಚೆನ್ನೈ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಹಿಳಾ ಅಭ್ಯರ್ಥಿ ತಮಿಳಚಾಯ್‌ ತಂಗಪಾಂಡ್ಯನ್‌ ಪರ ಪ್ರಚಾರ ಮಾಡಿದ ವೇಳೆ, ಸ್ಟಾಲಿನ್‌ ಪುತ್ರ ಅಭ್ಯರ್ಥಿಯ ಸೌಂದರ್ಯ ವರ್ಣಿಸಿದ್ದಾರೆ.

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.