ಸೋಲಿನ ಭಯ ವಿಲ್ಲ,ಸ್ಪರ್ಧೆ ಖಚಿತ
Team Udayavani, Mar 4, 2019, 9:28 PM IST
ಮಂಡ್ಯ: “ನನಗೆ ಸೋಲಿನ ಭಯವಿಲ್ಲ. ಸ್ಪರ್ಧೆ ಖಚಿತ’ ಎಂದು ಮಂಡ್ಯ ಲೋಕಸಭಾ ಚುನಾವಣೆ ಸ್ಪರ್ಧಾಕಾಂಕ್ಷಿ ಸುಮಲತಾ ಅಂಬರೀಶ್ ದೃಢವಾಗಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಹುತಾತ್ಮ ಯೋಧ ಎಚ್. ಗುರು ಅವರ ಕುಟುಂಬಕ್ಕೆ 20 ಗುಂಟೆ ಜಮೀನು ಹಸ್ತಾಂತರದದಾನ ಪತ್ರ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಲಿಗೆ ಹೆದರುವುದಕ್ಕೆ ನಾನೇನು ಯುದಟಛಿ ಮಾಡುತ್ತಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲಿ ಸೋಲು-ಗೆಲುವು ಸಹಜ. ಸ್ಪರ್ಧೆ ಮಾಡುವುದಂತೂ ಖಚಿತ ಎಂದು ಖಡಕ್ಕಾಗಿ ಉತ್ತರಿಸಿದರು. ನಾನೀಗ ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ. ಪಕ್ಷ ಯಾವ ನಿರ್ಧಾರ
ತೆಗೆದುಕೊಳ್ಳುತ್ತದೋ ನೋಡೋಣ. ಬಹುಶಃ 2-3 ದಿನದೊಳಗೆ ಪಕ್ಷದ ನಿರ್ಧಾರ ಹೊರಬೀಳಬಹುದು. ಆನಂತರ ನನ್ನ ನಿರ್ಧಾ ರ ವನ್ನು ಪ್ರಕಟಿಸುತ್ತೇನೆಂದರು. ಕಾಂಗ್ರೆಸ್‌ನ ಕೆಲವು ನಾಯಕರು ನನ್ನನ್ನು ಭೇಟಿಯಾಗಿ ಚುನಾವಣೆಗೆ ಮಂಡ್ಯವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ, ಬೆಂಗಳೂರು ಉತ್ತರ ಅಥವಾ ದಕ್ಷಿಣ ವನ್ನೋ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಅಲ್ಲದೆ, 8 ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಬಗ್ಗೆಯೂ ಪ್ರಸ್ತಾಪಿಸಿದ್ದರು. 3 ತಿಂಗಳ ಹಿಂದೆಯೂ ಅದನ್ನು ಪುನರುಚ್ಚರಿಸಿ ದ್ದರು. ಆದರೆ, ನಾನು ಅದನ್ನು ನಿರಾಕರಿಸಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿಗೆ ಟಾಂಗ್
“ಅಂಬರೀಶ್ ಅವರು ಅಧಿಕಾರದಲ್ಲಿದ್ದ ವೇಳೆಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಜನರೇ ಹೇಳುತ್ತಾರೆ. ವಸತಿ
ಸಚಿವರಾಗಿದ್ದಾಗ ಎಷ್ಟೋ ಮನೆಗಳನ್ನು ಕೊಡಿಸಿದ್ದಾರೆ. ಆ ವೇಳೆ ಅವರ ಆರೋಗ್ಯ ಸಮಸ್ಯೆಯೂ ಕಾಡಿತ್ತು. ಆದರೂ, ಜನರಿಗಾಗಿ
ಕೆಲಸ ಮಾಡಿದ್ದಾರೆ’ ಎಂದು ಸಿಎಂ ಕುಮಾರಸ್ವಾಮಿಗೆ ಸುಮಲತಾ ಟಾಂಗ್ ನೀಡಿದರು. ಮಂಡ್ಯ ಜಿಲ್ಲೆಯ ಸಮುದಾಯ ಭವನ ಗಳು, ಶಾಲಾ ಕಾಂಪೌಂಡ್‌ಗಳು ಸೇರಿ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಿ ಅಭಿವೃದ್ಧಿಯ ಸೂತ್ರಧಾರರಾಗಿದ್ದರು. ಗ್ರಾಮೀಣ ಸೇರಿ ನಗರದ ರಸ್ತೆಗಳ ಅಭಿವೃದ್ಧಿ ಮಾಡಿದ್ದರು. ಮೆಡಿಕಲ್ ಕಾಲೇಜು ಮಂಜೂರಾತಿಗೆ ಪ್ರಾಮಾಣಿವಾಗಿ ಕೆಲಸ ಮಾಡಿದ್ದರು. ಅವರು ಮಾಡಿರುವ ಕೆಲಸಗಳ ಬಗ್ಗೆ ಅವ ರೆಂದೂ ಪುಕ್ಕಟ್ಟೆ ಪ್ರಚಾರ ಪಡೆಯಲಿಲ್ಲ. ಜಾಹೀರಾತು ಹಾಕಿಸಿಕೊಳ್ಳಲಿಲ್ಲ ಎಂದರು.
ಮಂಡ್ಯದಲ್ಲೇ ಮನೆ ಕಟ್ಟಿಸುವೆ
“ನಾನು ಮಂಡ್ಯದಲ್ಲೇ ಸ್ವಂತ ಮನೆ ಕಟ್ಟಿಸುತ್ತೇನೆ. ಆಗ ಖಾಲಿ ಮಾಡಿಕೊಂಡು ಹೋಗುವ ಪ್ರಶ್ನೆಯೇ ಇರುವುದಿಲ್ಲ’ ಎಂದು ಸುಮ ಲತಾ ಅಂಬರೀಶ್ ತಿಳಿಸಿದರು. ಇಲ್ಲಿನ ಮಂಜುನಾಥ ನಗರದಲ್ಲೇ ನನ್ನ ಪತಿಯ ಪಿತ್ರಾರ್ಜಿತ ಆಸ್ತಿ ಇದೆ. ಆ ನಿವೇಶನದಲ್ಲೇ
ಹೊಸ ಮನೆ ಕಟ್ಟಿಸುತ್ತೇನೆ. ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ಇರಲು ನಿರ್ಧರಿಸಿದ್ದೇನೆ. ಮನೆ ಕಟ್ಟಿಸಿದ ಬಳಿಕ ಅಲ್ಲೇ ಉಳಿಯುತ್ತೇನೆ. ಜನರ ಪ್ರೀತಿ-ಬಾಂಧವ್ಯದಿಂದ ದೂರ ಹೋಗಲು ನಾನೆಂದೂ ಬಯಸುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.