ನಾವು ಓಟು ಹಾಕಿದರೂ ಆಗೋ ಸಾಧನೆ ಅಷ್ಟೇ !

ಬಂಟ್ವಾಳ ವಿಧಾನಸಭೆ ಕ್ಷೇತ್ರ: ಪ್ರತಿಷ್ಠೆಯ ಕಣದಲ್ಲಿ ಕರಗಿ ಹೋಗಿದೆ ಜನರ ಚುನಾವಣ ಉತ್ಸಾಹ

Team Udayavani, Apr 14, 2019, 6:15 AM IST

0904ks7a-ph

ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡು ಪೇಟೆಯ ನೋಟ.

ಬಂಟ್ವಾಳ: ಈ ಕ್ಷೇತ್ರದಲ್ಲೂ ನಡೆಯುತ್ತಿರು ವುದು ಲೋಕಸಭಾ ಚುನಾವಣೆಯೇ. ಆದರೆ ಜನರ ಬೇಡಿಕೆ ಆರಂಭವಾಗುವುದು ಪುರಸಭೆಯಿಂದಲೇ !

ಬಂಟ್ವಾಳ ವಿಧಾನಸಭಾ ಕ್ಷೇತ್ರ ಕೃಷಿ ಪ್ರಧಾನವಾದ ಆರ್ಥಿಕ ವ್ಯವಸ್ಥೆಯದ್ದು. ಅಭಿವೃದ್ಧಿಯಲ್ಲೂ ಕೊಂಚ ಮುಂದಿದೆ. ಕಳೆದ ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ಬಾವುಟ.

ಒಟ್ಟು 39 ಗ್ರಾ.ಪಂ.ಗಳ 59 ಗ್ರಾಮಗಳು ಮತ್ತು ಒಂದು ಪುರಸಭೆಯನ್ನು ಹೊಂದಿರುವ ಕ್ಷೇತ್ರವಿದು. ಇಲ್ಲಿ ಮಾತು ಆರಂಭವಾಗುವುದು ರಾಷ್ಟ್ರದ ಸಂಗತಿಯಿಂದಲೇ. ಬಂದು ನಿಲ್ಲುವುದು ಮಾತ್ರ “ಸ್ವಾಮಿ, ನಮ್ಮ ಪುರಸಭೆಗೆ ಅಧಿಕಾರ ಕೊಡಿ’ ಎಂಬಲ್ಲಿಗೆ. ಜಿಲ್ಲಾಕೇಂದ್ರ ಮಂಗಳೂರಿಗೆ ಹತ್ತಿರದ ಕ್ಷೇತ್ರವೆಂಬ ಹೆಗ್ಗಳಿಕೆಯೊಂದಿಗೆ ತಾಲೂಕು ಕೇಂದ್ರ ಬಿ.ಸಿ. ರೋಡ್‌ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿ ಬೆಳೆಯುತ್ತಿದೆ.

ಏನು ಸ್ವಾಮಿ ವೋಟು ಹಾಕ್ತೀರಾ? ಎಂದು ಉದಯವಾಣಿ ತಂಡ ಕೇಳಿದ್ದಕ್ಕೆ, “ಹಾಕದೇ ಇರಲಿ ಕ್ಕಾಗ್ತದೆಯೇ? ಹಾಕಬೇಕು. ನಾವು ಹಾಕಿದರೂ ಆಗೋ ಸಾಧನೆ ಅಷ್ಟೇ?’ ಎಂಬ ಸಿನಿಕತನವೂ ಕೆಲವು ಮತದಾರರಿಂದ ವ್ಯಕ್ತವಾಯಿತು.

ಬಂಟ್ವಾಳ ಕ್ಷೇತ್ರದಲ್ಲಿ ಪ್ರಸ್ತುತ ಕ್ಷೇತ್ರದ ಅಭಿವೃದ್ಧಿ ಗಿಂತಲೂ ರಾಷ್ಟ್ರೀಯ ಮಟ್ಟದ ಸಂಗತಿಗಳು ಹೆಚ್ಚು ಚರ್ಚೆಯಾಗುತ್ತಿರುವುದು ಸ್ಪಷ್ಟ. ಬಿಜೆಪಿಯು ಮೋದಿ ಫ್ಯಾಕ್ಟರ್‌ನ್ನು ಮುಂದಿಟ್ಟುಕೊಂಡಿದ್ದರೆ, ಕಾಂಗ್ರೆಸ್‌ ರಫೇಲ್‌ ಡೀಲ್‌, ನೋಟ್‌ ಬ್ಯಾನ್‌, ವಿಜಯ ಬ್ಯಾಂಕ್‌ ವಿಲೀನ ಎಂದೆಲ್ಲ ಪ್ರಸ್ತಾವಿಸುತ್ತಿದೆ. ಗ್ರಾಮೀಣ ಭಾಗ ಗಳಲ್ಲಿ ರಸ್ತೆ, ನೀರು ಎಂಬ ಕೂಗೂ ಸಹ ಜೋರಾಗಿ ಕೇಳಿಬರುತ್ತಿದೆ. ಒಂದೆರಡು ಕಡೆ ಮತದಾನ ಬಹಿಷ್ಕಾರದ ದನಿ ಕೇಳಿಬಂದರೂ ಸದ್ಯ ತಣ್ಣಗಾಗಿದೆ.

ಆಗಿದೆಯಾ ಆಗಿದೆ, ಇಲ್ಲವಾ ಇಲ್ಲ!
ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ವಿಷಯ ಆಗಿದೆಯಾ ಎಂದರೆ ಆಗಿದೆ, ಇಲ್ಲವೇ ಎಂದರೆ ಇಲ್ಲ ಎಂಬಂತಿದೆ. ಅದಕ್ಕಿಂತಲೂ ಮುಖ್ಯ ವಾಗಿ ಕೋಮು ಸೂಕ್ಷ್ಮ ಪ್ರದೇಶವಾದ ಇಲ್ಲಿ ಶಾಂತಿ- ಸಹಬಾಳ್ವೆಯ ಸಂಗತಿಯೇ ಪ್ರಮುಖ.

ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಬಂಟ್ವಾಳ ಇತರ ಎಲ್ಲ ಕ್ಷೇತ್ರಗಳಿಗಿಂತಲೂ ವಿಭಿನ್ನ. ಎಲ್ಲೂ ಇಲ್ಲದ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇಲ್ಲಿ ಅನುಷ್ಠಾನದಲ್ಲಿವೆ. ಬಂಟ್ವಾಳದ ಮೂಲಕ ಹಾದುಹೋಗುತ್ತಿರುವ ಮಂಗಳೂರು- ಬೆಂಗಳೂರು ಹೆದ್ದಾರಿ ಚತುಷ್ಪಥ ಕಾಮಗಾರಿ ಸಹ ಈ ಕ್ಷೇತ್ರದಿಂದಲೇ ಆರಂಭವಾದದ್ದು.

ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪೂರ್ಣಗೊಂಡಿದ್ದು, ಬಿ.ಸಿ. ರೋಡ್‌- ಪುಂಜಾಲಕಟ್ಟೆ ಹೆದ್ದಾರಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ ಚುನಾವಣೆಯಿಂದ ನಮಗೇನೂ ಲಾಭವಿಲ್ಲ, ನಾವು ದುಡಿಯಲೇಬೇಕು ಎಂಬ ಮಾತುಗಳು ಜನರಿಂದ ಕೇಳಿಬರುತ್ತಿದೆ.

ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತ ರಲ್ಲಿ ಚುನಾವಣೆಯ ಕಾವು ಕಂಡುಬರುತ್ತಿದೆಯೇ ವಿನಾ ಜನರು ಗಂಭೀರವಾಗಿ ಯೋಚಿಸುತ್ತಿಲ್ಲ. ಕ್ಷೇತ್ರದಲ್ಲಿ ಈಗಾಗಲೇ ಮನೆ ಮನೆ ಮತಪ್ರಚಾರದ ಅಭಿಯಾನ ಚಾಲ್ತಿಯಲ್ಲಿದೆ.

ಪುರಸಭೆಗೆ ಆಡಳಿತ ನೀಡಿ!
ಬಂಟ್ವಾಳದಲ್ಲಿ ಪುರಸಭೆಯಿದ್ದರೂ ಹಲವು ಸಮಯದಿಂದ ಇಲ್ಲಿ ಆಡಳಿತವಿಲ್ಲ ಎಂಬ ಕೂಗು ನಗರವಾಸಿಗಳಿಂದ ಕೇಳಿಬರುತ್ತಿದೆ. ಹಲವು ತಿಂಗಳ ಹಿಂದೆ ಇಲ್ಲಿ ಚುನಾವಣೆ ನಡೆದಿದ್ದರೂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲು ಗೊಂದಲದ ಕಾರಣ ಆಡಳಿತ ಮಂಡಳಿಯ ನೇಮಕವಾಗಿಲ್ಲ. ಹೀಗಾಗಿ ಯಾವುದೇ ಕೆಲಸವಾಗುತ್ತಿಲ್ಲ. ಈ ಸಮಸ್ಯೆಯನ್ನು ಯಾರ ಬಳಿ ಹೇಳಬೇಕು ಎಂದು ಪ್ರಶ್ನಿಸುತ್ತಾರೆ ನಾಗರಿಕರು.

ಕೃಷಿಗೆ ಕಾಯಕಲ್ಪದ ಕೂಗು
ಕ್ಷೇತ್ರದ ಆರ್ಥಿಕ ಮೂಲ ಕೃಷಿಯೇ ಆಗಿದ್ದು, ಯಾರೇ ಗೆದ್ದರೂ ಕೃಷಿಗೆ ಕಾಯಕಲ್ಪ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ, ಸಾಲ ಮನ್ನಾ ಗೊಂದಲ ನಿವಾರಣೆ, ಕಾಡು ಪ್ರಾಣಿ ಹಾವಳಿಗಳಿಂದ ಮುಕ್ತಿ ಹೀಗೆ ಕೃಷಿಕರ ಹತ್ತಾರು ಸಮಸ್ಯೆಗಳನ್ನು ನಿವಾರಿಸುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ.

ಓಟು ಕೇಳಲು ಅವರೇ ಬರುತ್ತಾರೆ
ಲೋಕಸಭೆಯ ಚುಾವಣೆಯಲ್ಲವೇ, ಗ್ರಾಮೀಣ ಭಾಗದ ಸಮಸ್ಯೆಯ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಸೂರಿಕುಮೇರಿನ ನಾಗರಿಕರೊಬ್ಬರ ಬಳಿ ಕೇಳಿದರೆ, “ಯಾವುದೇ ಚುನಾವಣೆ ಯಾಗಲಿ, ಓಟು ಕೇಳಲು ಬರುವವರು ಅವರೇ ಅಲ್ಲವೇ. ಹೀಗಾಗಿ ನಮಗೆ ಚುನಾವಣೆ ಯಾವುದು ಎಂಬುದು ಗೊತ್ತಿಲ್ಲ; ನಮ್ಮ ಸಮಸ್ಯೆ ಪರಿಹಾರವಾಗಬೇಕು’ ಎಂದರು.

ಹೆದ್ದಾರಿ ಯಾವಾಗ ಪೂರ್ಣ?
ಹೆದ್ದಾರಿಯ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಕಾಮಗಾರಿಯು ಬಂಟ್ವಾಳ ಕ್ಷೇತ್ರದ ಮೂಲಕ ಹಾದು ಹೋಗುತ್ತಿದ್ದು, ಇದು ಯಾವಾಗ ಪೂರ್ಣಗೊಳ್ಳುತ್ತದೆ? ಕಲ್ಲಡ್ಕ ಪೇಟೆಯಲ್ಲಿ ಹೆದ್ದಾರಿ ಸಾಗುತ್ತದೆಯೇ ಎಂಬ ಕುರಿತು ನಮಗೆ ಮಾಹಿತಿ ಇಲ್ಲ. ಸೂರಿಕುಮೇರು, ಪೂರ್ಲಿಪ್ಪಾಡಿ ಭಾಗಗಳಲ್ಲಿ ಅಗೆದು ಹಾಕಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಸಂದರ್ಭದಲ್ಲಿ ನಮಗೆ ಧೂಳಿನಿಂದ ತೊಂದರೆಯಾಗುತ್ತದೆ. ಹೀಗಾಗಿ ಇದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿ ನೀಡಿದರೆ ಉತ್ತಮ ಎಂದು ಕಲ್ಲಡ್ಕದ ಖಾಸಗಿ ಉದ್ಯೋಗಿಯೊಬ್ಬರು ಹೇಳಿದರು.

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.