ಆಂಧ್ರದಲ್ಲಿ ಬಿರಿಯಾನಿ ಘಮಲು
Team Udayavani, Mar 26, 2019, 6:00 AM IST
ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಚುನಾವಣಾ ಪ್ರಚಾರಗಳೇ ಭಾರಿ ವಿಚಿತ್ರ. 2018ರ ಡಿಸೆಂಬರ್‌ನಲ್ಲಿ ನಡೆದಿದ್ದ ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಹೈದರಾಬಾದ್ ಬಿರಿಯಾನಿ ಬಗ್ಗೆ ವಿಶೇಷವಾಗಿ ಪ್ರಚಾರದಲ್ಲಿ ಸ್ಥಾನಪಡೆದಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಸೇರಿದಂತೆ ಹಲವು ಮಂದಿ ನಾಯಕರು ಬಿರಿಯಾನಿ ಪ್ರಸ್ತಾಪ ಮಾಡಿದ್ದರು.
ಈ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕೂಡ ಮತ್ತೆ ಬಿರಿಯಾನಿ ಪ್ರಸ್ತಾಪವಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಆಂಧ್ರಪ್ರದೇಶದ ಬಿರಿಯಾನಿ ಮತ್ತು ಹೆಸರುಕಾಳಿನಿಂದ ವಿಶೇಷವಾಗಿ ತಯಾರಿಸಲಾಗುವ ಸೂಪ್ ಅಥವಾ ತೆಲುಗು ಭಾಷೆಯಲ್ಲಿ “ಉಲ್ವಲಚಾರು’ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರಿಂದ ತೆಲುಗು ಆಹಾರ, ಸಂಸ್ಕೃತಿಗೇ ಧಕ್ಕೆ ಎಂದು ಎಂದು ತೆಲುಗು ದೇಶಂ ಪಕ್ಷ ಪ್ರಚಾರ ಮಾಡುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಕವಲಕುಂಟ ಚಂದ್ರಶೇಖರ ರಾವ್ ಆಂಧ್ರಪ್ರದೇಶ ಬಿರಿಯಾನಿಯನ್ನು “ಸಗಣಿ’ ಎಂದು ಟೀಕಿಸಿದ್ದರು ಎಂದೂ ಪ್ರತಿಪಾದಿಸುತ್ತಿದೆ.
ಹೈದರಾಬಾದ್‌ನಲ್ಲಿರುವ ಆಂಧ್ರಪ್ರದೇಶ ಮೂಲ ವ್ಯಕ್ತಿಗಳ ಆಸ್ತಿ ವಶಪಡಿಸಿಕೊಳ್ಳಲು ತೆಲಂಗಾಣ ಸರ್ಕಾರ ದಾಳಿ ನಡೆಸುತ್ತಿದೆ. ಜತೆಗೆ ಟಿಡಿಪಿಗೆ ಬೆಂಬಲ ನೀಡದಂತೆ ಬೆದರಿಕೆ ಹಾಕದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಆರೋಪ ಮಾಡಿದೆ.
ಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಪ್ರಧಾನಿ ನರೇಂದ್ರ ಮೋದಿ ಪುಲ್ವಾಮಾ ದಾಳಿ ಎದುರಿಸಲು ವಿಫಲವಾಗಿದ್ದಾರೆ ಎನ್ನುವುದನ್ನು ಟೀಕಿಸಲೋಸುಗ “ಫೆ.14ರಂದು ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಬೀಫ್ ಬಿರಿಯಾನಿ ತಿಂದು ನಿದ್ದೆ ಮಾಡಿದ್ದರು’ ಎಂದು ವಾಗ್ಧಾಳಿ ನಡೆಸಲೂ ವಿಶೇಷ ತಿನಸಿನ ಹೆಸರನ್ನೇ ಬಳಸಿದ್ದಾರೆ.
ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸೋಮವಾರ ಗುಂಟೂರು ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ನಿವಾಸದಲ್ಲಿ ಬಿರಿಯಾನಿ ಸೇವಿಸಿದ್ದಾರೆ. ಪಕ್ಷದ ಅಭ್ಯರ್ಥಿ ಶೇಕ್ ಜಿಯಾ ಉರ್ ರೆಹಮಾನ್ ನಿವಾಸಕ್ಕೆ ಪ್ರಚಾರದ ವೇಳೆ ಬಿಡುವು ಮಾಡಿಕೊಂಡು ಬಿರಿಯಾನಿಯನ್ನು ಬಾಯಿ ಚಪ್ಪರಿಸಿಕೊಂಡು ಸೇವಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಪರ್ಶಿಯಾ ಮೂಲದ್ದು: ಬಿರಿಯಾನಿ ಎನ್ನುವುದು ಮೂಲತಃ ಪರ್ಷಿಯಾದ ತಿನಸು. “ಬಿರಿಯನ್’ ಎಂದು ಆ ಕಾಲದಲ್ಲಿ ಕರೆಯಲಾಗುತ್ತಿತ್ತು. 1900ರ ಸುಮಾರಿಗೆ ಲಕ್ನೋದಲ್ಲಿ ಅದು ಜನಪ್ರಿಯವಾಯಿತು. ನಂತರದ ದಿನಗಳಲ್ಲಿ ಅದು ಹೈದರಾಬಾದ್‌ನ ಜನಪ್ರಿಯ ಖಾದ್ಯವಾಗಿ ಗುರುತಿಸಿಕೊಂಡಿತು. ನಿಜಾಮರ ಆಡಳಿತದ ಅವಧಿಯಲ್ಲಿ ಅದು ಪ್ರಮುಖ ಹೆಗ್ಗುರುತಾಗಿ ಬದಲುಗೊಂಡಿತು. ಬಡತನದ ಮೇಲೆ ಕೊನೆಯ ಪ್ರಹಾರ ಆರಂಭವಾಗಿದೆ. ಕನಿಷ್ಠ ಆದಾಯ ಯೋಜನೆಯು ಅತ್ಯಂತ ಶಕ್ತಿಯುತ, ಕ್ರಿಯಾತ್ಮಕ, ಮತ್ತು ಉತ್ತಮ ಐಡಿಯಾ ಆಗಿದೆ. ರಾಹುಲ್ ಗಾಂಧಿ
ಬಡತನ ನಿವಾರಣೆಯ ವಿಚಾರದಲ್ಲಿ ಅತ್ಯಂತ ಕೆಟ್ಟ ರೆಕಾರ್ಡ್ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಇಂಥ ಉದಾತ್ತ ಭರವಸೆಗಳನ್ನು ನೀಡುವ ಯಾವುದೇ ಹಕ್ಕೂ ಇಲ್ಲ.
ಅರುಣ್ ಜೇಟ್ಲಿ
ಈ ಬಾರಿ
ಸಂಭಿತ್ ಪಾತ್ರ
ಬಿಜೆಪಿ ವಕ್ತಾರರಾಗಿರುವ ಪಾತ್ರ, ಹಾಲಿ ಚುನಾವಣೆಯಲ್ಲಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಜನರಲ್ ಸರ್ಜರಿಯಲ್ಲಿ ಎಂ.ಎಸ್.ಪದವಿ ಪಡೆದಿರುವ ಸಂಭಿತ್ ಪಾತ್ರಾ 2012ರಲ್ಲಿ ನವದೆಹಲಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಇಂದಿನ ಕೋಟ್
ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ನಮ್ಮ ಆಡಳಿತದ ಅವಧಿಯಲ್ಲಿ ಸುಮಾರು 65 ದಶಲಕ್ಷಕ್ಕೆ ಇಳಿದಿದೆ. 2011ರ ಇದು ಒಟ್ಟು ಜನಸಂಖ್ಯೆಯ ಸುಮಾರು 5% ರಷ್ಟು. 2011ಕ್ಕೆ ಹೋಲಿಸಿದರೆ ಶೇ. 21.9 ಇಳಿಕೆ ಕಂಡಿದೆ. (ಕಾಂಗ್ರೆಸ್‌ನ ಹೊಸ ಬಡತನ ನಿರ್ಮೂಲನ ಯೋಜನೆ ಕುರಿತು)
ಬಿಜೆಪಿ
ಸೂಟ್-ಬೂಟ್ ಸರಕಾರದ ದೊಡ್ಡ ಹೇಳಿಕೆ ಗಳಿಂದ, ಬಣ್ಣದ ಮಾತುಗಳಿಂದ ಸತ್ಯವನ್ನು ಮುಚ್ಚಿ ಡಲು ಎಂದಿಗೂ ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ) ಅದರ ಗುರಿ ತಲುಪಲು ವಿಫಲವಾಗಿದೆ. ಅನು ಮೋದಿತ ಮನೆಗಳಲ್ಲಿ ಕೇವಲ 15% ಮಾತ್ರ ಪೂರ್ಣಗೊಂಡಿದ್ದು, 2022 ಗುರಿಯು ಒಂದು ಭಾತಿಯಷ್ಟೇ. (ನೂತನ ಯೋಜನೆಗೆ ಬಿಜೆಪಿಯ ಟೀಕೆಗೆ ಟಾಂಗ್)
ಕಾಂಗ್ರೆಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.