“ಕೈ’ ಸಮೀಕ್ಷೆಯಲ್ಲಿ “ಕಮಲ’ಕ್ಕೆ ಜನ ಬೆಂಬಲ
Team Udayavani, Apr 1, 2019, 6:33 AM IST
ಗದಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿರುವ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ತಮ್ಮದೇ ಫೇಸ್‌ಬುಕ್ ಖಾತೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಇದರಿಂದ ಗೊಂದಲಕ್ಕೀಡಾಗಿರುವ ನಾಯಕರು, ಈಗ ಪಬ್ಲಿಕ್ ಪೋಲ್ ಆಯ್ಕೆಯನ್ನೇ ಹೈಡ್ ಮಾಡಿದ್ದಾರೆ.
ಈ ಬಾರಿಯ ಲೋಕಸಭಾ ಸಮರದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿಸಲು ಉದ್ದೇಶಿಸಿದೆ. ಕಾಂಗ್ರೆಸ್ ಸಿದ್ಧಾಂತಗಳು, ಹಿಂದಿನ ಸಾಧನೆಗಳು ಮತ್ತು ಎನ್‌ಡಿಎ ಸರಕಾರದ ಐದು ವರ್ಷಗಳ ವೈಫಲ್ಯ, ಬಿಜೆಪಿ ಮತ್ತು ನರೇಂದ್ರ ಮೋದಿ ಜನ ವಿರೋಧಿ ಧೋರಣೆಗಳನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶ. ಆದರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ನಡೆಸಿದ ಪೋಲ್ ಎಂಬ ಅಸ್ತ್ರ ತಿರುಗು ಬಾಣವಾಗಿದ್ದು, ಪಕ್ಷದ ನಾಯಕರು ಮುಜುಗರಕ್ಕೀಡಾಗಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪರವಾಗಿ ಜನಾಭಿಪ್ರಾಯ ಮೂಡಿಸುವುದರೊಂದಿಗೆ ಜನ ಬೆಂಬಲ ತಿಳಿಯುವಂತೆ ನಿರ್ದೇಶಿಸಿದ್ದರು. ಅದರಂತೆ ಗದಗ ಜಿಲ್ಲೆಯ ಪಕ್ಷದ ಯುವ ನಾಯಕರು ಫೇಸ್‌ಬುಕ್ ಜನಾಭಿಪ್ರಾಯ ತಿಳಿಯಲು ಮುಂದಾಗಿದ್ದರು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾರು? ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ್ ಅಥವಾ ಬಿಜೆಪಿ ಶಿವಕುಮಾರ ಉದಾಸಿ ಅವರೇ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕಾಂಗ್ರೆಸ್ ನಾಯಕರ ಫೇಸ್‌ಬುಕ್ ಸ್ನೇಹಿತರ ಸಹಿತ ಶೇ.50ಕ್ಕೂ ಹೆಚ್ಚು ಜನರು ಬಿಜೆಪಿ ಬೆಂಬಲಿಸಿರುವುದು ಸ್ವತ: ಕೈ ನಾಯಕರ ನಿದ್ದೆಗೆಡಿಸಿದೆ.
ಕಾಂಗ್ರೆಸ್‌ಗೆ ಬಂದದ್ದು ಶೇ.32 ಮಾತ್ರ
ಯುವ ಕಾಂಗ್ರೆಸ್ ಗದಗ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷೆ ವೀಣಾ ಶಿರೋಳ ಎಂಬವರು 15 ದಿನಗಳ ಹಿಂದೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಲ್ ಮಾಡಿ ಎಂದು ಕೋರಿದ್ದರು. ಆರಂಭಿಕ ಒಂದೆರಡು ದಿನ ಕಾಂಗ್ರೆಸ್ ಮುನ್ನಡೆ ಪಡೆದಿದ್ದರೆ, ದಿನ ಕಳೆದಂತೆ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಕೇವಲ 585 ಜನರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರೆ, 1,200 ಜನರು ಕಮಲ ಪಕ್ಷ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಹುರಿಯಾಳು ಡಿ.ಆರ್.ಪಾಟೀಲಗೆ ಶೇ.32 ಮತ್ತು ಬಿಜೆಪಿಯ ಶಿವಕುಮಾರ ಉದಾಸಿ ಅವರಿಗೆ ಶೇ.68ರಷ್ಟು ಜನ ಬೆಂಬಲ ಸೂಚಿಸಿದ್ದಾರೆ. ಇದರಿಂದ ಬೆಚ್ಚಿಬಿದ್ದ ಯುವ ನಾಯಕಿ ಗುರುವಾರವೇ ತಮ್ಮ ಖಾತೆಯಲ್ಲಿ ಪೋಲ್ ಆಯ್ಕೆಯನ್ನು ಮರೆ ಮಾಡಿದ್ದಾರೆ.
ಪಕ್ಷದ ಯುವ ಮುಖಂಡ ಸಚಿನ್ ಡಿ. ಪಾಟೀಲ ಸೂಚನೆಯಂತೆ ಸುಮಾರು 50 ಜನರು ಫೇಸ್‌ಬುಕ್ ಪೋಲ್ ಆರಂಭಿಸಿದ್ದೆವು. ದಿನ ಕಳೆದಂತೆ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದರಿಂದ ಅದನ್ನು ಮರೆ ಮಾಚಿದ್ದೇವೆ. ಕೆಲ ಯುವಕರು ಮತ್ತೂಬ್ಬರ ಫೇಸ್‌ಬುಕ್ ಖಾತೆಯಿಂದಲೂ ಬಿಜೆಪಿ ಬೆಂಬಲಿಸಿರುವ ಸಾಧ್ಯತೆಗಳಿವೆ.
– ವೀಣಾ ಶಿರೋಳ, ಗದಗ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ
ಜನರು ಸುಭದ್ರ, ಸ್ವತ್ಛ ಮತ್ತು ಸುಭದ್ರ ಆಡಳಿತ ಬಯಸುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಮೋದಿಗೆ ಹೆಚ್ಚಿನ ಜನ ಬೆಂಬಲವಿದೆ ಎಂಬುದನ್ನು ಈಗಾಗಲೇ ಅನೇಕ ಸಮೀಕ್ಷೆಗಳು ಹೇಳಿವೆ. ಆದರೆ ಕಾಂಗ್ರೆಸ್ ನಾಯಕರೇ ನಡೆಸಿದ ಪೋಲ್‌ನಲ್ಲೂ ಬಂದಿರುವ ಫಲಿತಾಂಶವನ್ನು ಆ ಪಕ್ಷದ ನಾಯಕರೂ ಒಪ್ಪಿಕೊಳ್ಳಬೇಕಾಗುತ್ತದೆ.
– ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.