ಬಿಜೆಪಿ ಅರ್ಧ ಸೋಲೊಪ್ಪಿಕೊಂಡಿದೆ: ಪ್ರಮೋದ್‌


Team Udayavani, Apr 12, 2019, 6:30 AM IST

pramod

ಕುಂದಾಪುರ: ನನ್ನ ಮುಖ ನೋಡಿ ಮತ ಚಲಾಯಿಸುವುದಲ್ಲ, ಮೋದಿ ಮುಖ ನೋಡಿ ಮತ ಚಲಾಯಿಸಿ ಎನ್ನುವ ಮೂಲಕ ಕ್ಷೇತ್ರ ದಲ್ಲಿ ಬಿಜೆಪಿ ಅರ್ಧ ಸೋಲೊಪ್ಪಿದೆ. ಕ್ಷೇತ್ರದ ಜನತೆಗೆ ಅಹವಾಲು ಹೇಳಿ ಕೊಳ್ಳಲು, ಭೇಟಿಯಾಗಲು ಮೋದಿ ತತ್‌ಕ್ಷಣಕ್ಕೆ ದೊರೆಯುತ್ತಾರಾ, ಬೆಂಗ ಳೂರು ವಿಳಾಸ ನೀಡಿದವರು ಸಿಗು ತ್ತಾರಾ, ಸ್ಥಳೀಯ ಅಭ್ಯರ್ಥಿ ನಾನು ಸಿಗುತ್ತೇನಾ ಎನ್ನುವುದನ್ನು ಯೋಚಿಸಿ ಮತ ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಗುರುವಾರ ಇಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ಮೋದಿ ಜನರ ಕೈಗೆ ಸಿಗುವುದಿಲ್ಲ. ನಮಗೆ ದೇಶ ಮುಖ್ಯ. ಜತೆಗೆ ಕ್ಷೇತ್ರದ ಅಭಿವೃದ್ಧಿಯೂ ಮುಖ್ಯ. ನಾನು ಸಚಿವ, ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಜನ ನೋಡಿದ್ದಾರೆ. ಅದೇ ಮಾದರಿಯಲ್ಲಿ ಎರಡೂ ಜಿಲ್ಲೆಯ ಅಭಿವೃದ್ಧಿಯ ಭರವಸೆ ನೀಡುತ್ತೇನೆ. ಕೇಂದ್ರ ಹಾಗೂ ರಾಜ್ಯದ ಅನುದಾನ ತರಿಸುತ್ತೇನೆ. ಕೆಲಸ ಮಾಡುವವರು ಯಾರು, ಮಾಡದವರು ಯಾರು, ಸ್ಥಳೀಯರು ಯಾರು, ಬೆಂಗಳೂರು ವಿಳಾಸ ನೀಡಿದವರು ಯಾರು ಎಂದು ಜನ ಗಮನಿಸುತ್ತಾರೆ ಎಂದರು.

ಚುನಾವಣೆ ಬಳಿಕ ಮರಳು
ಮರಳಿನ ಸಮಸ್ಯೆಗೆ ಮೂಲ ಕಾರಣವೇ ಕೇಂದ್ರ. ಕರಾವಳಿ ವಲಯ ದಲ್ಲಿ ನಿಷೇಧಿಸಿದೆ, ಕುಂದಾಪುರವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸಲಾಗಿದೆ, ನದಿಯಾಳದಿಂದ ಮರಳು ತೆಗೆಯುವುದನ್ನೂ ನಿಷೇಧಿಸ ಲಾಗಿದೆ. ಇದೆಲ್ಲದರ ವಿರುದ್ಧ ಸಂಸದರು ಕೇಂದ್ರದ ಗಮನ ಸೆಳೆದು ಸಮಸ್ಯೆ ನಿವಾರಿಸಬೇಕಿತ್ತು. ಜನ ವಿರೋಧಿ ಕಾನೂನು ಬಂದಾಗ ಅದನ್ನು ಬದಲಾ ಯಿಸುವುದು ಕೂಡ ಸಂಸದರ ಕೆಲಸ. ನಾನು ಸಚಿವನಾಗಿದ್ದಾಗ 7.38 ಲಕ್ಷ ಟನ್‌ ಮರಳಿಗೆ ಅನುಮತಿ ದೊರೆತಿತ್ತು. ಚುನಾವಣೆ ಮುಗಿದ ಕೂಡಲೇ ಮರಳುಗಾರಿಕೆಗೆ ದೊರೆತ ಅನುಮತಿ ಯಂತೆ ಜನರಿಗೆ ಮರಳು ದೊರಕಿಸಲು ಪ್ರಯತ್ನಿಸುತ್ತೇನೆ ಎಂದರು.

ಮೀನುಗಾರರ ಪ್ರಶ್ನೆಗೆ ಉತ್ತರವಿಲ್ಲ
ಮೀನುಗಾರರ ನಾಪತ್ತೆ ಕುರಿತು ಕೇಂದ್ರ ಉತ್ತರಿಸುತ್ತಿಲ್ಲ. ಅವರ ಬೋಟನ್ನು ನೌಕಾದಳವೇ ಹೊಡೆದುರು ಳಿಸಿದೆ ಎಂಬ ಅನುಮಾನ ನಮಗಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ, ಸಚಿವರು ಉತ್ತರಿಸುತ್ತಿಲ್ಲ. ಇಷ್ಟು ದಿನಗಳಾದರೂ ಪತ್ತೆ ಮಾಡದಿರುವುದು ಅಕ್ಷಮ್ಯ ಅಪರಾಧ, ಮೀನುಗಾರರಿಗೆ ಬಗೆಯುವ ದ್ರೋಹ ಎಂದರು.

ಆಕ್ಷೇಪ ಇಲ್ಲ
ಮೈತ್ರಿ ಕುರಿತು ಎಲ್ಲೂ ಕಾರ್ಯ ಕರ್ತರು ಆಕ್ಷೇಪಿಸಿಲ್ಲ. 50-60 ಸಭೆಗಳನ್ನು ಮಾಡಿದ್ದೇವೆ. ಗೋ ಬ್ಯಾಕ್‌ ಶೋಭಾ ಅಭಿಯಾನ ಮಾಡಿದವರು, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶಾಸಕರ ಮೇಲೆ ಅಸಮಾಧಾನ ಇರುವವರ ಮತಗಳು ನನಗೆ ದೊರೆತು ನಾನು ಗೆಲುವು ಸಾಧಿಸಲಿದ್ದೇನೆ ಎಂದರು.

ರಫೇಲ್‌ ಡೀಲ್‌ ಸಾಕ್ಷಿ ಕುರಿತು ಸುಪ್ರೀಂಕೋರ್ಟ್‌ ಆದೇಶ ನೀಡಿರು ವುದು ದೇಶದಲ್ಲಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ತೋರಿಸುತ್ತದೆ ಎಂದರು.
ಕಾಂಗ್ರೆಸ್‌ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಹೆರಿಯಣ್ಣ, ದೇವಕಿ ಸಣ್ಣಯ್ಯ, ವಿನೋದ್‌ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಜೆಡಿಎಸ್‌ನ ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆ, ಹುಸೇನ್‌ ಹೈಕಾಡಿ ಮೊದಲಾದವರು ಇದ್ದರು.

ಪ್ರಮೋದಿಗೆ ಓಟು ಪತ್ರಕರ್ತರು: ಮೋದಿ ಹವಾ ಇದೆಯೇ?
ಪ್ರಮೋದ್‌: ನನ್ನ ಹೆಸರಿನಲ್ಲಿಯೇ ಮೋದಿ ಇದೆ. ಪ್ರ”ಮೋದಿ’ಗೆ ಓಟು ಕೊಡಿ ಎಂದೇ ನಾನು ಕೇಳುತ್ತಿರುವುದು.

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.