ಅಪ್ಪ ಬಿಜೆಪಿ ಸಚಿವ, ಮಗ ಕಾಂಗ್ರೆಸ್ ಅಭ್ಯರ್ಥಿ
Team Udayavani, Apr 12, 2019, 6:30 AM IST
ಮಣಿಪಾಲ: ಈ ಬಾರಿಯ ಲೋಕಸಭಾ ಚುನಾವಣೆ ಹಲವು ಪ್ರಥಮಗಳನ್ನು ಹುಟ್ಟುಹಾಕಿದೆ. ದೇಶದ ರಾಜಕಾರಣದಲ್ಲಿ ಹಲವು ಆಸಕ್ತಿಕರವಾದ ಸಂಗತಿಗಳಿಗೆ ಈ ಚುನಾವಣೆ ವೇದಿಕೆಯಾಗಿದೆ. ಹಿಮಾಚಲ ಪ್ರದೇಶದ ಒಂದು ಕುಟುಂಬದಲ್ಲೇ ಎರಡು ಮಂದಿ ಸಕ್ರೀಯ ರಾಜಕಾರಣದಲ್ಲಿದ್ದಾರೆ. ಇದೀಗ ಎರಡು ರಾಜಕೀಯ ಚಿಂತನೆಗಳು ಸಮಸ್ಯೆಯಾದರೂ, ಕುಟುಂಬ ಮಾತ್ರ ಅದನ್ನು ಗಂಭೀರವಾಗಿ ತೆಗೆದು ಕೊಳ್ಳದೇ ಸಮಾಧಾನದಲ್ಲೇ ಇದೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಆಶ್ರಯ್ ಶರ್ಮ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದಾರೆ, ಅವರ ತಂದೆ ಅನಿಲ್ ಶರ್ಮ ಮಂಡಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದು ಇವೆಲ್ಲದಕ್ಕೆ ಕಾರಣವಾದ ಅಂಶ. ಆದರೆ ಪುತ್ರ ವ್ಯಾಮೋಹವನ್ನು ಬಿಟ್ಟುಕೊಡದ ಸಚಿವ ತನ್ನ ಪುತ್ರನ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ. ಶರ್ಮ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಇದೀಗ ಪ್ರಚಾರ ಕಣದಿಂದ ಹಿಂದೆ ಸರಿದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.