ಬಿಜೆಪಿ ನಾಯಕರಿಗೆ ಈಗ ಪರೀಕ್ಷಾ ಕಾಲ
ಲೋಕಸಭೆ ಫಲಿತಾಂಶದ ಬಳಿಕ ಮೌಲ್ಯಮಾಪನ ; ಮುಂದಿನ ಪದೋನ್ನತಿಗೆ "ಎಲಿಮಿನೇಷನ್' ಸುತ್ತು
Team Udayavani, Apr 12, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಬಿಜೆಪಿ ವರಿಷ್ಠರು ಗುರಿ ನೀಡಿದ್ದು, ರಾಜ್ಯ ನಾಯಕರು ತಮ್ಮ ನಾಯಕತ್ವ ಹಾಗೂ ಪ್ರಭಾವವನ್ನು ಫಲಿತಾಂಶದಲ್ಲಿ ತೋರಿಸಬೇಕಿದೆ. ಹಾಗಾಗಿ ಇದು ರಾಜ್ಯ ನಾಯಕರಿಗೆ ಒಂದು ರೀತಿ ಸಾಮರ್ಥಯ ಪರೀಕ್ಷಾ ಕಾಲದಂತಿದೆ!
ಹಾಲಿ ಸಂಸದರಿಗೆ ಮತ್ತೆ ಟಿಕೆಟ್, ಅಭ್ಯರ್ಥಿ ಆಯ್ಕೆಗೆ ಶಿಫಾರಸು ಸೇರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ನಾಯಕರು ಹಲವು
ವಿಚಾರಗಳಲ್ಲಿ ವರಿಷ್ಠರ ಮನವೊಲಿಸಿ ಮೇಲುಗೈ ಸಾಧಿಸಿರಬಹುದು. ಅದರಂತೆ ಈಗ ಹೆಚ್ಚು ಸಂಸದರನ್ನು ಗೆಲ್ಲಿಸುವ ಮೂಲಕ ತಾವು ವಹಿಸಿದ ವಕಾಲತ್ತು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಬೇಕಿದೆ. ಇಲ್ಲದಿದ್ದರೆ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೂ ಬದಟಛಿವಾಗಿರಬೇಕಿದೆ.
ಹಾಗಾಗಿ ಇದು ಸಾಮರ್ಥಯ ಪರೀಕ್ಷೆ ಯ ಪರಿಷ್ಕರಣೆ (ಎಲಿಮಿನೇಷನ್) ಸುತ್ತು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು,ಬಿಜೆಪಿಯು ಭರ್ಜರಿ ಪ್ರಚಾರ ನಡೆಸುತ್ತಿದೆ. ರಾಜ್ಯ ನಾಯಕರ ಮನವಿ ಮೇರೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ
ಹಲವು ಕೇಂದ್ರ ಸಚಿವರು ಪ್ರಚಾರ ಸಭೆ, ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯುವ ಜತೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕೇಂದ್ರ ನಾಯಕರಿಂದ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಿದ್ದು, ರಾಜ್ಯ ನಾಯಕರು ಇದೀಗ ತಮ್ಮ ಸಾಮರ್ಥ್ಯಸಾಬೀತುಪಡಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿ ರಾಜ್ಯ ಮಟ್ಟದ ಹಿರಿಯ ನಾಯಕರು ಈಗಾಗಲೇ ಲೋಕಸಭಾ ಚುನಾವಣೆ ಪ್ರಕ್ರಿಯೆ, ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಹಲವು ನಾಯಕರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದು,ಫಲಿತಾಂಶದ ಬಳಿಕ ಮೌಲ್ಯಮಾಪನವೂ ನಡೆಯಲಿದೆ. ಹಾಗಾಗಿ ಸಾಧ್ಯವಾದಷ್ಟು ಹೆಚ್ಚು ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ
ನಾಯಕರಿಗೂ ಅನಿವಾರ್ಯವಾಗಿದೆ.
ಹಾಲಿ ಸಂಸದರಿಗೆ ಟಿಕೆಟ್‌ಗಾಗಿ ಪ್ರಭಾವ ಬಳಸಿದವರು, ಬಿಜೆಪಿಯೇತರ ಸಂಸದರಿರುವ ಕ್ಷೇತ್ರಗಳಲ್ಲಿ ಇಂತದ್ದೇ ಅಭ್ಯರ್ಥಿಗಳು ಎಂದು ವಾದ ಮಂಡಿಸಿ ತಮಗೆ ಬೇಕಾದವರಿಗೆ ಟಿಕೆಟ್ ಪಡೆದವರು, ನಾಮಬಲ, ಜಾತಿಬಲದಲ್ಲಿ ಪ್ರಭಾವಿಗಳು ಎನಿಸಿಕೊಂಡವರು, ಸಂಘಟನಾ ಚತುರರೆನಿಸಿಕೊಂಡವರು, ಆಯ್ದ ಪ್ರದೇಶಗಳಲ್ಲಿ ತಮ್ಮದೇ ಪ್ರಾಬಲ್ಯವಿದೆ ಎನ್ನುವ ನಾಯಕರೆಲ್ಲಾ ತಮ್ಮ ಸಾಮರ್ಥ್ಯವನ್ನು ಕೃತಿಯಲ್ಲಿ ತೋರಿಸಬೇಕಿದೆ. ತಮ್ಮ ಸಮುದಾಯಗಳ ಮೇಲೆ ಹಿಡಿತವಿದೆ ಎನ್ನುವ ನಾಯಕರು ಆಯಾ ಸಮುದಾಯಗಳ ಮತಗಳನ್ನು ಸೆಳೆಯುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದನ್ನು ವರಿಷ್ಠರು ಫಲಿತಾಂಶದ ಬಗ್ಗೆ ಪರಿಶೀಲಿಸಲಿದ್ದಾರೆ. ಪಕ್ಷದ ಅಭ್ಯರ್ಥಿ ಪರಾಭವಗೊಂಡರೆ ಅದಕ್ಕೆ ಕಾರಣವಾದ ಅಂಶಗಳು, ಹಿನ್ನಡೆಗೆ ಕಾರಣರಾದವರು ಯಾರು ಎಂಬುದನ್ನು
ಗುರುತಿಸಲಿದ್ದಾರೆ. ಅಭ್ಯರ್ಥಿ ಗೆದ್ದರೂ ಕ್ಷೇತ್ರವಾರು, ಸಮುದಾಯವಾರು ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಹಾಲಿ ಸಂಸದರು ಪರಭಾವಗೊಂಡರೆಕಾರಣವಾಗುವ ಅಂಶಗಳು, ಆಡಳಿತ ವಿರೋಧಿ ಅಲೆಯನ್ನು ಮರೆ ಮಾಚಿರುವುದು, ನಾನಾ ಒತ್ತಡ,ಪ್ರಭಾವ ಬಳಸಿ ಟಿಕೆಟ್ ಕೊಡಿಸಲಾಗಿತ್ತೇ ಎಂಬುದನ್ನೂ ಸೂಕ್ಷ್ಮವಾಗಿ ಅವಲೋಕಿಸಲಿದ್ದಾರೆ.
ಒಂದೊಮ್ಮೆ ಇಂತಹ ಪ್ರಕರಣಗಳಾದರೆ ರಾಜ್ಯನಾಯಕರ ನಿರ್ಧಾರ, ಆಯ್ಕೆ ಪ್ರಕ್ರಿಯೆಯಲ್ಲೇ ಏನಾದರೂ ಲೋಪವಿದೆಯೆ ಎಂಬುದನ್ನು ವರಿಷ್ಠರು ಸೂಕ್ಷ್ಮವಾಗಿ ಅವಲೋಕಿಸುವ ಸಾಧ್ಯತೆ ಇರುತ್ತದೆ ಎಂದು ಮೂಲಗಳು ಹೇಳಿವೆ.
ಕಾರ್ಯ ನಿರ್ವಹಣೆ ಪರಿಶೀಲನೆ: ಲೋಕಸಭಾ ಕ್ಷೇತ್ರವಾರು ಪ್ರಭಾರಿಗಳು, ಸಹ ಪ್ರಭಾರಿಗಳು ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದ್ದು,ಅದರಂತೆ ಆಯಾ ಕ್ಷೇತ್ರಗಳಲ್ಲಿ ಜವಾಬ್ದಾರಿ ಹೊತ್ತವರ ಕಾರ್ಯ ನಿರ್ವಹಣೆಯನ್ನೂ ಪರಿಶೀಲಿಸಲಾಗುತ್ತದೆ.
ಆ ಕ್ಷೇತ್ರಗಳಲ್ಲಿ ಸಂಘಟನೆ, ಪಕ್ಷ ಬಲವರ್ಧನೆ,ಮತದಾರರನ್ನು ಸೆಳೆಯಲು ನಡೆಸಿದ ಪ್ರಯತ್ನಗಳು, ಅದರ ಒಟ್ಟಾರೆ ಫಲಿತಾಂಶ, ಅಭ್ಯರ್ಥಿ ಸೋಲು, ಗೆಲುವಿಗೆ ಕಾರಣವಾದ ಅಂಶಗಳನ್ನೂ ವರಿಷ್ಠರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜರಡಿ ಹಿಡಿಯುವ ಚುನಾವಣೆ
ರಾಜ್ಯ ಬಿಜೆಪಿ ನಾಯಕರ ನಿರೀಕ್ಷೆಗಳಿಗೆಲ್ಲ ಬಹುತೇಕ ಸ್ಪಂದಿಸಿರುವ ವರಿಷ್ಠರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಇತಿಮಿತಿಗಳ ನಡುವೆಯೂ ರಾಜ್ಯ ನಾಯಕರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬೆವರು ಹರಿಸುತ್ತಿದ್ದಾರೆ. ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಸೂಕ್ತ ಸ್ಥಾನಮಾನ ನೀಡುವ ಬಾಗಿಲುಗಳು “ಬಂದ್’ಆಗುವುದೇ ಎಂಬ ಕುತೂಹಲವೂ ಮೂಡಿದೆ.
ಹಾಗಾಗಿ ಲೋಕಸಭಾ ಚುನಾವಣೆ ಫಲಿತಾಂಶವು ರಾಜ್ಯ ಬಿಜೆಪಿ ನಾಯಕರ ಪದೋನ್ನತಿಗೆ ಜರಡಿ ಹಿಡಿಯುವ ಚುನಾವಣೆ ಎಂದೇ ಹೇಳಲಾಗುತ್ತಿದೆ.
ಗೆಲ್ಲಲೇಬೇಕಾದ ಅನಿವಾರ್ಯತೆ
ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಚುನಾವಣಾ ಫಲಿತಾಂಶದ ಆಧಾರದ ಮೇಲೆಯೇ ನಾಯಕರ ಕಾರ್ಯ ಸಾಧನೆಯ ಮೌಲ್ಯಮಾಪನವೂ ಸಹಜ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಗೆಲ್ಲಲೇಬೇಕಾದ ಅನಿವಾರ್ಯತೆಯಿದ್ದು, ಆ ಹಿನ್ನೆಲೆಯಲ್ಲಿ ಪ್ರಯತ್ನ ನಡೆದಿದೆ. ಪ್ರಯತ್ನ, ಶ್ರಮ ವಹಿಸಿ ಕಾರ್ಯ ನಿರ್ವಹಿಸಿದವರಿಗೆ ಯಾವುದೇ ಸಮಸ್ಯೆಯಾಗದು ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
– ಎಂ. ಕೀರ್ತಿ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.